IPL 2025: ಕೋಲ್ಕತ್ತಾ, ಚೆನ್ನೈ ಮಣಿಸಿದ್ದಾಯ್ತು: RCB ಮುಂದಿನ ಟಾರ್ಗೆಟ್ ಯಾರು?

ಮಾರ್ಚ್ 30, 2025 - 09:03
 0  11
IPL 2025: ಕೋಲ್ಕತ್ತಾ, ಚೆನ್ನೈ ಮಣಿಸಿದ್ದಾಯ್ತು:  RCB ಮುಂದಿನ ಟಾರ್ಗೆಟ್ ಯಾರು?

IPL 2025ರ ಟೂರ್ನಿ ಈಗಾಗಲೇ ಆರಂಭವಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬಲಿಷ್ಠವಾಗಿ ಕಾಣುತ್ತಿದೆ. ಅತ್ಯಂತ ಸ್ಟ್ರಾಂಗ್ ಆಗಿರುವ ಕೋಲ್ಕತ್ತಾ ಹಾಗೂ CSK ತಂಡ ಮಣಿಸಿ ಎರಡು ಗೆಲುವು ಸಾಧಿಸಿದೆ. 

ಇದರ ಬೆನ್ನಲ್ಲೇ ಆರ್​ಸಿಬಿ ಮುಂದಿನ ಟಾರ್ಗೆಟ್ ಯಾರು ಅಂತ ಯೋಚಿಸ್ತಿದ್ದೀರಾ!? ಎಸ್, ಬೆಂಗಳೂರಿನ ಮುಂದಿನ ಟಾರ್ಗೆಟ್ ಗುಜರಾತ್. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಏಪ್ರಿಲ್ 2 ರಂದು ಗುರಾತ್ ಟೈಟನ್ಸ್ ವಿರುದ್ಧ ಆರ್​ಸಿಬಿ ಮುಂದಿನ ಮ್ಯಾಚ್ ಆಡಲಿದೆ. ಎಂದಿನಂತೆ ಸಂಜೆ 7.30ಕ್ಕೆ ಪಂದ್ಯ ನಡೆಯಲಿದೆ. ಗುಜರಾತ್ ಟೈಟನ್ಸ್​ ಈಗಾಗಲೇ ಐಪಿಎಲ್​ನಲ್ಲಿ ಒಂದು ಪಂದ್ಯಗಳನ್ನ ಆಡಿದೆ. ಮಾರ್ಚ್​ 25 ರಂದು ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್​ ಸೋಲನ್ನು ಕಂಡಿದೆ. ಇಂದು ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಾಟ ನಡೆಸಲಿದೆ.

ಇನ್ನು, ಆರ್​ಸಿಬಿ ಇಲ್ಲಿಯವರೆಗೆ ಎರಡು ಪಂದ್ಯಗಳನ್ನ ಆಡಿದೆ. ಮೊದಲ ಪಂದ್ಯ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಆಡಿತ್ತು. ಈ ಪಂದ್ಯವನ್ನು ಆರ್​ಸಿಬಿ ಗೆದ್ದುಕೊಂಡಿದೆ. ಇನ್ನು ಶುಕ್ರವಾರ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಭರ್ಜರಿ ಅಂದರೆ 50 ರನ್​ಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಟಾಸ್​ ಗೆದ್ದು ಬ್ಯಾಟ್ ಮಾಡಿದ್ದ ಆರ್​ಸಿಬಿ 7 ವಿಕೆಟ್ ಕಳೆದುಕೊಂಡು 196 ರನ್​ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಸಿಎಸ್​ಕೆ 8 ವಿಕೆಟ್ ಕಳೆದುಕೊಂಡು 146 ರನ್​​ಗಳಿಸಿ ಸೋಲಿಗೆ ಶರಣಾಯ್ತು. ಆ ಮೂಲಕ ಎರಡು ಪಂದ್ಯಗಳನ್ನು ಗೆದ್ದಿರುವ ಆರ್​ಸಿಬಿ ಪಾಯಿಂಟ್ಸ್ ಟೇಬಲ್​ನಲ್ಲಿ ಮೊದಲ ಸ್ಥಾನದಲ್ಲಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow