ಪ್ರತಿದಿನ ಬೆಳಗ್ಗೆ 5ಕ್ಕೆ ಏಳುವುದರಿಂದ ನಿಜವಾಗ್ಲೂ ಒಳ್ಳೆದು ಆಗುತ್ತಾ.? ಇಲ್ಲಿದೆ ಉತ್ತರ

ಬೆಂಗಳೂರು: ಹಿರಿಯರು ಹೇಳುವಂತೆ “ರಾತ್ರಿ ಬೇಗ ಮಲಗಿ, ಬೆಳಗ್ಗೆ ಬೇಗ ಎಳಬೇಕು” ಎಂಬ ಮಾತು ಆರೋಗ್ಯದ ದೃಷ್ಟಿಯಿಂದ ಬಹಳ ಮಹತ್ವದ್ದು. ಆದರೆ ಇಂದಿನ ಹೆಚ್ಚಿನ ಜನರು ತಡವಾಗಿ ಮಲಗಿ, ತಡವಾಗಿ ಎದ್ದೇಳುವ ಅಭ್ಯಾಸ ಮಾಡಿಕೊಂಡಿದ್ದಾರೆ. ಇದು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.
ಅದಕ್ಕಾಗಿ ಬೆಳಗ್ಗೆ 5 ಗಂಟೆಗೆ ಎದ್ದೇಳುವ ಅಭ್ಯಾಸವನ್ನು ರೂಪಿಸಿಕೊಳ್ಳುವುದು ಉತ್ತಮ. ದಿನದ ಈ ಭಾಗವನ್ನು “ಬ್ರಹ್ಮ ಮುಹೂರ್ತ” ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಎದ್ದು ಚಟುವಟಿಕೆ ಆರಂಭಿಸುವುದರಿಂದ ಹಲವು ದೈಹಿಕ ಹಾಗೂ ಮಾನಸಿಕ ಲಾಭಗಳು ದೊರೆಯುತ್ತವೆ.
ಇವು ಬೆಳಗ್ಗೆ 5ಕ್ಕೆ ಎದ್ದೇಳುವ ಪ್ರಮುಖ ಲಾಭಗಳು:
ನಿದ್ರೆಯ ಗುಣಮಟ್ಟ ಸುಧಾರಣೆ
ಬೆಳಗ್ಗೆ ನಿರ್ದಿಷ್ಟ ಸಮಯಕ್ಕೆ ಎದ್ದರೆ, ಶರೀರದ ಸಿರ್ಕಾಡಿಯನ್ ಲಯ ಸರಿಹೊಂದುತ್ತದೆ. ಇದರಿಂದ ರಾತ್ರಿ ಉತ್ತಮ ನಿದ್ರೆ ಸಾಧ್ಯವಾಗುತ್ತದೆ.
ಒತ್ತಡ ಹಾಗೂ ಆತಂಕ ನಿವಾರಣೆ
ಬೆಳಗ್ಗೆ ಧ್ಯಾನ, ಯೋಗ, ಓದು ಇತ್ಯಾದಿಗೆ ಸಮಯ ಮೀಸಲಾಗುವುದು. ಕಾರ್ಟಿಸೋಲ್ ಹಾರ್ಮೋನ್ ಮಟ್ಟ ಕಡಿಮೆಯಾಗುತ್ತದೆ. ಈ ಎಲ್ಲವು ಮಾನಸಿಕ ಶಾಂತಿ ನೀಡುತ್ತವೆ.
ಚೈತನ್ಯಶೀಲತೆ ಮತ್ತು ಉತ್ಸಾಹ ಹೆಚ್ಚಳ
ದಿನದ ಆರಂಭದಲ್ಲಿ ಎಚ್ಚರದಿಂದಿರುವುದು ಇಡೀ ದಿನಕ್ಕೂ ಶಕ್ತಿ ತುಂಬುತ್ತದೆ. ನಿರಂತರ ಚಟುವಟಿಕೆ ಮಾಡುವ ಶಕ್ತಿಯು ಹೆಚ್ಚುತ್ತದೆ.
ತೂಕ ಇಳಿಕೆ ಹಾಗೂ ಆರೋಗ್ಯಕರ ಆಹಾರ ಪ್ರವೃತ್ತಿ
ಬೆಳಗ್ಗೆ ಸಮಯವಿದ್ದಾಗ ವ್ಯಾಯಾಮ, ಆರೋಗ್ಯಕರ ಉಪಹಾರಕ್ಕೆ ಅವಕಾಶ ಸಿಗುತ್ತದೆ. ಇದು ತೂಕ ಇಳಿಸುವತ್ತ ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆ ಸುಧಾರಣೆ
ಬೇಗನೇ ಎದ್ದರೆ ಉಪಹಾರ ಕೂಡ ಸರಿಯಾದ ಸಮಯದಲ್ಲಿ ಆಗುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಕಾರಣವಾಗುತ್ತದೆ.
ಸೂರ್ಯನ ಬೆಳಕಿನಿಂದ ವಿಟಮಿನ್ ಡಿ
ಬೆಳಿಗ್ಗೆ ಸೂರ್ಯನ ಬೆಳಕು ವಿಟಮಿನ್ ಡಿ ಯ ಉತ್ತಮ ಮೂಲ. ಇದು ಶರೀರದ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಮೂಳೆ ಆರೋಗ್ಯವನ್ನು ಬೆಳೆಸುತ್ತದೆ.
ನಿಮ್ಮ ಪ್ರತಿಕ್ರಿಯೆ ಏನು?






