ಹೊಸ ಬೈಕ್, ಕಾರು ಖರೀದಿಸುವವರಿಗೆ ಬಿಗ್ ಶಾಕ್ ಕೊಟ್ಟ ಸರ್ಕಾರ: ಇನ್ಮುಂದೆ ರಿಜಿಸ್ಟ್ರೇಷನ್ ದರ ಹೆಚ್ಚಳ!

ಜನವರಿ 17, 2025 - 21:02
 0  11
ಹೊಸ ಬೈಕ್, ಕಾರು ಖರೀದಿಸುವವರಿಗೆ ಬಿಗ್ ಶಾಕ್ ಕೊಟ್ಟ ಸರ್ಕಾರ: ಇನ್ಮುಂದೆ ರಿಜಿಸ್ಟ್ರೇಷನ್ ದರ ಹೆಚ್ಚಳ!

ಬೆಂಗಳೂರು:- ಕರ್ನಾಟಕದಲ್ಲಿ ಈಗಾಗಲೇ ಬಸ್ ಟಿಕೆಟ್ ದರ ಹೆಚ್ಚಳ ಮಾಡಿ ಶಾಕ್ ಕೊಟ್ಟಿರುವ ರಾಜ್ಯ ಸರ್ಕಾರವು, ಇದೀಗ ಹೊಸ ಕಾರು, ಬೈಕ್ ಖರೀದಿ ನೋಂದಣಿ ಶುಲ್ಕ ಹೆಚ್ಚಳ ಮಾಡುವ ಮೂಲಕ ಮತ್ತೊಂದು ಬರೆ ನೀಡಲು ಮುಂದಾಗಿದೆ. 

ಕೆಲವೇ ದಿನಗಳಲ್ಲಿ ಸೆಸ್ ಜಾರಿಯಾಗಲಿದ್ದು,ವಾಹನ ಖರೀದಿ ಮೇಲೆ ಮತ್ತಷ್ಟು ಹೊರೆ ಬೀಳಲಿದೆ. ಈಗಾಗಲೇ ಹೊಸ ವರ್ಷದಿಂದ ಅಟೊಮೊಬೈಲ್‌ ಕಂಪನಿಗಳು ತಮ್ಮ ದ್ವಿಚಕ್ರ ವಾಹನ ಮತ್ತು ಕಾರುಗಳ ದರವನ್ನು ಏರಿಕೆ ಮಾಡಿದೆ. ಈಗ ರಾಜ್ಯ ಸರ್ಕಾರ ಕಾರ್ಮಿಕ ಸಾಮಾಜಿಕ ಭದ್ರತೆ ನಿಧಿಗಾಗಿ ದ್ವಿಚಕ್ರ ವಾಹನ, ಸಾರಿಗೇತರ ಮೋಟಾರ್ ಕಾರುಗಳ ನೋಂದಣಿ ವೇಳೆ ತಲಾ 500 ರೂ. ಮತ್ತು 1,000 ರೂ. ಉಪಕರ ವಿಧಿಸಲು ಮುಂದಾಗಿದೆ.

ದೇಶದಲ್ಲಿ ಸರಕು ಮತ್ತು ಸಾಗಣೆ ತೆರಿಗೆ ಜಾರಿಗೆ ಬಂದ ಮೇಲೆ ತೆರಿಗೆಯ ಬಹುಪಾಲು ಹಣ ಕೇಂದ್ರ ಸರ್ಕಾರದ ತಿಜೋರಿ ಸೇರುತ್ತಿದೆ. ರಾಜ್ಯಗಳು ಅಗತ್ಯ ಖರ್ಚನ್ನು ಸರಿದೂಗಿಸಿಕೊಳ್ಳಲು ಕೆಲವೇ ಕೆಲವು ತೆರಿಗೆಗಳನ್ನು ಮಾತ್ರ ಹೆಚ್ಚಿಸಬಹುದಾಗಿದೆ. ಈ ಹಿನ್ನೆಲೆಯ್ಲಲಿ ರಾಜ್ಯ ಸರ್ಕಾರ ಈಗ ಕಾರು ಮತ್ತು ಬೈಕ್ ಖರೀದಿಯ ನೋಂದಣಿ ತೆರಿಗೆಯನ್ನು ಹೆಚ್ಚಳ ಮಾಡಲು ನಿರ್ಧರಿಸಿದೆ. 

ಸದ್ಯದ ಮಾಹಿತಿಗಳ ಪ್ರಕಾರ ರಾಜ್ಯ ಸಾರಿಗೆ ಇಲಾಖೆಯು ಹೊಸದಾಗಿ ಕಾರು ಮತ್ತು ಬೈಕ್ ಖರೀದಿಸುವವರಿಗೆ ಮುಂದಿನ ತಿಂಗಳಿನಿಂದ ರಿಜಿಸ್ಟ್ರೇಷನ್ ದರ ಏರಿಕೆ ಮಾಡುತ್ತಿದೆ. ಇತ್ತೀಚೆಗಷ್ಟೇ ಬಸ್ ಟಿಕೆಟ್ ದರ ಏರಿಕೆ ಮಾಡಿದ್ದ ಸಾರಿಗೆ ಇಲಾಖೆ ಈಗ ರಿಜಿಸ್ಟ್ರೇಷನ್ ದರ ಏರಿಸಿ ಗಾಯದ ಮೇಲೆ ಬರೆ ಎಳೆಯುತ್ತಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow