ಉದ್ಯೋಗದ ಮಾಹಿತಿ: NTPC ಗ್ರೀನ್ ಎನರ್ಜಿ ಲಿಮಿಟೆಡ್ ನಲ್ಲಿದೆ JOB, ಅರ್ಹರು ಅಪ್ಲೈ ಮಾಡಿ!

ಮಾರ್ಚ್ 30, 2025 - 08:04
 0  12
ಉದ್ಯೋಗದ ಮಾಹಿತಿ: NTPC ಗ್ರೀನ್ ಎನರ್ಜಿ ಲಿಮಿಟೆಡ್ ನಲ್ಲಿದೆ JOB, ಅರ್ಹರು ಅಪ್ಲೈ ಮಾಡಿ!

ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ NTPC ಗ್ರೀನ್ ಎನರ್ಜಿ ಲಿಮಿಟೆಡ್ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಇಲಾಖೆಯ ವೆಬ್​ಸೈಟ್​ನಿಂದ ಅರ್ಜಿ ಸಲ್ಲಿಕೆ ಮಾಡಬಹುದು

ವಿಜ್ಞಾನ ಅಥವಾ ಇಂಜಿನಿಯರಿಂಗ್ ವಿಭಾಗದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಗೆ ಈ ಹುದ್ದೆಗಳು ಅನ್ವಯ ಆಗುತ್ತವೆ. ಸುವರ್ಣಾವಕಾಶ ನಿಮ್ಮನ್ನು ಹುಡುಕಿಕೊಂಡು ಬಂದಿದ್ದು ಮಿಸ್ ಮಾಡಿಕೊಳ್ಳಬೇಡಿ. ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಿ.

ಉದ್ಯೋಗದ ಹೆಸರು ಹಾಗೂ ಎಷ್ಟು ಹುದ್ದೆಗಳು?

ಇಂಜಿನಿಯರ್ (ಆರ್​ಇ-ಸಿವಿಲ್)- 40
ಇಂಜಿನಿಯರ್ (ಆರ್​ಇ-ಎಲೆಕ್ಟ್ರಿಕಲ್)- 80
ಇಂಜಿನಿಯರ್ (ಆರ್​ಇ-ಮೆಕಾನಿಕಲ್)- 15
ಎಕ್ಸಕ್ಯೂಟಿವ್ (ಆರ್​ಇ-ಹೆಚ್​ಆರ್)- 07
ಎಕ್ಸಕ್ಯೂಟಿವ್ (ಆರ್​ಇ-ಫೈನಾನ್ಸ್​)- 26
ಇಂಜಿನಿಯರ್ (ಆರ್​ಇ-ಐಟಿ)- 04
ಇಂಜಿನಿಯರ್ (ಆರ್​ಇ- ಸಿ ಮತ್ತು ಎಂ)- 10

ಒಟ್ಟು 182 ಉದ್ಯೋಗಗಳು ಇವೆ

ಆಯ್ಕೆ ಮಾಡುವುದು ಹೇಗೆ?
ಅಭ್ಯರ್ಥಿಗಳ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಇದರಲ್ಲಿ ಆಯ್ಕೆ ಆದವರಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಪಾಸ್ ಆದವರಿಗೆ ಸಂದರ್ಶನ ನಡೆಸಿ ಉದ್ಯೋಗಕ್ಕೆ ಆಯ್ಕೆ ಮಾಡಲಾಗುತ್ತದೆ.

ಮುಖ್ಯವಾದ ದಿನಾಂಕ

ಅರ್ಜಿ ಸಲ್ಲಿಕೆ ಮಾಡುವ ದಿನಾಂಕ- 11 ಏಪ್ರಿಲ್ 2025
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ- 01 ಮೇ 2025

ಅಭ್ಯರ್ಥಿಗಳು ಸಂಸ್ಥೆಯ ವೆಬ್​ಸೈಟ್​ಗೆ ಭೇಟಿ ನೀಡಿ ವೆಬ್​ಪೇಜ್​ನಲ್ಲಿ ನೇಮಕಾತಿಯನ್ನು ಕ್ಲಿಕ್ ಮಾಡಿ. ಅಪ್ಲಿಕೇಷನ್ ವಿಂಡೋ ಓಪನ್ ಆಗುತ್ತದೆ. ಇದರಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow