ಚಹಲ್ ಧನುಶ್ರೀ ಡಿವೋರ್ಸ್ ಗುಸುಗುಸು ನಡುವೆ ಮತ್ತೊಂದು ಸುದ್ದಿ..! 2ನೇ ಮದುವೆಗೆ ರೆಡಿಯಾದ್ರಾ ಯಜುವೇಂದ್ರ!?

ಫೆಬ್ರವರಿ 15, 2025 - 20:04
ಫೆಬ್ರವರಿ 15, 2025 - 16:44
 0  13
ಚಹಲ್ ಧನುಶ್ರೀ ಡಿವೋರ್ಸ್ ಗುಸುಗುಸು ನಡುವೆ ಮತ್ತೊಂದು ಸುದ್ದಿ..! 2ನೇ ಮದುವೆಗೆ ರೆಡಿಯಾದ್ರಾ ಯಜುವೇಂದ್ರ!?

ಭಾರತೀಯ ಕ್ರಿಕೆಟಿಗ ಯಜುವೇಂದ್ರ ಚಹಾಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ನಡುವಿನ ವಿಚ್ಛೇದನದ ಸುದ್ದಿ ಕಳೆದ ಕೆಲವು ದಿನಗಳಿಂದ ಸುದ್ದಿಯಾಗುತ್ತಿದೆ. ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದು, ಜೊತೆಯಾಗಿ ತೆಗೆಸಿಕೊಂಡ ಫೋಟೋ ಗಳನ್ನೂ ಡಿಲೀಟ್ ಮಾಡಿರುವ ಹಿನ್ನೆಲೆಯಲ್ಲಿ ಈ ವದಂತಿ ಇನ್ನಷ್ಟು ರೆಕ್ಕೆ ಪುಕ್ಕ ಪಡೆದುಕೊಂಡಿತು. ಈ ನಡುವೆ ಹೊಸ ಸುದ್ದಿಯೊಂದು ಬೆಳಕಿಗೆ ಬಂದಿದೆ. ಯಜುವೇಂದ್ರ ಚಹಲ್ ಆರ್ಜೆ ಹಾಗೂ ನಟಿ ಮಹಾವಿಶ್ಗೆ ಪ್ರಪೋಸ್ ಮಾಡಿದ್ದಾರೆ ಅವರೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಸುದ್ದಿ ಹರಿದಾಡುತ್ತಿದೆ.

ಅದು ಮಾತ್ರವಲ್ಲ ಮಹಾವಿಶ್ಗೆ ಚಹಲ್ ಮದುವೆಯ ಪ್ರಪೋಸಲ್ ಕೂಡ ಮಾಡಿದ್ದಾರೆ ಎಂಬ ಸುದ್ದಿಯೂ ಈಗ ಜೋರಾಗಿ ಕೇಳಿ ಬರುತ್ತಿದೆ. ಒಂದು ಕಡೆ ಧನುಶ್ರೀಯೊಂದಿಗೆ ಡಿವೋರ್ಸ್ ವಿಷಯ ಮತ್ತೊಂದು ಕಡೆ ಮಹಾವಿಶ್ ಜೊತೆಗೆ ಡೇಟಿಂಗ್ ಹಾಗೂ ಮದುವೆ ಪ್ರಪೋಸಲ್ ವಿಷಯ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಸುದ್ದಿಯಾಗುತ್ತಿವೆ.

ಕೆಲವು ದಿನಗಳಿಂದ ಚಹಲ್ ಮತ್ತು ಮಹಾವಿಶ್ ಮುಂಬೈನಲ್ಲಿ ಅಲ್ಲಲ್ಲಿ ಒಟ್ಟಿಗೆ ಕಾಣುತ್ತಿದ್ದಾರೆ. ಇದು ಅವರಿಬ್ಬರ ನಡುವೆ ಡೇಟಿಂಗ್ ಶುರುವಾಗಿದೆ ಎಂಬ ಗುಸುಗುಸುವಿಗೆ ಮತ್ತಷ್ಟು ಇಂಧನವನ್ನು ಒದಗಿಸಿದೆ. ಆದ್ರೆ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ರೂಮರ್ಸ್ ವಿಚಾರದಲ್ಲಿ ನಟಿ ಮಹಾವಿಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದು ಅಲ್ಲದೇ ಒಂದು ವೇಳೆ ಚಹಲ್ ನನಗೆ ಪ್ರಪೋಸ್ ಮಾಡಿದಲ್ಲಿ ನಾನೇ ಬಂದು ನಿಮ್ಮೆಲ್ಲರಿಗೂ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow