ಸತೀಶ್ ಜಾರಕಿಹೋಳಿ ಮಣಿಸಲು, ಶ್ರೀರಾಮುಲನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುತ್ತಿದ್ದಾರೆ: ಸ್ಫೋಟಕ ಹೇಳಿಕೆ ಕೊಟ್ಟ ರೆಡ್ಡಿ

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಬಿ.ಶ್ರೀರಾಮುಲು ಆಕ್ರೋಶ ಹೊರ ಹಾಕಿದ್ದಾರೆ. ಇದರ ಬೆನ್ನಲ್ಲೇ ರಾಮುಲು ಬಿಜೆಪಿಯನ್ನು ತೊರೆಯುತ್ತಾರಾ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ಇದರ ಬೆನ್ನಲ್ಲೇ ಮಾಧ್ಯಮ ಸುದ್ದಿಗೋಷ್ಟಿ ನಡೆಸಿ ಶಾಸಕ ಜನಾರ್ಧನ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶ್ರೀರಾಮುಲು ಬೇಕು ಅಂದ್ರು, ಬೇಡ ಅಂದ್ರು ಜನಾರ್ದನ ರೆಡ್ಡಿ ದೃಷ್ಟಿಯಲ್ಲಿ ಆತ ನನ್ನ ಸ್ನೇಹಿತನೇ. ನಾನು ಒಂದು ಬಾರೀ ಸ್ನೇಹ ಮಾಡಿದ್ರೆ ನಾನು ಯಾವತ್ತು ಶತ್ರು ತರ ನೋಡಲ್ಲ. ಆದರೆ ಶತ್ರು ಜೊತೆಗೆ ನಾನು ಸ್ನೇಹ ಮಾಡಿದ್ದೇನೆ ಅದೇ ವಿಪರ್ಯಾಸ ಎಂದರು.
ನಿನ್ನೆ ಶ್ರೀ ರಾಮುಲು ಪಕ್ಷ ಬಿಡುತ್ತೇನೆ ಎಂದು ಹೇಳಿದ್ದರು, ಅದು ತಪ್ಪು. ನನ್ನ ಮೇಲೆ ಆರೋಪ ಮಾಡಿ ಪಕ್ಷ ಬಿಡುತ್ತಿರುವುದು ತಪ್ಪು. ನಾನು 40 ವರ್ಷ ಆತನಿಗಾಗಿ ಮಾಡಿರೋದು ನೆನಪಿಸಿಕೊಳ್ಳದೇ ಈ ರೀತಿ ಆರೋಪ ಮಾಡೋದು ತಪ್ಪು. ರಮೇಶ್ ಜಾರಕಿಹೊಳಿ ಸೋಲಿಸಲು ಡಿಕೆಶಿ ಶ್ರೀರಾಮುಲು ಸೆಳೆಯುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನಾನು ಕರ್ಮವನ್ನು ನಂಬಿದ್ದೇನೆ, ಆ ದೇವರಿಗೆ ಎಲ್ಲವನ್ನು ಬಿಡುತ್ತೇನೆ. ಕರ್ಮ ಯಾರನ್ನು ಸುಮ್ಮನೆ ಬಿಡೊದಿಲ್ಲ. ಶ್ರೀ ರಾಮುಲು ಡಿಕೆಶಿ ಸಂಪರ್ಕದಲ್ಲಿದ್ದಾರೆ ಎನ್ನುವುದು ಮಾಧ್ಯಮದಲ್ಲಿ ನೋಡಿದ್ದೇನೆ ಇದರ ಬಗ್ಗೆ ನನಗೆ ಗೊತ್ತಿಲ್ಲ. ವಿಜಯೇಂದ್ರ ಅವರಿಗೆ ರಾಜ್ಯಧ್ಯಕ್ಷ ಸ್ಥಾನ ಕೊಟ್ಟಿರುವುದು ಹೈಕಮಾಂಡ್, ಯಾರೋ ನಾಲ್ಕು ಜನ ವಿರೋಧ ಮಾಡ್ತಾರೆ ಎಂದು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಹೇಲೀದ್ದಾರೆ. ಬಿಜೆಪಿಯಲ್ಲಿ ಬಳ್ಳಾರಿ ಬಣ ಬಡಿದಾಟದ ಬಾಣ ಬಾಂಬ್ನಂತೆ ಸಿಡಿದಿದ್ದು, ಈ ರೋಷಾಗ್ನಿ ತಣ್ಣಗೆ ಮಾಡಲು ಹರಸಾಹಸ ನಡೆದಿದೆ. ಇದರ ನಡುವೆ ಜಿಲ್ಲಾಧ್ಯಕ್ಷರ ಆಯ್ಕೆಗೂ ಕಸರತ್ತು ಜೋರಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






