India vs Pakistan:“ಐಸಿಸಿ ಟೂರ್ನಿಯಲ್ಲಿಯೂ ಆಡಬೇಡಿ”: ಭಾರತ ಕ್ರಿಕೆಟ್ ತೀರ್ಮಾನಕ್ಕೆ ಸಲ್ಮಾನ್ ಬಟ್ ಸವಾಲು

ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನ್ ವಿರುದ್ಧದ ಪಂದ್ಯದಿಂದ ಹಿಂದೆ ಸರಿದಿರುವುದು ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಭಾನುವಾರ ಎಡ್ಜ್ಬಾಸ್ಟನ್ನಲ್ಲಿ ನಡೆಯಬೇಕಿದ್ದ ಈ ಪಂದ್ಯವನ್ನು, ಏಪ್ರಿಲ್ 22ರಂದು ಜಮ್ಮು-ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಉಗ್ರ ದಾಳಿಯನ್ನು ಖಂಡಿಸಿ, ಭಾರತದ ಕೆಲವು ಆಟಗಾರರು ಆಡಲು ನಿರಾಕರಿಸಿದರು. ಪರಿಣಾಮ ಪಂದ್ಯವನ್ನು ರದ್ದುಗೊಳಿಸಲಾಯಿತು.
ಈ ಬಗ್ಗೆ ಪಾಕಿಸ್ತಾನ ತಂಡದ ಮಾಜಿ ಆಟಗಾರ ಸಲ್ಮಾನ್ ಬಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ನಿಜವಾಗಿಯೂ ದೇಶಭಕ್ತರಾಗಿದ್ದರೆ, ಯಾವುದೇ ಮಟ್ಟದಲ್ಲೂ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡಬಾರದು. ಒಲಿಂಪಿಕ್ಸ್ನಲ್ಲೂ ಕೂಡ ಸ್ಪರ್ಧಿಸಬಾರದು. ಕ್ರಿಕೆಟ್ ಪಂದ್ಯ ಬಂದಾಗ ಮಾತ್ರ ಈ ವಿವಾದ ಏಕೆ? ಇಡೀ ವಿಶ್ವ ಈ ನಡೆಗೆ ನೋಡುವಂತಹದ್ದು. ನೀವು ಏನನ್ನು ತೋರಿಸಬೇಕು, ಏನನ್ನು ಸಾಬೀತುಪಡಿಸಬೇಕು ಎಂಬುದರಲ್ಲಿ ಸ್ಪಷ್ಟತೆ ಇರಲಿ," ಎಂದು ಬಟ್ ಹೇಳಿದ್ದಾರೆ.
ಅವರು ಮತ್ತೊಂದು ಪ್ರಶ್ನೆ ಎತ್ತಿ, "ನೀವು ಪಾಕಿಸ್ತಾನ ವಿರುದ್ಧ ಎಲ್ಲ ಕ್ರೀಡೆಗಳಿಂದ ಹಿಂದೆ ಸರಿಯಲಿದ್ದೀರಾ? ಈ ಬಗ್ಗೆ ಖಚಿತನೆ ನೀಡಿ. ಇಲ್ಲದಿದ್ದರೆ, ಪ್ರತೀ ಬಾರಿ ಕ್ರಿಕೆಟ್ನಲ್ಲಿ ಮಾತ್ರ ದೇಶಭಕ್ತಿಯ ನಾಟಕ ಏಕೆ?" ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಡೀ ಜಗತ್ತು ಭಾರತ ತಂಡದ ನಡೆಯ ಬಗ್ಗೆ ಮಾತನಾಡುತ್ತಿದೆ.
ಅವರು ಒಟ್ಟಾರೆಯಾಗಿ ಕ್ರಿಕೆಟ್ಗೆ ಮತ್ತು ಅಭಿಮಾನಿಗಳಿಗೆ ಏನು ಸಂದೇಶವನ್ನು ಕಳುಹಿಸಿದ್ದಾರೆ? ನೀವು ಏನು ತೋರಿಸಲು ಪ್ರಯತ್ನಿಸುತ್ತಿದ್ದೀರಿ? ನೀವು ಏನನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದೀರಿ?. ಇಲ್ಲಿಗೆ ಒಂದು ತೀರ್ಮಾನವಾಗಲಿ ಬಿಡಿ. ನೀವು ಇನ್ಯಾವತ್ತೂ ಐಸಿಸಿ ಟೂರ್ನಮೆಂಟ್ನಲ್ಲಿ ನಮ್ಮ ವಿರುದ್ಧ ಆಡಬೇಡಿ. ಈ ಒಂದು ಭರವಸೆಯನ್ನು ಮುಂದಿಡಿ. ನಿಮ್ಮಿಂದ ಇಂತಹದೊಂದು ನಿರ್ಧಾರ ತೆಗೆದುಕೊಳ್ಳಲು ಸಾಧ್ಯನಾ? ಆ ಬಳಿಕ ನಿಮ್ಮ ದೇಶಭಕ್ತಿ ಹೇಗಿದೆ ಎಂದು ನೋಡುತ್ತೇನೆ ಎಂದು ಸಲ್ಮಾನ್ ಬಟ್ ಸವಾಲು ಹಾಕಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






