Gujarat: ಲೈಂಗಿಕ ಕ್ರಿಯೆ ಬಳಿಕ ತೀವ್ರ ರಕ್ತಸ್ರಾವದಿಂದ ಯುವತಿ ಸಾವು! ಹುಡುಗ ಏನ್ ಮಾಡ್ತಿದ್ದ ಗೊತ್ತಾ..?

ಅಹಮದಾಬಾದ್: ಮೊದಲ ವರ್ಷದ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಯುವತಿ ಗೆಳೆಯನೊಂದಿಗೆ ಲೈಂಗಿಕ ಕ್ರಿಯೆ ಮಾಡಿದ ಬಳಿಕ ಹೆಚ್ಚಿನ ರಕ್ತಸ್ರಾವದಿಂದ ಸಾವನ್ನಪ್ಪಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ. ಪ್ರೀತಿಸುತ್ತಿದ್ದ ಗೆಳೆಯನೊಂದಿಗೆ ಸೆಕ್ಸ್ ಮಾಡುವುದಕ್ಕಾಗಿ ಹೋಟೆಲ್ವೊಂದಕ್ಕೆ ತೆರಳಿದ್ದಳು. ಈ ವೇಳೆ ಗುಪ್ತಾಂಗದಲ್ಲಿ ರಕ್ತಸ್ರಾವ ಶುರುವಾಗಿತ್ತು. ಆಕೆಯ ಗೆಳೆಯ ಕೂಡಲೇ ವೈದ್ಯಕೀಯ ಸಹಾಯ ಪಡೆಯದೇ ಆನ್ಲೈನ್ನಲ್ಲಿ ಪರಿಹಾರ ಹುಡುಕಾಟ ನಡೆಸಲು ಶುರು ಮಾಡಿದ್ದ. ಸಂಭೋಗ ಸಮಯದಲ್ಲಿ ರಕ್ತಸ್ರಾವ ನಿಲ್ಲಿಸಲು ಆನ್ಲೈನ್ನಲ್ಲಿ ಸಲಹೆಗಳನ್ನು ಹುಡುಕಾಡುತ್ತಿದ್ದ. ಅಷ್ಟರಲ್ಲಿ ರಕ್ತಸ್ರಾವ ಇನ್ನೂ ಹೆಚ್ಚಾಗಿ ಯುವತಿ ಸಾವನ್ನಪ್ಪಿದ್ದಾಳೆ ಎಂದು ವರದಿಗಳು ಉಲ್ಲೇಖಿಸಿವೆ.
ಪರಿಹಾರ ಹುಡುಕುವ ಮುನ್ನ ತನ್ನ ಗುಪ್ತಾಂಗದಲ್ಲಿ ರಕ್ತಸ್ರಾವವಾಗುತ್ತಿದ್ದರೂ ಮತ್ತಷ್ಟು ಬಲವಾಗಿ ಸಂಭೋಗಕ್ಕೆ ಪ್ರಯತ್ನಿಸುತ್ತಿದ್ದ. ಬಳಿಕ ಬಟ್ಟೆಯನ್ನು ಬಳಸಿ ನಿಲ್ಲಿಸಲು ಪ್ರಯತ್ನಿಸಿದ್ದ. ಆದ್ರೆ ಅದು ಪ್ರಯೋಜನಕ್ಕೆ ಬರಲಿಲ್ಲ. ಸ್ವಲ್ಪ ಸಮಯದ ಬಳಿಕ ಯುವತಿ ಮೋರ್ಛೆ ಹೋಗಿದ್ದಳು. ಇದರಿಂದ ಗಾಬರಿಗೊಂಡ ಗೆಳೆಯ ಸ್ನೇಹಿತರೊಬ್ಬರಿಗೆ ಕರೆ ಮಾಡಿ, ಆಕೆಯನ್ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದ, ಅಲ್ಲಿಂದ ಪುನಃ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದ. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ಯುವತಿ ಸಾವಿನ ಬಳಿಕ ಯುವಕನನ್ನ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 105 ಮತ್ತು 238 ಅಡಿಯಲ್ಲಿ ಬಂಧಿಸಲಾಗಿದೆ.
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






