ನನಗೆ ಎಂದಿಗೂ ನಂಬಿಕೆ ಮುಖ್ಯ: ಕೊಹ್ಲಿ ಜೊತೆಗಿನ ಸ್ನೇಹದ ಬಗ್ಗೆ ಧೋನಿ ಮಾತು!

ಮಾರ್ಚ್ 26, 2025 - 09:04
 0  11
ನನಗೆ ಎಂದಿಗೂ ನಂಬಿಕೆ ಮುಖ್ಯ: ಕೊಹ್ಲಿ ಜೊತೆಗಿನ ಸ್ನೇಹದ ಬಗ್ಗೆ ಧೋನಿ ಮಾತು!

ಸ್ಟಾರ್ ಕ್ರಿಕೆಟರ್ ವಿರಾಟ್ ಹಾಗೂ ನಾನು ಉತ್ತಮ ಸ್ನೇಹಿತರು ಎಂದು MS ಧೋನಿ ಹೇಳಿದ್ದಾರೆ. 

ಜಿಯೋ ಹಾಟ್​ಸ್ಟಾರ್ ನಡೆಸಿದ ಸಂದರ್ಶನದ ವೇಳೆ ಮಾತನಾಡಿದ ಅವರು, 2022ರಲ್ಲಿ ಟೆಸ್ಟ್​ ನಾಯಕತ್ವ ತೊರೆದ ಬಳಿಕ ಧೋನಿ ಹೊರೆತುಪಡಿಸಿ ಬೇರೆ ಯಾರೂ ನನಗೆ ಮಸೇಜ್ ಮಾಡಿರಲಿಲ್ಲ ಎಂಬ ಕೊಹ್ಲಿ ಹೇಳಿಕೆ ಬಗ್ಗೆ ಕೇಳಲಾಗಿತ್ತು. ಅದಕ್ಕೆ ಧೋನಿ, ಏನು ಮೆಸೇಜ್ ಕಳುಹಿಸಿದ್ದರು ಅನ್ನೋದನ್ನ ಬಹಿರಂಗಪಡಿಸಲು ನಿರಾಕರಿಸಿದರು. 

ನಾನು ಸಂಬಂಧದ ಬಗ್ಗೆ ಮಾತನಾಡುತ್ತೇನೆ. ಸಂದೇಶದ ಬಗ್ಗೆ ಅಲ್ಲ. ಅದನ್ನು ಹಾಗೆಯೇ ಇಟ್ಟುಕೊಳ್ಳಲು ಬಯಸುತ್ತೇನೆ. ಯಾವತ್ತೂ ನಂಬಿಕೆ ಮುಖ್ಯ ಎಂದಿದ್ದಾರೆ. ಹಿರಿಯ ಮತ್ತು ಕಿರಿಯರ ಮಧ್ಯೆ ಒಂದು ಗೆರೆ ಇರುತ್ತದೆ. ಆದರೆ ನಾನು ವಿರಾಟ್ ಕೊಹ್ಲಿ ಈಗಲೂ ಸ್ನೇಹಿತರು ಎಂದಿದ್ದಾರೆ. ವಿರಾಟ್ ಕೊಹ್ಲಿ 40-60 ರನ್​ಗಳಿಗೆ ತೃಪ್ತರಾಗುವುದಿಲ್ಲ. ಯಾವತ್ತೂ ಶತಕಗಳಿಸಬೇಕು. ಪಂದ್ಯದ ಕೊನೆಯವರೆಗೂ ಇರಬೇಕು ಬಯಸುತ್ತಾರೆ. ಅದುವೇ ಅವರ ಯಶಸ್ಸು ಎಂದು ಧೋನಿ ಬಣ್ಣಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow