Bigg Boss Kannada 12: ಬಿಗ್ ಬಾಸ್ ಮನೆ ಖಾಲಿ ಖಾಲಿ..! ಸ್ಪರ್ಧಿಗಳ ಮುಂದಿನ ನಡೆ ಏನು?

ಅಕ್ಟೋಬರ್ 8, 2025 - 09:02
 0  7
Bigg Boss Kannada 12: ಬಿಗ್ ಬಾಸ್ ಮನೆ ಖಾಲಿ ಖಾಲಿ..! ಸ್ಪರ್ಧಿಗಳ ಮುಂದಿನ ನಡೆ ಏನು?

ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸೂಕ್ತ ಅನುಮತಿ ಪಡೆಯದ ಕಾರಣದಿಂದ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಕಾರ್ಯಕ್ರಮ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಕೆಲವೇ ದಿನಗಳ ಹಿಂದೆ ಪ್ರಾರಂಭವಾಗಿದ್ದ ಈ ಜನಪ್ರಿಯ ಶೋ ಇದೀಗ ಕಾನೂನು ತೊಡಕಿನ ಕಾರಣದಿಂದ ನಿಲ್ಲುವಂತಾಗಿದೆ.

ಅಕ್ಟೋಬರ್ 7 ರಾಮನಗರ ಜಿಲ್ಲಾಡಳಿತ ಅಧಿಕಾರಿಗಳು ಶೋ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್‌ಗೆ ಬೀಗ ಹಾಕಿದ್ದಾರೆ. ಇದರ ಪರಿಣಾಮವಾಗಿ ಬಿಗ್ ಬಾಸ್ ಮನೆಯಲ್ಲಿ ಇದ್ದ ಎಲ್ಲ ಸ್ಪರ್ಧಿಗಳನ್ನು ಹೊರಗೆ ಕಳಿಸಲಾಗಿದೆ. ಆಯೋಜಕರು ಮುಂದಿನ ಕ್ರಮಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆ.

ಹಿಂದೆ 2021ರಲ್ಲಿ ನಡೆದ ‘ಬಿಗ್ ಬಾಸ್ ಕನ್ನಡ ಸೀಸನ್ 8’ ಕೂಡ ಕೊರೊನಾ ಹಾವಳಿಯಿಂದ ಮಧ್ಯದಲ್ಲೇ ನಿಲ್ಲಿಸಲಾಗಿತ್ತು. ನಂತರ ಪರಿಸ್ಥಿತಿ ಸಹಜವಾದ ಬಳಿಕ ಶೋವನ್ನು ಪುನಃ ಆರಂಭಿಸಲಾಯಿತು. ಇದೇ ರೀತಿಯಾಗಿ, ಕಾನೂನು ತೊಡಕು ನಿವಾರಣೆಗೊಂಡ ನಂತರ ಸೀಸನ್ 12 ಮರುಪ್ರಾರಂಭಗೊಳ್ಳುವ ಸಾಧ್ಯತೆ ಇದೆ. ಆದರೆ ಎಷ್ಟು ದಿನಗಳಲ್ಲಿ ಶೋ ಪುನಃ ಆರಂಭವಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಈ ಸೀಸನ್‌ನಲ್ಲಿ ಕಾಕ್ರೋಜ್ ಸುಧಿ, ಮಲ್ಲಮ್ಮ, ಅಶ್ವಿನಿ ಗೌಡ, ಮಾಳು ನಿಪನಾಳ, ಗಿಲ್ಲಿ ನಟ, ಕಾವ್ಯ ಶೈವ, ಮಂಜು ಭಾಷಿಣಿ, ಅಭಿಷೇಕ್, ಸತೀಶ್, ಚಂದ್ರಪ್ರಭ, ರಕ್ಷಿತಾ ಶೆಟ್ಟಿ, ರಾಶಿಕಾ, ಧ್ರುವಂತ್ ಮೊದಲಾದವರು ಸ್ಪರ್ಧಿಗಳಾಗಿದ್ದರು.

ಸದ್ಯಕ್ಕೆ ಎಲ್ಲ ಸ್ಪರ್ಧಿಗಳನ್ನು ರಾಮನಗರ ತಾಲೂಕಿನ ಬಿಡಿದಿಯಲ್ಲಿರುವ ಈಗಲ್ಟನ್ ರೆಸಾರ್ಟ್ಗೆ ಸ್ಥಳಾಂತರ ಮಾಡಲಾಗಿದೆ. ಅಲ್ಲಿ 12 ರೂಮ್ಗಳು ಬುಕ್ ಮಾಡಲಾಗಿದ್ದು, ಮುಂದಿನ ತೀರ್ಮಾನವಾಗುವ ತನಕ ಎಲ್ಲರನ್ನು ಅಲ್ಲಿಯೇ ಇರಿಸಲಾಗುತ್ತದೆ.

ಬಿಗ್ ಬಾಸ್ ಆಯೋಜಕರು ಕೋರ್ಟ್ ಮೊರೆ ಹೋಗುವ ಸಾಧ್ಯತೆಗಳಿವೆ. ನ್ಯಾಯಾಲಯ ನೀಡುವ ಆದೇಶದ ಮೇಲೆ ಶೋ ಮುಂದಿನ ಭವಿಷ್ಯ ನಿರ್ಧಾರವಾಗಲಿದೆ. ಇತ್ತೀಚೆಗೆ ಬೆಳಕಿನಿಂದ ಝಗಮಗಿಸುತ್ತಿದ್ದ ಬಿಗ್ ಬಾಸ್ ಮನೆ ಇದೀಗ ಸಂಪೂರ್ಣ ಖಾಲಿಯಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow