Water Price Hike: ಬಸ್, ಮೆಟ್ರೋ, ವಿದ್ಯುತ್ ಬಳಿಕ ಈಗ ನೀರಿನ ದರ ಏರಿಕೆ...! ಎಷ್ಟು ಗೊತ್ತಾ..?

ಬೆಂಗಳೂರು: ಬೆಂಗಳೂರಿಗರಿಗೆ ನೀರಿನ ದರ ಏರಿಕೆಯ ಬಿಸಿ ತಟ್ಟಲಿದೆ. ಈ ಬಗ್ಗೆ ವಿಧಾನ ಪರಿಷತ್‌ನಲ್ಲಿ ಶೂನ್ಯವೇಳೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿದ್ದಾರೆ. ಅಪಾರ್ಟ್‌ಮೆಂಟ್‌ಗಳಲ್ಲಿ ಕೆಲವರು ಯಾವುದೇ ಅನುಮತಿ ಇಲ್ಲದೇ ಬೋರ್‌ವೆಲ್ ಕೊರೆದಿದ್ದಾರೆ. ಅವರಿಗೆ ನೊಟೀಸ್ ಕೊಡುವ ಕೆಲಸ ಮಾಡಿದ್ದೇವೆ.
2014 ರಿಂದ ಇಲ್ಲಿವರೆಗೂ ನೀರಿನ ದರ ಏರಿಕೆ ಮಾಡಿಲ್ಲ. ಹೀಗಾಗಿ 1 ಪೈಸೆ ಆದರು ಜಾಸ್ತಿ ಮಾಡಬೇಕು ಅಂತ ತೀರ್ಮಾನ ಮಾಡಲಾಗಿದೆ. 6-7 ಪೈಸೆ ಜಾಸ್ತಿ ಮಾಡಬೇಕು ಅಂತ BWSSB ಅವರು ಮನವಿ ಮಾಡಿದ್ರು. ನಾನು 1 ಪೈಸೆ ಏರಿಕೆ ಮಾಡಲು ಒಪ್ಪಿಗೆ ಕೊಟ್ಡಿದ್ದೇನೆ ಎಂದು ವಿವರಿಸಿದರು.
ಈಗ ಬಿಬಿಎಂಪಿ ಬಜೆಟ್ ಮೀಟಿಂಗ್ ಮಾಡುತ್ತೇನೆ. ಆಗ ಬೆಂಗಳೂರಿನ ಎಲ್ಲಾ ಶಾಸಕರ ಸಭೆ ಕರೆದು ನಿರ್ಧಾರ ಮಾಡ್ತೀವಿ. ಅಂಡರ್ ಗ್ರೌಂಡ್ ವಾಟರ್ ಹೆಚ್ಚಿಸಲು ಎಲ್ಲಾ ಕೆರೆ ತುಂಬಿಸೋ ಯೋಚನೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ನಿಮ್ಮ ಪ್ರತಿಕ್ರಿಯೆ ಏನು?






