ಬೆಂಗಳೂರಲ್ಲಿ ನಿಲ್ಲದ ಬೀದಿ ಪುಂಡರ ಹಾವಳಿ: ಮಹಿಳೆಯರಿಗೆ ಮುತ್ತಿಟ್ಟು ಎಸ್ಕೇಪ್ ಅಗುತ್ತಿದ್ದ ಕಾಮುಕ ಅರೆಸ್ಟ್..!

ಜೂನ್ 10, 2025 - 16:01
 0  27
ಬೆಂಗಳೂರಲ್ಲಿ ನಿಲ್ಲದ ಬೀದಿ ಪುಂಡರ ಹಾವಳಿ: ಮಹಿಳೆಯರಿಗೆ ಮುತ್ತಿಟ್ಟು ಎಸ್ಕೇಪ್ ಅಗುತ್ತಿದ್ದ ಕಾಮುಕ ಅರೆಸ್ಟ್..!

ಬೆಂಗಳೂರು: ರಾಜಧಾನಿ ಬೆಂಗಳೂರು ಹೆಣ್ಮಕ್ಕಳಿಗೆ ಸೇಫ್ಸಿಟಿ ಎಂಬ ಮಾತಿದೆ. ಆದರೆ ಕೆಲ ಬೀದಿ ಪುಂಡರು ಹೆಸರನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಜನಜಂಗುಳಿ ಮಧ್ಯೆಯೇ ಯಾರ ಭಯವು ಇಲ್ಲದೇ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಹಿಂದೊಮ್ಮೆ ನಮ್ಮ ಮೆಟ್ರೋ ರೈಲಿನಲ್ಲಿ ಯುವತಿಯರಿಗೆ ಬೇಕಂತೆ ಸ್ಪರ್ಶಿಸಿ ವಿಕೃತಿ ಮೆರೆದಿದ್ದರು. ಇದೀಗ ವಾಕಿಂಗ್ ಮಾಡುತ್ತಿದ್ದ ಇಬ್ಬರು ಪ್ರತ್ಯೇಕ ಮಹಿಳೆಯರನ್ನು ಸಾರ್ವಜನಿಕ ಸ್ಥಳದಲ್ಲಿಯೇ ಗಟ್ಟಿಯಾಗಿ ತಬ್ಬಿಕೊಂಡು ತುಟಿಗೆ ಮುತ್ತಿಡುತ್ತಿದ್ದ ಕಾಮುಕನನ್ನು ಅರೆಸ್ಟ್ ಮಾಡಿದ್ದಾರೆ. ಮದನ್ ಬಂಧಿತ ಕಾಮುಕ ಎಂದು ಗುರುತಿಸಲಾಗಿದೆ.

ವಾಯು ವಿಹಾರ ಮಾಡುವ ಪ್ರಮುಖ ರಸ್ತೆಗಳನ್ನು ಕಾಮುಕನ ಅಟ್ಟಹಾಸ ಮಿತಿ ಮೀರಿತ್ತು. ಪುಲಕೇಶಿ ನಗರದಲ್ಲಿ ಇಬ್ಬರು ಮಹಿಳೆಯರಿಗೆ ಮುತ್ತುಕೊಟ್ಟು ದೌರ್ಜನ್ಯ ಎಸಗಿದ್ದ, ಮೊಮೋಸ್ ಅಂಗಡಿ ಬಳಿ ನಿಂತಿದ್ದ ಯುವತಿಯ ತುಟಿಗೆ ಮುತ್ತಿಟ್ಟು ಅಲ್ಲಿಂದ ಎಸ್ಕೇಪ್ ಆಗಿದ್ದ ಕಾಮುಕ ಮದನ್, ಅದೇ ದಿನ ಪಾರ್ಕ್ ನಲ್ಲಿ ಮಹಿಳೆ ಒರ್ವರನ್ನು ಹಿಂಬಾಲಿಸಿ ಆಕೆಗೂ ಮುತ್ತಿಟ್ಟು ತಬ್ಬಿಕೊಂಡಿದ್ದ. ಸಂಬಂಧ ಪುಲಕೇಶಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಜೂನ್ 6 ರಂದು ವಾಯು ವಿಹಾರಕ್ಕೆ ಕುಟುಂಬದೊಂದಿಗೆ ಬಂದಿದ್ದ ಮಹಿಳೆಯೊಬ್ಬರ ಬಳಿ ಬಂದು ತಬ್ಬಿಕೊಂಡು ಬಲವಂತವಾಗಿ ತುಟಿಗೆ ಮುತ್ತು ಕೊಟ್ಟಿದ್ದ. ಬಳಿಕ ಇದೇ ಪಾರ್ಕ್ನಲ್ಲಿ ವಾಕಿಂಗ್ ಮಾಡುತ್ತಿದ್ದ ಇನ್ನೊಬ್ಬ ಮಹಿಳೆಯನ್ನೂ ತಬ್ಬಿ ಮುತ್ತು ಕೊಟ್ಟಿದ್ದಾನೆ. ಸಂಬಂಧ ಮಹಿಳೆ, ಪುಲಕೇಶಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿ ಮೇರೆಗೆ ಪೊಲೀಸರು ಕಾಮುಕ ಮದನ್ಗಾಗಿ ಹುಡುಕಾಟ ನಡೆಸುತ್ತಿದ್ದಾಗ ಬಾಣಸವಾಡಿಯಲ್ಲಿ ಸಿಕ್ಕಿಬಿದ್ದಿದ್ದಾನೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow