ತಂದೆ ಮಾಡಿದ ಸಾಲಕ್ಕೆ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ! ಆರೋಪಿ ಅರೆಸ್ಟ್

ಅಕ್ಟೋಬರ್ 21, 2024 - 20:57
 0  41
ತಂದೆ ಮಾಡಿದ ಸಾಲಕ್ಕೆ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ! ಆರೋಪಿ ಅರೆಸ್ಟ್

ಬೆಂಗಳೂರು: ತಂದೆ ಪಡೆದ ಸಾಲ ವಾಪಸ್ ಕೊಡದಿದ್ದಕ್ಕೆ ಆತನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಮಾಡಲಾದ ಘಟನೆ ಮಾದನಾಯಕನಹಳ್ಳಿ ನಡೆದಿದೆ. ರವಿಕುಮಾರ್ (39) ಬಂಧಿತ ಆರೋಪಿಯಾಗಿದ್ದು, ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ಅಪ್ಪನಿಗೆ ಕೆಲವು ದಿನಗಳ ಹಿಂದೆ 70 ಸಾವಿರ ರೂ. ಹಣವನ್ನು ಆರೋಪಿ ರವಿ ಕುಮಾರ್ ಸಾಲವಾಗಿ ನೀಡಿದ್ದನು. ಸಾಲ ವಸೂಲಿಗಾಗಿ ರವಿ ಕುಮಾರ್ ಆಗಾಗ್ಗೆ ಮನೆಗೆ ಬರುತ್ತಿದ್ದನು.

ಬಾಲಕಿಯ ಅಪ್ಪ ಪಡೆದಿದ್ದ 70 ಸಾವಿರ ರೂ. ಹಣದಲ್ಲಿ ಹಂತ ಹಂತವಾಗಿ ಕಂತಿನ ರೂಪದಲ್ಲಿ 40 ಸಾವಿರ ರೂ. ಹಣವನ್ನು ವಾಪಸ್ ಕೊಟ್ಟಿದ್ದಾನೆ. ಬಾಕಿ 30 ಸಾವಿರ ರೂ. ಹಣಕ್ಕಾಗಿ ಎಂದಿನಂತೆಯೇ ಮನೆಗೆ ಬರುತ್ತಿದ್ದ ರವಿಕುಮಾರ್, ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಾಗ ಆಕೆಯನ್ನು ಬಲವಂತವಾಗಿ ಹಿಡಿದುಕೊಂಡು ಮುತ್ತು ಕೊಟ್ಟಿದ್ದಾನೆ. ಇದೇ ರೀತಿ ಹಲವು ಬಾರಿ ಮಾಡಿದ್ದಾನೆ. ಆಗ ತಾನು ಬಾಲಕಿಗೆ ಮುತ್ತಿಡುವುದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿದ್ದಾನೆ.

ನಂತರ, ಯುವತಿಗೆ ಈ ಫೋಟೋ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದಾಗಿ ಬೆದರಿಸಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಸಾಲಕ್ಕಾಗಿ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಮಾಡಿದ ಆರೋಪಿಯ ವಿರುದ್ಧ ಮಾದನಾಯಕನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಈ ದೂರನ್ನು ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.

 

 ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow