ಮಚ್ಚು ಹಿಡಿದು ರೀಲ್ಸ್ ಕೇಸ್:‌ ನಗುನಗುತ್ತಾ ಜೈಲಿಂದ ಹೊರಬಂದ ವಿನಯ್-ರಜತ್..!

ಮಾರ್ಚ್ 29, 2025 - 12:01
 0  15
ಮಚ್ಚು ಹಿಡಿದು ರೀಲ್ಸ್ ಕೇಸ್:‌ ನಗುನಗುತ್ತಾ ಜೈಲಿಂದ ಹೊರಬಂದ ವಿನಯ್-ರಜತ್..!

ರಜತ್ ಕಿಶನ್ ಮತ್ತು ವಿನಯ್ ಗೌಡ ಅವರು ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ನಂತರ ಮಚ್ಚು ಹಿಡಿದು ರೀಲ್ಸ್ ಮಾಡಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದರು. ಇದೀಗ ನ್ಯಾಯಾಲಯ ಅವರಿಗೆ ಜಾಮೀನು ನೀಡಿದೆ. ಈ ಬೆನ್ನಲ್ಲೇ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ರಜತ್, ವಿನಯ್ ರಿಲೀಸ್ ಆಗಿದ್ದಾರೆ. 

ಲಾಂಗ್ ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣದಲ್ಲಿ ರಜತ್ ಮತ್ತು ವಿನಯ್‌ಗೆ ನಿನ್ನೆ (ಮಾ.28) 24ನೇ ಎಸಿಎಂಎಂ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿತ್ತು. ಪೊಲೀಸರ ಕೈಗೆ ಬೇಲ್ ಪ್ರತಿ ತಡವಾಗಿ ಸಿಕ್ಕ ಹಿನ್ನೆಲೆ ಇಂದು ರಜತ್ ಹಾಗೂ ವಿನಯ್ ಜೈಲಿನಿಂದ ಇಂದು ರಿಲೀಸ್ ಆಗಿದ್ದಾರೆ.

ರಿಲೀಸ್ ಆದ ಬೆನ್ನಲ್ಲೇ ಮಾಧ್ಯಮಕ್ಕೆ ಮಾತನಾಡಿದ ವಿನಯ್, ಎಲ್ಲರೂ ತುಂಬಾ ಸಪೋರ್ಟ್ ಮಾಡಿದ್ದೀರಾ. ಎಲ್ಲರೂ ಸೇರಿ ಮಾತಾಡೋಣ ಎಂದು ಹೇಳಿ ವಿನಯ್ ತೆರಳಿದ್ದಾರೆ. ಇನ್ನೂ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದಕ್ಕೆ ಶಸ್ತ್ರಾಸ್ತ್ರ ಕಾಯ್ದೆಯಡಿ ರಜತ್, ವಿನಯ್‌ರನ್ನು ಬಂಧಿಸಲಾಗಿತ್ತು. ಮಾ.26ರಿಂದ ಮಾ.28ರವರೆಗೆ 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೋರ್ಟ್ ಆದೇಶ ನೀಡಿತ್ತು. ನಿನ್ನೆ ಇಬ್ಬರಿಗೂ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow