‘ಸು ಫ್ರಂ ಸೋ’ ಕನ್ನಡದ ಕಂಟೆಂಟ್ ಬ್ಲಾಕ್ಬಸ್ಟರ್: ಇದೀಗ ಉತ್ತರ ಭಾರತಕ್ಕೆ ಪ್ರವೇಶ

ಜುಲೈ 27, 2025 - 20:00
 0  8
‘ಸು ಫ್ರಂ ಸೋ’ ಕನ್ನಡದ ಕಂಟೆಂಟ್ ಬ್ಲಾಕ್ಬಸ್ಟರ್: ಇದೀಗ ಉತ್ತರ ಭಾರತಕ್ಕೆ ಪ್ರವೇಶ

 

ರಾಜ್ ಬಿ ಶೆಟ್ಟಿ ನಿರ್ಮಾಣ ಮಾಡಿದ್ದು, ಜೆಪಿ ತುಮ್ಮಿನಾಡ್ ನಿರ್ದೇಶನದಸು ಫ್ರಂ ಸೋ’ (Su From So) ಸಿನಿಮಾ ಕರ್ನಾಟಕದಲ್ಲಿ ಭರ್ಜರಿ ಯಶಸ್ಸು ಕಂಡಿದ್ದು, ಈಗ ಅದು ಗಡಿಗಳನ್ನು ದಾಟಿ ಇತರ ರಾಜ್ಯಗಳತ್ತ ಪಯಣಿಸುತ್ತಿದೆ. ಸಿನಿಮಾದ ಟಿಕೆಟ್ಗಳಿಗೆ ಭಾರಿ ಬೇಡಿಕೆ ಇದ್ದು, ಬೆಂಗಳೂರು ಸೇರಿದಂತೆ ಅನೇಕ ಸ್ಥಳಗಳಲ್ಲಿ ಶೋಗಳು ಮುಂಗಡವಾಗಿ ಬುಕಿಂಗ್ ಆಗಿವೆ. ಪ್ರೇಕ್ಷಕರಿಂದ ಉತ್ತಮ ಪ್ರತಿಸ್ಪಂದನೆ ದೊರಕುತ್ತಿದೆ.

ಕಂಟೆಂಟ್ ಶಕ್ತಿ: ಕನ್ನಡದಿಂದ ಮಲಯಾಳಂವರೆಗೆ

ಸಿನಿಮಾದ ಶಕ್ತಿ ಅದರ ವಿಷಯವಸ್ತುವಲ್ಲಿದೆ. ಅದ್ಭುತ ಕತೆ ಹಾಗೂ ತಾತ್ವಿಕ ಅಂಶಗಳು ಸಿನಿಪ್ರೇಮಿಗಳನ್ನು ಸೆಳೆಯುತ್ತಿವೆ. ಆಗಸ್ಟ್ 1ರಂದು, 'ಸು ಫ್ರಂ ಸೋ' ಇದೇ ಹೆಸರಿನಲ್ಲಿ ಕೇರಳದಲ್ಲಿ ಬಿಡುಗಡೆ ಆಗುತ್ತಿದೆ. ಮಲಯಾಳಂ ಆವೃತ್ತಿಗೆ ಪ್ರಸಿದ್ಧ ನಟ ದುಲ್ಕರ್ ಸಲ್ಮಾನ್ ಅವರ ವೇಫೆರರ್ ಫಿಲ್ಮ್ಸ್ ವಿತರಣೆ ಹಕ್ಕು ಪಡೆದು ಕೇರಳದಾದ್ಯಂತ ಬಿಡುಗಡೆ ಮಾಡುತ್ತಿದೆ.

ಹೆಚ್ಚುತ್ತಿರುವ ಬೇಡಿಕೆ: ಈಗ ಉತ್ತರ ಭಾರತಕ್ಕೂ ರವಾನೆ

ಇದೀಗ ಕನ್ನಡ ಸಿನಿಮಾಗೆ ಉತ್ತರ ಭಾರತದಿಂದಲೂ ಬೇಡಿಕೆ ಹುಟ್ಟಿದ್ದು, ಎಎ ಫಿಲ್ಮ್ಸ್ (AA Films) ಸಂಸ್ಥೆಯು ಚಿತ್ರದ ಉತ್ತರ ಭಾರತ ಬಿಡುಗಡೆಯ ಹಕ್ಕುಗಳನ್ನು ಖರೀದಿಸಿದೆ. ಎಎ ಫಿಲ್ಮ್ಸ್ ಸಂಸ್ಥೆಯು ಹಿಂದೆ ಕೆಜಿಎಫ್, ಕಾಂತಾರ, ಪುಷ್ಪಂತಹ ಬಹುಚರ್ಚಿತ ದಕ್ಷಿಣ ಭಾರತದ ಸಿನಿಮಾಗಳನ್ನು ಉತ್ತರ ಭಾರತದಲ್ಲಿ ಯಶಸ್ವಿಯಾಗಿ ವಿತರಣೆ ಮಾಡಿದ್ದು, ಈಗಸು ಫ್ರಂ ಸೋಕೂಡ ಅದೇ ಮಾರ್ಗವನ್ನು ಅನುಸರಿಸುತ್ತಿದೆ.

ಹಿಂದಿ ಆವೃತ್ತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ:

ಮೂಲಗಳ ಪ್ರಕಾರ, ಮೊದಲಿನಿಂದ ಮಲಯಾಳಂ ಆವೃತ್ತಿಗೆ ಡಬ್ಬಿಂಗ್ ಮಾಡಲಾಗಿದ್ದರೂ, ಇದೀಗ ಬೃಹತ್ ಬೇಡಿಕೆಯಿಂದ ಹಿಂದಿ ಭಾಷೆಯ ಡಬ್ಬಿಂಗ್ ಕೂಡ ಪೂರ್ಣಗೊಂಡಿದೆ. ಮುಂದಿನ ಕೆಲ ದಿನಗಳಲ್ಲಿ ಉತ್ತರ ಭಾರತದಾದ್ಯಂತ 'ಸು ಫ್ರಂ ಸೋ' ಹಿಂದಿ ಆವೃತ್ತಿ ಬಿಡುಗಡೆ ಮಾಡಲಾಗುತ್ತದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow