ಕಿಸ್ ಹುಡುಗಿಯ ಡೇಟಿಂಗ್ ಸುದ್ದಿ ನಿಜಾನಾ!? ಶ್ರೀಲೀಲಾಗೆ ‘ನೀನೇ ನನ್ನ ಜೀವನ’ ಎಂದ ಬಾಲಿವುಡ್ ನಟ!?

ಮಾರ್ಚ್ 29, 2025 - 20:04
 0  10
ಕಿಸ್ ಹುಡುಗಿಯ ಡೇಟಿಂಗ್ ಸುದ್ದಿ ನಿಜಾನಾ!? ಶ್ರೀಲೀಲಾಗೆ ‘ನೀನೇ ನನ್ನ ಜೀವನ’ ಎಂದ ಬಾಲಿವುಡ್ ನಟ!?

ಬಹುಭಾಷಾ ನಟಿ ಶ್ರೀ ಲೀಲಾ ಅವರು ಬಹುಬೇಡಿಕೆಯ ನಟಿ. ಕನ್ನಡದ ಕಿಸ್ ಮೂವಿ ಬಳಿಕ ಅವರಿಗೆ ಆಫರ್ ಮೇಲೆ ಆಫರ್ ಬರುತ್ತೀರೋದು ಸತ್ಯ. ಕ್ಯೂಟ್ ರಿಯಾಕ್ಷನ್, ಮಸ್ತ್ ಡ್ಯಾನ್ಸ್, ಹಾಗೂ ತಮ್ಮ ನಟನೆಯಿಂದಲೇ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. 

ಇಂತಹ ಬ್ಯೂಟಿ ಶ್ರೀಲೀಲಾ ಡೇಟಿಂಗ್ ಮಾಡುತ್ತಿರುವ ವಿಚಾರ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿ ಇತ್ತು. ಹೀಗಿರುವಾಗ ಶ್ರೀಲೀಲಾಗೆ ‘ನೀನೇ ನನ್ನ ಜೀವನ’ ಎಂದು ಕಾರ್ತಿಕ್ ಆರ್ಯನ್ ಹೇಳಿದ್ದಾರೆ.

ಕಾರ್ತಿಕ್ ಆರ್ಯನ್ ಹಾಗೂ ಕನ್ನಡದ ನಟಿ ಶ್ರೀಲೀಲಾ ಡೇಟಿಂಗ್ ನಿಜಕ್ಕೂ ಡೇಟಿಂಗ್ ಮಾಡ್ತಿದ್ದಾರಾ? ಎಂಬುದಕ್ಕೆ ಇನ್ನೂ ಸಿಕ್ಕಿಲ್ಲ. ಆದರೆ ಕಾರ್ತಿಕ್ ಸದ್ಯ ಶೇರ್ ಮಾಡಿರೋ ಪೋಸ್ಟ್ ಭಾರೀ ವೈರಲ್ ಆಗ್ತಿದೆ. ಪ್ರಕೃತಿ ಮಧ್ಯೆ ಕುಳಿತು ಶ್ರೀಲೀಲಾರನ್ನು ಕಾರ್ತಿಕ್ ನೋಡ್ತಿರೋ ಫೋಟೋ ಶೇರ್ 
ಮಾಡಿ, ಅದಕ್ಕೆ ‘ನೀನೇ ನನ್ನ ಜೀವನ’ ಎಂದು ಅಡಿಬರಹ ನೀಡಿದ್ದಾರೆ. ಇಬ್ಬರೂ ‘ಆಶಿಕಿ 3’ ಚಿತ್ರಕ್ಕಾಗಿ ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾರೆ.

ಆಶಿಕಿ 3’ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ರೊಮ್ಯಾನ್ಸ್ ಮಾಡಲಿದ್ದಾರೆ. ಈ ಸಿನಿಮಾದ ಚಿತ್ರೀಕರಣಕ್ಕಾಗಿ ಮಾ.25ರಂದೇ ಚಿತ್ರತಂಡದ ಜೊತೆ ಈ ಜೋಡಿ ಪಶ್ಚಿಮ ಬಂಗಾಳಕ್ಕೆ ಆಗಮಿಸಿದೆ. ಇಬ್ಬರೂ ಶೂಟಿಂಗ್‌ನಲ್ಲಿ ಭಾಗಿಯಾಗಿರೋ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಶೂಟಿಂಗ್ ಫೋಟೋ ಆಗಿದ್ರೂ ಇದು ರಿಯಲ್ ಅನ್ನೋವಷ್ಟರ ಮಟ್ಟಿಗೆ ಇಬ್ಬರ ಕೆಮಿಸ್ಟ್ರಿ ಕಂಡು ಬರುತ್ತಿದೆ ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow