ಟಿಕ್ ಟಾಕ್ ವಿಡಿಯೋ ಪೋಸ್ಟ್ ಮಾಡಿದ್ದಕ್ಕೆ 15 ವರ್ಷದ ಮಗಳನ್ನೇ ಗುಂಡಿಕ್ಕಿ ಕೊಂದ ತಂದೆ..!

ಚೀನಾದ ಮೂಲಕ ಟಿಕ್ ಟಾಕ್ ಆ್ಯಪ್ ಅನ್ನು ಭಾರತದಲ್ಲಿ ಬ್ಯಾನ್ ಮಾಡಲಾಗಿದೆ. ಗೂಗಲ್ ಹಾಗೂ ಪ್ಲೇಸ್ಟೋರ್ ಮೂಲಕ ಟಿಕ್ ಅನ್ನು ಕೈಬಿಡಲಾಗಿದೆ. ಆದರೆ ಟಿಕ್ಟಾಕ್ ಅಭಿಮಾನಿಗಳಂತೂ ಆ್ಯಪ್ ಅನ್ನು ಡೌನ್ಲೋಡ್ ಮಾಡುವ ಪ್ರಮೇಯ ಕಡಿಮೆಯಾಗಿಲ್ಲ. ಅದಲ್ಲದೆ ಟಿಕ್ ಟಾಕ್ ವಿಡಿಯೋ ಮೂಲಕ ಸಾಕಷ್ಟು ಅನಾಹುತಗಳು ಸಹಾ ಆಗುತ್ತಿವೆ.
ಇಲ್ಲೊಬ್ಬ ವ್ಯಕ್ತಿ ಟಿಕ್‌ಟಾಕ್‌ನಲ್ಲಿ ವೀಡಿಯೋ ಪೋಸ್ಟ್ ಮಾಡಿದ್ದಕ್ಕಾಗಿ ವ್ಯಕ್ತಿಯೊಬ್ಬ ತನ್ನ 15 ವರ್ಷದ ಮಗಳನ್ನೇ ಗುಂಡಿಕ್ಕಿ ಕೊಂದಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. 28 ವರ್ಷಗಳ ಹಿಂದೆ ಅಮೆರಿಕದಲ್ಲಿ ನೆಲೆಸಿದ್ದ ವ್ಯಕ್ತಿ ಇತ್ತೀಚೆಗಷ್ಟೇ ತನ್ನ ಕುಟುಂಬವನ್ನು ಪಾಕಿಸ್ತಾನಕ್ಕೆ ಕರೆತಂದಿದ್ದ.
ತನ್ನ ಎಚ್ಚರಿಕೆ ಹೊರತಾಗಿಯೂ ಮಗಳು ವಿಡಿಯೋ ಪೋಸ್ಟ್ ಮಾಡುವುದನ್ನು ಮುಂದುವರಿಸಿದ್ದಳು. ಇದರಿಂದ ಗುಂಡಿಕ್ಕಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಟಿಕ್ ಟಾಕ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಕ್ಕಾಗಿ ಆಕೆಯ ಅಪ್ಪ, ಚಿಕ್ಕಪ್ಪ ಸೇರಿ ಗುಂಡಿಕ್ಕಿ ಕೊಂದಿದ್ದಾರೆ. ಸದ್ಯ ಆರೋಪಿಯನ್ನು ಮರ್ಯಾದಾ ಹತ್ಯೆ ಆರೋಪದ ಅಡಿಯಲ್ಲಿ ಪೊಲೀಸರು ಬಂದಿಸಿದ್ದು, 10 ದಿನ ಕಸ್ಟಡಿಗೆ ಪಡೆದಿದ್ದಾರೆ.
ಈಗಾಗಲೇ ಪೊಲೀಸರು ತನಿಖೆ ಮುಂದುವರಿಸಿದ್ದು, ಮೃತ ಬಾಲಕಿಯ ಕಿರಿಯ ಸಹೋದರನನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೇ ಅಮೆರಿಕದಲ್ಲಿ ಕಠಿಣ ಕಾನೂನುಗಳು ಇರುವ ಹಿನ್ನೆಲೆ ಹುಡುಗಿಯನ್ನು ಕೊಲ್ಲುವುದಕ್ಕಾಗಿಯೇ ಆರೋಪಿ ತಂದೆ ಪಾಕಿಸ್ತಾನಕ್ಕೆ ಕರೆದುಕೊಂಡು ಬಂದಿದ್ದನೇ ಅನ್ನೋ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






