ಪ್ರಜ್ವಲ್ ರೇವಣ್ಣ ತೀರ್ಪು ಮುಂದೂಡಿಕೆ: ಕೋರ್ಟ್ ತೀರ್ಪಿನ ಮೇಲೆ ನಿಂತಿದೆ ರಾಜಕೀಯ ಭವಿಷ್ಯ..!

ಜುಲೈ 30, 2025 - 12:00
ಜುಲೈ 30, 2025 - 12:13
 0  13
ಪ್ರಜ್ವಲ್ ರೇವಣ್ಣ ತೀರ್ಪು ಮುಂದೂಡಿಕೆ: ಕೋರ್ಟ್ ತೀರ್ಪಿನ ಮೇಲೆ ನಿಂತಿದೆ ರಾಜಕೀಯ ಭವಿಷ್ಯ..!

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ. ಸದ್ಯ ವಿಚಾರಣೆಯನ್ನು ಆಗಸ್ಟ್ 1ಕ್ಕೆ ಮುಂದೂಡಿಕೆ ಮಾಡಿ ಆದೇಶ ನೀಡಿದೆ.  ಕೋರ್ಟ್ ನಲ್ಲಿ ಹೊಳೆನರಸೀಪುರ ಫಾರ್ಮ್ ಹೌಸ್ ತೋರಿಸಲು ಗೂಗಲ್ ಮ್ಯಾಪ್ ಬಳಕೆ ಮಾಡಲಾಗಿತ್ತು.

ಗೂಗಲ್ ಮ್ಯಾಪ್ ಆಧಾರಿಸಿ ಎರಡು ಕಡೆ ವಾದ ಮಂಡನೆ ಮಾಡಿದ್ದಾರೆ. ಸದ್ಯ ವಿಚಾರಣೆಯನ್ನು ಆಗಸ್ಟ್ 1ಕ್ಕೆ ಮುಂದೂಡಿಕೆ ಮಾಡಿದೆ. .ಇದೆ ವೇಳೆ ಕೋರ್ಟ್ ಮುಂದೆ ಪ್ರಜ್ವಲ್ ರೇವಣ್ಣ ಹಾಜರಾಗಿದ್ದರು. ಪದೇ ಪದೇ ಕಣ್ಣು ಮುಚ್ಚಿ ಪ್ರಜ್ವಲ್ ರೇವಣ್ಣ ಮಂತ್ರ ಪಠಿಸುತ್ತಿದ್ದರು.

ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಕುಡಿಯೊಂದು ಕ್ರಿಮಿನಲ್ ರೇಪ್ ಕೇಸ್​ನಲ್ಲಿ ಅಪರಾಧಿಯಾಗುತ್ತೋ, ಇಲ್ಲವೋ ಅನ್ನೋದು ಆಗಸ್ಟ್ 1ಕ್ಕೆ  ನಿರ್ಧಾರವಾಗಲಿದೆ. ಪ್ರಜ್ವಲ್ ರೇವಣ್ಣಗೆ ನಾಲ್ಕು ವರ್ಷಕ್ಕಿಂತ ಹೆಚ್ಚಿನ ವರ್ಷ ಜೈಲುಶಿಕ್ಷೆಯಾದರೇ, ಪ್ರಜಾಪ್ರತಿನಿಧಿ ಕಾಯಿದೆಯ ಪ್ರಕಾರ, ಆದಾದ ನಂತರ 6 ವರ್ಷಗಳವರೆಗೂ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.

ಹೀಗಾಗಿ ಆಗಸ್ಟ್ 1ಕ್ಕೆ  ಪ್ರಜ್ವಲ್ ಅಪರಾಧಿಯಾಗ್ತಾರೋ, ಖುಲಾಸೆಯಾಗ್ತಾರೋ ಎಂಬುದರ ಮೇಲೆ ಅವರ ರಾಜಕೀಯ ಭವಿಷ್ಯ ನಿಂತಿದೆ. ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಂಸದ ಪ್ರಜಲ್ವ್ ರೇವಣ್ಣ ಕಳೆದ ಕಳೆದ 14 ತಿಂಗಳಿನಿಂದ ಸೆರೆಮನೆಯಲ್ಲಿ ಬಂಧಿಯಾಗಿದ್ದಾರೆ. ಆಗಸ್ಟ್ 1ಕ್ಕೆ  ಪ್ರಜ್ವಲ್​ ರೇವಣ್ಣ ಪಾಲಿಗೆ ಮಹತ್ವದ ದಿನವಾಗಲಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow