ಅವುಗಳು ಕೋತಿಗಳು: ಪಾಕ್ ಆಟಗಾರರನ್ನು ಮಂಗಕ್ಕೆ ಹೋಲಿಸಿದ ವಾಸಿಂ ಅಕ್ರಮ್!

ಫೆಬ್ರವರಿ 26, 2025 - 09:02
 0  20
ಅವುಗಳು ಕೋತಿಗಳು: ಪಾಕ್ ಆಟಗಾರರನ್ನು ಮಂಗಕ್ಕೆ ಹೋಲಿಸಿದ ವಾಸಿಂ ಅಕ್ರಮ್!

ಟೀಮ್ ಇಂಡಿಯಾ ವಿರುದ್ಧ ಹೀನಾಯವಾಗಿ ಸೋತ ಪಾಕ್ ಆಟಗಾರರನ್ನು ಮಂಗಗಳಿಗೆ ಹೋಲಿ ಸಿ ವಾಸಿಂ ಅಕ್ರಮ್ ಗೇಲಿ ಮಾಡಿದ್ದಾರೆ. 

ದುಬೈ ಇಂಟರ್​ನ್ಯಾಷನಲ್ ಮೈದಾನದಲ್ಲಿ ನಡೆದ ಈ ಪಂದ್ಯದ ದ್ವಿತೀಯ ಇನಿಂಗ್ಸ್ ವೇಳೆ ಪಾಕಿಸ್ತಾನ್ ಆಟಗಾರರು ಬಾಳೆಹಣ್ಣು ತಿಂದಿದ್ದರು. ಟೀಮ್ 
ಇಂಡಿಯಾ ಬ್ಯಾಟಿಂಗ್ ವೇಳೆಯ ಪಾನೀಯ ವಿರಾಮದ ವೇಳೆ ಪಾಕ್ ಆಟಗಾರರಿಗೆ ದೊಡ್ಡ ತಟ್ಟೆಯಲ್ಲಿ ಬಾಳೆಹಣ್ಣುಗಳು ಮೈದಾನಕ್ಕೆ ಬಂದಿದ್ದವು.

ಹೀಗೆ ಪಂದ್ಯದ ನಡುವೆ ಬಾಳೆಹಣ್ಣು ತಿಂದು ಹೊಟ್ಟೆ ತುಂಬಿಸಿಕೊಂಡ ಆಟಗಾರರ ನಡೆಯನ್ನು ವಿಮರ್ಶಿಸಿದ ವಾಸಿಂ ಅಕ್ರಮ್, ಮಂಗಗಳು ಕೂಡ ಇಷ್ಟೊಂದು ಬಾಳೆಹಣ್ಣುಗಳನ್ನು ತಿನ್ನುವುದಿಲ್ಲ. ನಮ್ಮ ಆಟಗಾರರು ಮೊದಲ ಪಾನೀಯ ಬ್ರೇಕ್ ಹಾಗೂ ಎರಡನೇ ಪಾನೀಯ ಬ್ರೇಕ್ ವೇಳೆ ಅಷ್ಟೊಂದು ಬಾಳೆ ಹಣ್ಣುಗಳನ್ನು ತಿಂದಿದ್ದಾರೆ.

ನಮ್ಮ ಕಾಲದಲ್ಲಿ ಪಾಕಿಸ್ತಾನ್ ತಂಡದ ಮಾಜಿ ನಾಯಕ ಇಮ್ರಾನ್ ಖಾನ್ ಅವರು ಆಟಗಾರರು ಇಷ್ಟೊಂದು ಬಾಳೆಹಣ್ಣು ತಿನ್ನುವುದನ್ನು ನೋಡಿದ್ದರೆ, ಅಲ್ಲಿಯೇ ಅವನಿಗೆ ಪಾಠ ಕಲಿಸುತ್ತಿದ್ದರು ಎಂದು ಅಕ್ರಮ್ ಇದೇ ವೇಳೆ ಹೇಳಿದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow