ಬೆಂಗಳೂರಿಗೆ ಬಂತು ಆನೆಬಲ: RCB ತಂಡಕ್ಕೆ ಇಂಗ್ಲೆಂಡ್ ಆಟಗಾರ್ತಿ ಎಂಟ್ರಿ!

ಜನವರಿ 18, 2025 - 09:14
 0  9
ಬೆಂಗಳೂರಿಗೆ ಬಂತು ಆನೆಬಲ: RCB ತಂಡಕ್ಕೆ ಇಂಗ್ಲೆಂಡ್ ಆಟಗಾರ್ತಿ ಎಂಟ್ರಿ!

ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮಹಿಳಾ ತಂಡಕ್ಕೆ ಇಂಗ್ಲೆಂಡ್ ಆಟಗಾರ್ತಿ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ತಂಡಕ್ಕೆ ಆನೆ ಬಲ ಬಂದಂತಾಗಿದೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂಗ್ಲಿಷ್‌ ಆಫ್‌ ಸ್ಪಿನ್ನರ್‌ ಒಬ್ಬರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಮುಂಬರುವ ಮಹಿಳಾ ಪ್ರೀಮಿಯರ್ ಲೀಗ್‌ ಗಾಗಿ ಗಾಯಗೊಂಡಿರುವ ಸೋಫಿ ಮೊಲಿನೆಕ್ಸ್ ಬದಲಿಗೆ ಇಂಗ್ಲಿಷ್ ಆಫ್ ಸ್ಪಿನ್ನರ್ ಚಾರ್ಲಿ ಡೀನ್ ಅವರನ್ನು ಆಯ್ಕೆ ಮಾಡಿಕೊಂಡಿದೆ ಎಂದು ಫ್ರಾಂಚೈಸಿ ಗುರುವಾರ ಪ್ರಕಟಿಸಿದೆ.

ಸೀಸನ್-3 ಆರಂಭಕ್ಕೂ ಮುನ್ನವೇ RCB ತಂಡದ ಸ್ಟಾರ್ ಆಟಗಾರ್ತಿ ಸೋಫಿ ಮೊಲಿನಿಯಕ್ಸ್ ಹೊರಬಿದ್ದಿದ್ದಾರೆ. ಮೊಣಕಾಲು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಮೊಲಿನಿಯಕ್ಸ್ ಇಡೀ ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಇದರ ಬೆನ್ನಲ್ಲೇ ಆರ್​ಸಿಬಿ ಬದಲಿ ಆಟಗಾರ್ತಿಯನ್ನು ಆಯ್ಕೆ ಮಾಡಿಕೊಂಡಿದೆ

24 ವರ್ಷದ ಚಾರ್ಲಿ ಡೀನ್ ಈ ಹಿಂದೆ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇಂಗ್ಲೆಂಡ್ ಆಟಗಾರ್ತಿಯನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ.

ಇದೀಗ ಸೋಫಿ ಮೊಲಿನಿಯಕ್ಸ್ ಹೊರಬಿದ್ದ ಬೆನ್ನಲ್ಲೇ ಆರ್​ಸಿಬಿ, ಇಂಗ್ಲೆಂಡ್ ತಂಡದ ಬೌಲಿಂಗ್ ಆಲ್​ರೌಂಡರ್​ನನ್ನು ತಂಡಕ್ಕೆ ಸೇರಿಸಿಕೊಂಡಿದೆ. ಇನ್ನು ಇಂಗ್ಲೆಂಡ್ ಹಾಗೂ ಲಂಡನ್ ಸ್ಪಿರಿಟ್ ತಂಡಗಳ ಪರ ಕಣಕ್ಕಿಳಿದಿರುವ ಚಾರ್ಲಿ ಡೀನ್​ಗೆ ಇದು ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಲೀಗ್ ಎಂಬುದು ವಿಶೇಷ.

ಇಂಗ್ಲೆಂಡ್ ಪರ 36 ಟಿ20 ಪಂದ್ಯಗಳನ್ನಾಡಿರುವ ಚಾರ್ಲಿ ಡೀನ್ ಈವರೆಗೆ 46 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಇದರೊಂದಿಗೆ 12 ಇನಿಂಗ್ಸ್​ಗಳಲ್ಲಿ 135 ರನ್ ಕಲೆಹಾಕಿದ್ದಾರೆ. ಹೀಗಾಗಿ ಸೋಫಿ ಮೊಲಿನಿಯಕ್ಸ್ ಬದಲಿಯಾಗಿ ಚಾರ್ಲಿ ಡೀನ್ ಆರ್​ಸಿಬಿ ತಂಡದ ಉತ್ತಮ ಆಯ್ಕೆ ಎನ್ನಬಹುದು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow