ಈ ವರ್ಷ 500 ಕೋಟಿ ಗಳಿಸಿದ ಸಿನಿಮಾ ಯಾವುದು? ಛಾವಾಗಳಿಸಿದ ಕಲೆಕ್ಷನ್ ಎಷ್ಟು?

ಮಾರ್ಚ್ 10, 2025 - 21:02
 0  10
ಈ ವರ್ಷ 500 ಕೋಟಿ ಗಳಿಸಿದ ಸಿನಿಮಾ ಯಾವುದು? ಛಾವಾಗಳಿಸಿದ ಕಲೆಕ್ಷನ್ ಎಷ್ಟು?

ಬಾಲಿವುಡ್​ ಸೇರಿದಂತೆ ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಛಾವ ಸಿನಿಮಾ ಸಿಕ್ಕಾಪಟ್ಟೆ ಕಲೆಕ್ಷನ್ ಮಾಡುತ್ತಿದೆ. ಛತ್ರಪತಿ ಸಂಭಾಜಿ ಮಹಾರಾಜ್ ಜೀವನವನ್ನು ಆಧರಿಸಿದ ಈ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ. ಐತಿಹಾಸಿಕ ಕಥೆ ಇರುವ ಈ ಸಿನಿಮಾವನ್ನು ಪ್ರೇಕ್ಷಕರು ಹಾಡಿ ಹೊಗಳಿದ್ದಾರೆ. ವಿಕ್ಕಿಕೌಶಲ್ ಅವರ ಅಭಿನಯಕ್ಕೆ ಫ್ಯಾನ್ಸ್​ ಫುಲ್ ಫಿದಾ ಆಗಿದ್ದಾರೆ. ನಟಿ ರಶ್ಮಿಕಾ ಕೂಡ ಫ್ಯಾನ್ಸ್​ಗಳನ್ನ ಬೆರಗುಗೊಳಿಸುವಂತೆ ನಟನೆ ಮಾಡಿದ್ದಾರೆ.

ಇದೆಲ್ಲಾದರ ಕೊಡುಗೆಯಿಂದ 2025ರಲ್ಲಿ ರಿಲೀಸ್ ಆಗಿರುವ ಮೂವಿಗಳ ಪೈಕಿ ಛಾವಾ ಸಿನಿಮಾ 500 ಕೋಟಿ ರೂಪಾಯಿಗಳನ್ನು ಕಲೆಕ್ಷನ್ ಮಾಡಿದ ಮೊದಲ ಸಿನಿಮಾವಾಗಿದೆ. ಸಿನಿಮಾ ರಿಲೀಸ್ ಆಗಿ 24 ದಿನಗಳತ್ತ ಹೆಜ್ಜೆ ಇಡುತ್ತಿದ್ದು ಹಣ ಸಂಗ್ರಹದಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ. ಹೀಗಾಗಿ ಬ್ಲಾಕ್​ಬಸ್ಟರ್​ 500 ಕೋಟಿ ಕ್ಲಬ್ ಸೇರಿದೆ ಎಂದು ತಿಳಿಸಲಾಗಿದೆ.

ಸಿನಿಮಾದ ಒಟ್ಟು ಗಳಿಕೆಯೂ ಇದುವರೆಗೆ ಬಾಕ್ಸ್ ಆಫೀಸ್‌ನಲ್ಲಿ 508.8 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಮೊದಲ ವಾರದಲ್ಲಿ 219.25 ಕೋಟಿ ರೂಪಾಯಿಗಳನ್ನ ಕೊಳ್ಳೆ ಒಡೆಯಿತು. ಎರಡನೇ ವಾರದಲ್ಲಿ 180.25 ಕೋಟಿ ರೂ.ಗಳನ್ನು ಸಂಗ್ರಹಿಸಿತು. ಮೂರನೇ ವಾರದಲ್ಲಿ 84.05 ಕೋಟಿ ರೂ.ಗಳನ್ನು ಗಳಿಸಿತು. ಈಗ, ವಾರಾಂತ್ಯದಲ್ಲಿ ಅದರ ಗಳಿಕೆಯಲ್ಲಿ ಹೆಚ್ಚಳದಿಂದ ಛಾವಾ ಸಿನಿಮಾ 500 ಕೋಟಿ ರೂಪಾಯಿಗಳ ಕ್ಲಬ್‌ಗೆ ಸೇರಿದೆ ಎಂದು ಹೇಳಲಾಗಿದೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow