Hubballi; ಬೆಣ್ಣಿ ಹಳ್ಳದಲ್ಲಿ ಮಹಿಳೆಯ ಶವ, ಕೊಲೆ‌ ಮಾಡಿದ್ನಾ ಪ್ರಿಯಕರ.?

ಆಗಸ್ಟ್ 9, 2024 - 12:52
 0  7
Hubballi; ಬೆಣ್ಣಿ ಹಳ್ಳದಲ್ಲಿ ಮಹಿಳೆಯ ಶವ,  ಕೊಲೆ‌ ಮಾಡಿದ್ನಾ ಪ್ರಿಯಕರ.?

ಕಳೆದ ತಿಂಗಳು 29 ರಂದು ಕಾಣೆಯಾಗಿದ್ದ ಮಹಿಳೆಯ ಶವವೊಂದು ಹಳ್ಳದಲ್ಲಿ ಪತ್ತೆಯಾದ ಘಟನೆ ಕುಂದಗೋಳ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕುಂದಗೋಳ ತಾಲೂಕಿನ ವಿಠ್ಠಲಾಪುರ ಗ್ರಾಮದ 29 ವಯಸ್ಸಿನ ಮಂಜುಳಾ ಚಂದ್ರಗೌಡ ಹುತ್ತನಗೌಡರ ಎಂಬುವಳು ಕಾಣೆಯಾದ ಬಗ್ಗೆ ಕುಂದಗೋಳ ಪೋಲೀಸ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ಈಗ ಆ ಮಹಿಳೆಯ ಶವ ಬೆಣ್ಣಿ ಹಳ್ಳದಲ್ಲಿ ಪತ್ತೆಯಾಗಿದೆ.

ಮಹಿಳೆಯ ಶವವು ಹತ್ತು ದಿನಗಳ ನಂತರ ದೊರೆತಿದ್ದು ನೀರಿನಲ್ಲಿ ಮೀನುಗಳು ಶವವನ್ನು ತಿಂದಿರುವ ಹಿನ್ನೆಲೆಯಲ್ಲಿ ಇದು ಕೊಲೆಯೋ ಅಥವಾ ಅವಳಾಗಿಯೇ ನೀರಿಗೆ ಬಿದ್ದಳಾ ಅನ್ನೋದನ್ನು ಪತ್ತೆ ಹಚ್ಚಲು ಪೋಲೀಸರಿಗೆ ಕಷ್ಟವಾಗಿದ್ದು ಮಹಿಳೆಯ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಕೊಲೆಯೋ ಆಕಸ್ಮಿಕ ಸಾವ ಅನ್ನೋದು ಗೊತ್ತಾಗಲಿದೆ.
ಈಗ ಮಹಿಳೆಯ ಕುಟುಂಬಸ್ಥರು ಗ್ರಾಮದ ಓರ್ವ ಯುವಕನ ಮೇಲೆ ಸಂಶಯ ವ್ಯಕ್ತಪಡಿಸಿದ್ದು ಅವನಿಂದಲೇ ಮಂಜುಳಾ ಕೊಲೆ ನಡಿದಿರಬಹುದು ಎಂದು ದೂರು ನೀಡಿದ್ದಾರೆ ಎನ್ನಲಾಗಿದೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow