ಅಂದ ಹೆಚ್ಚಿಸಿಕೊಳ್ಳಲು ಹೋಗಿ ಎಡವಟ್ಟು: ತನ್ನ ಸೌಂದರ್ಯ, ತಾನೇ ಕೆಡಿಸಿಕೊಂಡಳಾ ಉರ್ಫಿ ಜಾವೇದ್!

ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿಭಿನ್ನ ಫ್ಯಾಷನ್ ಮತ್ತು ಸ್ಟೈಲ್ಗಳೊಂದಿಗೆ ಹೆಚ್ಚು ಗಮನ ಸೆಳೆಯುತ್ತಿದ್ದ ಉರ್ಫಿ ಜಾವೇದ್ ಈಗ ತಮ್ಮ ಮುಖದ ವಿಚಿತ್ರ ವಿಕಾರದಿಂದ ಸುದ್ದಿಯಾಗಿದ್ದಾರೆ.ಅವರು ಫಿಲ್ಲರ್ ಮೂಲಕ ತಮ್ಮ ತುಟಿಗಳನ್ನು ಹೆಚ್ಚು ಸುಂದರವಾಗಿ ತೋರಿಸಿಕೊಳ್ಳಲು ಪ್ರಯತ್ನಿಸಿದಾಗ, ನಿರೀಕ್ಷೆಯ ವಿರುದ್ಧ ಅವರು ಗಂಭೀರ ಸಮಸ್ಯೆಗೆ ಸಿಲುಕಿದ್ದರು. ತುಟಿಗಳು ಊದುತ್ತಾ ವಿಕಾರವಾಗಿ, ಆಗಿದ್ದೇ ಬೇರೆ ಹೇಗೋ ಅವರ ಮೂಲಕ ಹಂಚಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
ಆದ ಅನಾಹುತದಿಂದ ಪರಿಹಾರ ಪಡೆಯಲು ಉರ್ಫಿ ಜಾವೇದ್ ಅವರು ಫಿಲ್ಲರ್ ತೆಗೆಸಿದ್ದಾರೆ. ಆ ಪ್ರಕ್ರಿಯೆ ಕೂಡ ಅವರಿಗೆ ನೋವು ತಂದಿತು. ಒಟ್ಟಿನಲ್ಲಿ ಅವರಿಗೆ ಫಿಲ್ಲರ್ ಕಾರಣದಿಂದ ಇಷ್ಟೆಲ್ಲ ತೊಂದರೆ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಕಂಡು ಜನರಿಗೆ ಶಾಕ್ ಆಗಿದೆ. ‘ಇಂಥ ವಿಡಿಯೋ ಪೋಸ್ಟ್ ಮಾಡಲು ಕೂಡ ಧೈರ್ಯ ಬೇಕು’ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






