ಸಿನಿರಸಿಕರಿಗೆ ಸಿಕ್ತು ಗುಡ್ ನ್ಯೂಸ್: ಈ ದಿನ ಯಾವ ಸಿನಿಮಾ ನೋಡುದ್ರೂ ಜಸ್ಟ್ 99ರೂ...!

ಸಾಮಾನ್ಯ ಜನರು ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ನೋಡೋದೆ ಕಷ್ಟ ಕಷ್ಟವಾಗಿದೆ. ಸದ್ಯ ಸಿನಿಮಾ ಟಿಕೆಟ್ ದರ ಹೆಚ್ಚಿದೆ. ಮಲ್ಟಿಪ್ಲೆಕ್ಸ್‌ಗಳು ಟಿಕೆಟ್ ದರದಲ್ಲಿ ಪ್ರೇಕ್ಷಕರ ಜೇಬಿಗೆ ಕತ್ತರಿ ಬೀಳುತ್ತೆ. ಕುಟುಂಬ ಸಮೇತ ಸಿನಿಮಾ ನೋಡಲು ಜನ ಹೆದರುತ್ತಾರೆ. ಹೊಸ ಸಿನಿಮಾಗಳು ಬಿಡುಗಡೆಯಾದಾಗ ಟಿಕೆಟ್ ದರವನ್ನು ಸುಮಾರು 100 ರಿಂದ 120 ರೂಪಾಯಿಗಳಷ್ಟು ಹೆಚ್ಚಿಸುತ್ತಾರೆ. ಮಲ್ಟಿಪ್ಲೆಕ್ಸ್ ನಲ್ಲಿ ಸಿನಿಮಾ ನೋಡಲು ಬಯಸುವವರಿಗೆ ಗುಡ್ ನ್ಯೂಸ್ ಸಿಕ್ಕಿದೆ.
ದೇಶಾದ್ಯಂತ ಇರುವ ಕೆಲ ಪಿವಿಆರ್ಗಳಲ್ಲಿ ಶುಕ್ರವಾರ ಬಿಡುಗಡೆ ಆಗುವ ಸಿನಿಮಾಗಳ ಟಿಕೆಟ್ ದರ ಕೇವಲ 99 ರೂಪಾಯಿ ಆಗಿರುತ್ತದೆ. ಇದಕ್ಕೆ ಮುಖ್ಯ ಕಾರಣ ಇಷ್ಟೇ, ಜನವರಿ 27 ಅಂದರೆ ಶುಕ್ರವಾರ ಸಿನಿಮಾ ಪ್ರೇಮಿಗಳ ದಿನ ಎಂದು ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ ಪಿವಿಆರ್ಗಳಲ್ಲಿ ತೆರೆ ಕಾಣುವ ಸಿನಿಮಾಗಳ ಟಿಕೆಟ್ ಬೆಲೆ 99 ರೂಪಾಯಿ ಆಗಿರುತ್ತದೆ
ಬಾಲಿವುಡ್ ಬ್ಯೂಟಿ ಹಾಗೂ ಸಂಸದೆ ಕಂಗನಾ ರಣಾವತ್ ಅಭಿನಯದ ಎಮರ್ಜೆನ್ಸಿ ಸಿನಿಮಾ ಹಾಗೂ ಅಭಿಷೇಕ್ ಶರ್ಮಾ ನಿರ್ದೇಶನದಲ್ಲಿ ಅಮನ್ ದೇವಗನ್ ಮತ್ತು ರಾಶಾ ಥಡಾನಿ ಅಭಿನಯದ ಆಜಾದ್ ಮೂವಿ ತೆರೆ ಕಾಣುತ್ತಿವೆ. ಈ ಸಿನಿಮಾಗಳ ಟಿಕೆಟ್ ಜನವರಿ 17 ರಂದು ಮಾತ್ರ, 99 ರೂಪಾಯಿಗೆ ಲಭ್ಯ ಇರುತ್ತವೆ ಎನ್ನಲಾಗಿದೆ.
ಇಂದು ರಿಲೀಸ್ ಆಗುವ ಎಲ್ಲ ಸಿನಿಮಾಗಳ ಟಿಕೆಟ್ ದರ 99 ರೂಪಾಯಿ ಆದರೆ ಉಳಿದ ಹಣವನ್ನು ಸಬ್ಸಿಡಿ ರೂಪದಲ್ಲಿ ಪಡೆಯುತ್ತವೆ. ಹೀಗಾಗಿ ಸಿನಿಮಾ ಪ್ರೇಮಿಗಳು ನಾಳೆ ಒಂದು ದಿನ ಪಿವಿಆರ್ಗಳಲ್ಲಿ ಕಡಿಮೆ ಬೆಲೆಯಲ್ಲಿ ಟಿಕೆಟ್ ಪಡೆದು ಸಿನಿಮಾ ನೋಡಿ ಎಂಜಾಯ್ ಮಾಡಬಹುದು.
ನಿಮ್ಮ ಪ್ರತಿಕ್ರಿಯೆ ಏನು?






