DC vs RR: ನಾವು ಬ್ಯಾಟಿಂಗ್ʼನಲ್ಲಿ ಖಂಡಿತವಾಗಿಯೂ ಹಿಂದುಳಿದಿದ್ದೇವೆ: ಸೋತ ನಂತರ ಸಂಜು ಸ್ಯಾಮ್ಸನ್ ಹೇಳಿಕೆ

ಇಂಡಿಯನ್ ಪ್ರೀಮಿಯರ್ ಲೀಗ್ನ 32ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ (RR) ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 188 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 188 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಪಂದ್ಯವು ಟೈನಲ್ಲಿ ಅಂತ್ಯಗೊಂಡಿತ್ತು. ಹೀಗಾಗಿ ಫಲಿತಾಂಶಕ್ಕಾಗಿ ಸೂಪರ್ ಓವರ್ ಆಡಿಸಲಾಯಿತು.
ಇನ್ನೂ ಸೋಲಿನ ನಂತರ, ನಾಯಕ ಸಂಜು ಸ್ಯಾಮ್ಸನ್ ಮಾತನಾಡಿದ್ದು, ನಮ್ಮ ಬ್ಯಾಟಿಂಗ್ ಲೈನ್ಅಪ್ಗೆ ಈ ಸ್ಕೋರ್ ಅನ್ನು ಬೆನ್ನಟ್ಟುವುದು ಸುಲಭ ಎಂದು ನಾನು ಭಾವಿಸಿದೆ. ಪವರ್ಪ್ಲೇನಲ್ಲಿ ನಮಗೆ ಉತ್ತಮ ಆರಂಭ ಸಿಕ್ಕಿತು. ಇದು ಖಂಡಿತವಾಗಿಯೂ ಗುರಿ ಮುಟ್ಟಬಹುದಾಗ ಟಾರ್ಗೆಟ್ ಎಂದು ನಾನು ಭಾವಿಸಿದೆ. ಆದರೆ, ಮಿಚೆಲ್ ಸ್ಟಾರ್ಕ್ ದೆಹಲಿ ಪರ ಅದ್ಭುತ ಬೌಲಿಂಗ್ ಮಾಡಿ ಪಂದ್ಯವನ್ನು ನಮ್ಮಿಂದ ಕಸಿದುಕೊಂಡರು’’ ಎಂದು ಹೇಳಿಕೊಂಡಿದ್ದಾರೆ.
ನಾವು ಬ್ಯಾಟಿಂಗ್ನಲ್ಲಿ ಖಂಡಿತವಾಗಿಯೂ ಹಿಂದುಳಿದಿದ್ದೇವೆ. ನಾವೆಲ್ಲರೂ ಮಿಚೆಲ್ ಸ್ಟಾರ್ಕ್ ಅವರ ಅದ್ಭುತ ಬೌಲಿಂಗ್ ಅನ್ನು ನೋಡಿದ್ದೇವೆ. ದೆಹಲಿಯ ಗೆಲುವಿನ ಸಂಪೂರ್ಣ ಕ್ರೆಡಿಟ್ ಅನ್ನು ನಾನು ಮಿಚೆಲ್ ಸ್ಟಾರ್ಕ್ಗೆ ನೀಡುತ್ತೇನೆ. 20 ನೇ ಓವರ್ನಲ್ಲಿ ಅವರು ಬೌಲಿಂಗ್ ಮಾಡಿದ ರೀತಿ, ಅವರು ಅಲ್ಲಿಯೇ ಪಂದ್ಯವನ್ನು ಗೆದ್ದರು. ನಾವು ನಿಜವಾಗಿಯೂ ಚೆನ್ನಾಗಿ ಬೌಲಿಂಗ್ ಮಾಡಿದೆವು. ನಮ್ಮ ಬೌಲರ್ಗಳು ಮತ್ತು ಫೀಲ್ಡರ್ಗಳಿಗೆ ನಾನು ಕ್ರೆಡಿಟ್ ನೀಡಲು ಬಯಸುತ್ತೇನೆ. ಮೈದಾನದಲ್ಲಿ ನಮ್ಮ ಬೌಲಿಂಗ್ ಪಡೆ ಉತ್ತಮ ಆಟ ಆಡಿದೆ’’ ಎಂದು ಹೇಳಿದರು.
ನಿಮ್ಮ ಪ್ರತಿಕ್ರಿಯೆ ಏನು?






