Tragic Accident: ಲಾರಿ - ಕಾರು ನಡುವೆ ಭೀಕರ ಅಪಘಾತ: ನಾಲ್ವರ ದಾರುಣ ಸಾವು..!

ಜುಲೈ 25, 2025 - 16:10
 0  19
Tragic Accident: ಲಾರಿ - ಕಾರು ನಡುವೆ ಭೀಕರ ಅಪಘಾತ: ನಾಲ್ವರ ದಾರುಣ ಸಾವು..!

ಮಡಿಕೇರಿ : ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ದೇವರಕೊಲ್ಲಿ ಗ್ರಾಮದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ನಾಲ್ವರು ಯುವಕರು ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಮಂಗಳೂರಿನಿಂದ ಮಡಿಕೇರಿಗೆ ಹೊರಟಿದ್ದ ಕಾರು, ಎದುರಿನಿಂದ ಬಂದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ನಡೆದಿದೆ.

ರಿಜ್ವಾನ್, ನಹೀದ್, ರಾಕಿಬ್, ನಿಹಾದ್ ಮೃತ ದುರ್ದೈವಿಗಳುಗುರವಾರ ಮಂಗಳೂರಿನ ಉಳ್ಳಾಲಕ್ಕೆ ತೆರಳಿ, ಹಿಂತಿರುಗುತ್ತಿದ್ದ ಕಾರು ಮಡಿಕೇರಿಗೆ ಬರುತ್ತಿದ್ದ ವೇಳೆ ದೇವರಕೊಲ್ಲಿಯಲ್ಲಿರುವ ರಸ್ತೆಯಲ್ಲಿ ಎದುರಿಗೆ ಬಂದ ಲಾರಿ ಕಾರಿಗೆ ಗುದ್ದಿದಿದೆ.

ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ನಾಲ್ಕು ಜನರಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಉಳಿದ ಇಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow