ಕುಂಭಮೇಳಕ್ಕೆ ತೆರಳುತ್ತಿದ್ದ ವೇಳೆ ಭೀಕ ಅಪಘಾತ: ಬೆಳಗಾವಿಯ ಆರು ಮಂದಿ ಸಾವು!

ಬೆಳಗಾವಿ: ಇತ್ತಿಚೆಗಷ್ಟೆ ಉತ್ತರಪ್ರದೇಶದ ವಾರಣಾಸಿ ಬಳಿ ಅಪಘಾತ ಸಂಭವಿಸಿದ್ದ ಮಹಾ ಕುಂಭಮೇಳಕ್ಕೆ ತೆರಳಿದ್ದ ಬೀದರ್ ಮೂಲದ ಆರು ಮಂದಿ ಮೃತಪಟ್ಟಿದ್ದರು. ಇದೀಗ ಮತ್ತೆ ಬೀಕರ ಅಪಘಾತ ಸಂಭವಿಸಿ ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳಕ್ಕೆ ಹೋಗಿ ವಾಪಾಸ್ ಬರುತ್ತಿದ್ದ ಆರು ಮಂದಿ ಮಧ್ಯಪ್ರದೇಶದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತ ಪಟ್ಟಿರುವ ಘಟನೆ ನಡೆದಿದೆ.
ಮಧ್ಯಪ್ರದೇಶದ ಜಬಲ್ಪುರದಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಸಂಭವಿಸಿದೆ. ಕಳೆದ ಮಂಗಳವಾರ ಗೋಕಾಕ್‌ನಿಂದ ಎಂಟು ಮಂದಿ ಪ್ರಯಾಗ್‌ರಾಜ್‌ಗೆ ಕಾರ್‌ನಲ್ಲಿ ಹೊರಟಿದ್ದರು. ಎಂಟು ಜನರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು,
ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಾಲಚಂದ್ರ ಗೌಡರ್, ಸುನೀಲ್ ಶೇಡಶಾಳೆ, ಬಸವರಾಜ ಕುರ್ಣಿ, ಬಸವರಾಜ ದೊಡ್ಡಮನಿ, ಈರಣ್ಣ ಶೇಬಿನಕಟ್ಟಿ,ವಿರೂಪಾಕ್ಷ ಗುಮಟ್ಟಿ ಸಾವು ಕಂಡಿದ್ದರೆ. ಮುಸ್ತಾಕ್, ಸದಾಶಿವ ಇಬ್ಬರಿಗ ಗಂಭೀರ ಗಾಯವಾಗಿದೆ.
ಸೋಮವಾರ ಬೆಳಗ್ಗೆ ವೇಗವಾಗಿ ಬರುತ್ತಿದ್ದ ಕಾರು, ಜಬಲ್ಪುರ ಜಿಲ್ಲೆಯ ಹೆದ್ದಾರಿಯಲ್ಲಿ ಎದುರುಗಡೆಯಿಂದ ಬರುತ್ತಿದ್ದ ಖಾಸಗಿ ಬಸ್‌ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ 6 ಮಂದಿ ಸ್ಥಳದಲ್ಲಿಯೇ ಸಾವು ಕಂಡಿದ್ದರೆ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






