ವಿಪಕ್ಷಗಳು ಸರ್ಕಾರದ ಮೇಲೆ ಮಾಡೋದು ಆರೋಪ ಅಷ್ಟೇ. ಅವು ಸತ್ಯ ಅಲ್ಲ: ಸಚಿವ ಮಹದೇವಪ್ಪ

ನವೆಂಬರ್ 5, 2024 - 16:34
 0  10
ವಿಪಕ್ಷಗಳು ಸರ್ಕಾರದ ಮೇಲೆ ಮಾಡೋದು ಆರೋಪ ಅಷ್ಟೇ. ಅವು ಸತ್ಯ ಅಲ್ಲ: ಸಚಿವ ಮಹದೇವಪ್ಪ

ಬೆಂಗಳೂರು: ವಿಪಕ್ಷಗಳು ಸರ್ಕಾರದ ಮೇಲೆ ಮಾಡೋದು ಆರೋಪ ಅಷ್ಟೇ. ಅವು ಸತ್ಯ ಅಲ್ಲ ಎಂದು ಸಚಿವ ಮಹದೇವಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎಲ್ಲಾ ಚುನಾವಣೆಗಳು ಪ್ರತಿಷ್ಠೆಯೇ. ಎಲ್ಲಾ ರಾಜಕೀಯ ಪಕ್ಷಗಳು ಗೆಲ್ಲಬೇಕು ಎಂದು ಕೆಲಸ ಮಾಡುತ್ತೇವೆ. ಅಂತಿಮವಾಗಿ ಜನ ತೀರ್ಮಾನ ಮಾಡುತ್ತಾರೆ. ಜನರ ಒಲವು ಕಾಂಗ್ರೆಸ್ ಪರವಾಗಿ ಇದೆ. ಉಪಚುನಾವಣೆ ಮುಂದಿನ ರಾಜಕೀಯಕ್ಕೆ ದಿಕ್ಸೂಚಿ ಆಗೋಕೆ ಹೇಗೆ ಸಾಧ್ಯ? ಉಪ ಚುನಾವಣೆ ದಿಕ್ಸೂಚಿ ಆಗಲ್ಲ. ವಿಪಕ್ಷಗಳು ಸರ್ಕಾರದ ಮೇಲೆ ಮಾಡೋದು ಆರೋಪ ಅಷ್ಟೇ. ಅವು ಸತ್ಯ ಅಲ್ಲ. 3 ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ ಎಂದರು.

ಚನ್ನಪಟ್ಟಣ ಕ್ಷೇತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಚನ್ನಪಟ್ಟಣದಲ್ಲಿ ವಾತಾವರಣ ಚೆನ್ನಾಗಿದೆ. ಯೋಗೇಶ್ವರ್ 3 ಬಾರಿ ಎಂಎಲ್‌ಎ ಆಗಿದ್ದರು. ಒಳ್ಳೆಯ ಕೆಲಸ ಮಾಡಿದ್ದಾರೆ. ನಾನು ಆರೋಗ್ಯ ಸಚಿವ ಆಗಿದ್ದಾಗ ಕಣ್ವಾ ಜಲಾಶಯದಿಂದ ನೂರು ಕೆರೆ ತುಂಬಿಸಿ ಜಾತ್ರೆ ರೀತಿ ಕಾರ್ಯಕ್ರಮ ಮಾಡಿದ್ದರು. ಅದಕ್ಕೆ ನಾನು ಹೋಗಿದ್ದೆ. 2013-18 ಸರ್ಕಾರ ಇದ್ದಾಗ ಚನ್ನಪಟ್ಟಣಕ್ಕೆ ನೂರಾರು ಕೋಟಿ ಮಂಜೂರು ಮಾಡಿದ್ದೆವು. ಅಲ್ಲೆಲ್ಲಾ ಕೆರೆ ಒಣಗಿ ಹೋಗಿತ್ತು. ಅದು ಹಸಿರಾಗಿ ಬದಲಾವಣೆ ಆಗೋಕೆ ಸಿದ್ದರಾಮಯ್ಯ ಕಾಲದಲ್ಲಿ ಕಣ್ವಾ ಜಲಾಶಯದ ಮೂಲಕ ಕೆರೆ ತುಂಬಿಸೋ ಯೋಜನೆ ಮಾಡಿದ್ದರು. ಯೋಗೇಶ್ವರ್ ಉತ್ತಮವಾಗಿ ಕೆಲಸ ಮಾಡಿದ್ದರು. ಹೀಗಾಗಿ ಜನರಿಗೆ ಯೋಗೇಶ್ವರ್ ಪರ ಒಲವಿದೆ ಎಂದು ತಿಳಿಸಿದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow