ಜೀವಂತ ತಾಯಿಯನ್ನು ಸತ್ತಳೆಂದು ಬಿಂಬಿಸಿ ಜಮೀನು ಕಬಳಿಸಲು ಯತ್ನಿಸಿದ ಮಗ ಅರೆಸ್ಟ್!

ಜೂನ್ 13, 2025 - 17:56
 0  16
ಜೀವಂತ ತಾಯಿಯನ್ನು ಸತ್ತಳೆಂದು ಬಿಂಬಿಸಿ ಜಮೀನು ಕಬಳಿಸಲು ಯತ್ನಿಸಿದ ಮಗ ಅರೆಸ್ಟ್!

ಹಾವೇರಿ:- ಜೀವಂತ ತಾಯಿಯನ್ನು ಸತ್ತಳೆಂದು ಬಿಂಬಿಸಿ ಜಮೀನು ಕಬಳಿಸಲು ಯತ್ನಿಸಿದ ಮಗನನ್ನು ಇದೀಗ ಅರೆಸ್ಟ್ ಮಾಡಲಾಗಿದೆ. 

ತಾಯಿ ಜೀವಂತದಲ್ಲೇ ಇರುವಾಗಲೇ ನಕಲಿ ಮರಣ ಪ್ರಮಾಣ ಪತ್ರ  ಸೃಷ್ಟಿಸಿ, ಆಸ್ತಿ ಕಬಳಿಸಲು ಪ್ರಯತ್ನಿಸಿದ ಮಗ ಪೊಲೀಸರ ಅತಿಥಿಯಾದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ಖಾಜೇಖಾನ್ ಗಲ್ಲಿಯಲ್ಲಿ ನಡೆದಿದೆ. 

ಇದೀಗ ಪೊಲೀಸರು 39 ವರ್ಷದ ಮಗ ಶೌಕತ್ ಅಲಿ ಮುಲ್ಕಿ  ಬಂಧಿತ ಆರೋಪಿ ಎಂದು ಹೇಳಲಾಗಿದೆ. 60 ವರ್ಷದ ವಯೋವೃದ್ಧೆ ಹೂರಾಂಬಿ ಮುಲ್ಕಿ ಒಂಟಿಯಾಗಿ ಜೀವನ ಮಾಡುತ್ತಿದ್ದರು. ಮಗ ಶೌಕತ್ ಅಲಿ, ತಾಯಿಯನ್ನು ತೊರೆದು ಹುಬ್ಬಳ್ಳಿಯಲ್ಲಿ ವಾಸವಾಗಿದ್ದ. ಕಳೆದ 2 ತಿಂಗಳ ಹಿಂದೆ ತಾಯಿ ನಿಧನ ಹೊಂದಿದ್ದಾಳೆ ಎಂದು ಶೌಕತ್ ಅಲಿಯು ಮರಣ ಪ್ರಮಾಣ ಪತ್ರ ಸೃಷ್ಟಿಸಿ 2 ಎಕ್ರೆ ಜಮೀನು ಕಬಳಿಸುವ ಹುನ್ನಾರ ನಡೆಸಿದ್ದ ಎನ್ನಲಾಗಿದೆ.

ಆ 2 ಎಕ್ರೆ ಜಮೀನು ತಾಯಿ ಹಾಗೂ ಮಗನ ಹೆಸರಿನಲ್ಲಿ ಜಂಟಿಯಾಗಿತ್ತು. ಶೌಕತ್ ಅಲಿಯು ಮರಣ ಪ್ರಮಾಣ ಪತ್ರ ಸೃಷ್ಟಿಸಿ ಜಮೀನು ಕಬಳಿಸಲು ಹೊನ್ನಾರ ನಡೆಸಿದ್ದು ಗೊತ್ತಾಗುತ್ತಿದ್ದಂತೆ ತಾಯಿ ಹೂರಾಂಬಿ ಪೊಲೀಸರಿಗೆ ದೂರು ದಾಖಲಿಸಿದ್ದರು. ಇದೀಗ ಶಿಗ್ಗಾಂವಿ ಪೊಲೀಸರು, ಆರೋಪಿ ಶೌಕತ್ ಅಲಿಯನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow