Dr Puneeth Rajkumar: ನಾಳೆ “ಅಪ್ಪು” ಸಿನಿಮಾ ರೀ ರಿಲೀಸ್: ಟಿಕೆಟ್ಸ್ ಫುಲ್ ಸೋಲ್ಡ್ ಔಟ್

2002ರಲ್ಲಿ ತೆರೆಕಂಡ 'ಅಪ್ಪು' ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಹೀರೋ ಆಗಿ ನಟಿಸಿದ ಮೊದಲ ಸಿನಿಮಾದಲ್ಲೇ ಪುನೀತ್ ರಾಜ್‌ಕುಮಾರ್‌ಗೆ ದೊಡ್ಡ ಗೆಲುವೇ ಸಿಕ್ಕಿತ್ತು. 2002ರ ಏಪ್ರಿಲ್ 22ರಂದು ಈ ಸಿನಿಮಾ ರಿಲೀಸ್ ಆಯಿತು. ಈ ಚಿತ್ರ ಅಂದಿನಕಾಲಕ್ಕೆ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಇನ್ನೂ ನಾಳೆ ಪುನೀತ್ ಹುಟ್ಟುಹಬ್ಬದ ಪ್ರಯುಕ್ತ ಈ ಸಿನಿಮಾ ಮತ್ತೆ ರಿಲೀಸ್ ಆಗಲಿದೆ.
ಪುನೀತ್ ರಾಜ್‍ಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅವರ ಮೊಟ್ಟ ಮೊದಲ ಮೂವಿ ಅಪ್ಪು ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ನಾಳೆ ಬಿಡುಗಡೆ ಆಗುತ್ತಿದ್ದ ಕಾರಣ ಸಿನಿಮಾ ಮಂದಿರಗಳಲ್ಲಿ ಟಿಕೆಟ್ಗೆ ಭಾರೀ ಬೇಡಿಕೆ ಹೆಚ್ಚಾಗಿದೆ.
ಆನ್ಲೈನ್ ಬುಕ್ ಮೈ ಶೋನಲ್ಲೂ ಬುಕ್ಕಿಂಗ್ ಆರಂಭವಾಗಿದ್ದು, ಫಸ್ಟ್ ಶೋನ ಟಿಕೆಟ್ಗಳೆಲ್ಲಾ ಬಹುತೇಕ ಮಾರಾಟವಾಗಿವೆ. ಇನ್ನುಳಿದಂತೆ ಬೆಂಗಳೂರಿನ ವಿವಿಧ ಥಿಯೇಟರ್ಗಳಲ್ಲಿ ಬೆಳಗಿನ ಜಾವದ ಶೋಗಳು ನಡೆಯಲಿದೆ. ಹೀಗಾಗಿ ಅಪ್ಪು ಅಭಿಮಾನಿಗಳು ಸೇರಿದಂತೆ ಜನರು ಸಂಭ್ರಮಾಚರಣೆಗೆ ವೇದಿಕೆ ಸಿದ್ಧವಾಗುತ್ತಿದೆ.
ಕನ್ನಡದಲ್ಲಿ 'ಅಪ್ಪು' ಸಿನಿಮಾ ತೆರೆಕಂಡ ನಾಲ್ಕೇ ತಿಂಗಳಲ್ಲಿ ತೆಲುಗಿಗೆ ರಿಮೇಕ್ ಆಗಿ, ಅಲ್ಲಿಯೂ ತೆರೆಕಂಡಿತ್ತು. ತೆಲುಗು ವರ್ಷನ್‌ಗೆ 'ಈಡಿಯೆಟ್' ಅಂತ ಟೈಟಲ್ ಇಡಲಾಗಿತ್ತು. 'ಅಪ್ಪು' ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಪೂರಿ ಜಗನ್ನಾಥ್ ಅವರೇ ತೆಲುಗು ವರ್ಷನ್‌ಗೂ ಡೈರೆಕ್ಷನ್ ಮಾಡಿದ್ದರು. ಹೀರೋ ಆಗಿ ರವಿ ತೇಜ ಕಾಣಿಸಿಕೊಂಡಿದ್ದರು. ಅವರ ಕರಿಯರ್‌ಗೆ 'ಈಡಿಯೆಟ್' ದೊಡ್ಡ ಬ್ರೇಕ್ ನೀಡಿತು.
2002ರ ಏಪ್ರಿಲ್ 26ರಂದು ತೆರೆಕಂಡ 'ಅಪ್ಪು' ಸಿನಿಮಾವು ಚಿತ್ರಮಂದಿರಗಳಲ್ಲಿ 200 ದಿನ ಪ್ರದರ್ಶನ ಕಂಡಿತ್ತು. ಮೊದಲ ಸಿನಿಮಾದಲ್ಲೇ ದೊಡ್ಡ ಗೆಲುವು ಪಡೆದು ಪುನೀತ್ ರಾಜ್‌ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ 'ಪವರ್ ಸ್ಟಾರ್' ಎಂದು ಕರೆಸಿಕೊಂಡರು.
ನಿಮ್ಮ ಪ್ರತಿಕ್ರಿಯೆ ಏನು?






