T20I Series 2025:ಝುಹೈಬ್ ಅಬ್ಬರ: ತತ್ತರಿಸಿದ ನೈಜೀರಿಯಾ, ಯುಎಇಗೆ ಭರ್ಜರಿ ಜಯ

ಪರ್ಲ್ ಆಫ್ ಆಫ್ರಿಕಾ ಟಿ20 ಸರಣಿಯ ಐದನೇ ಪಂದ್ಯದಲ್ಲಿ ಯುಎಇ ತಂಡ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿಗೆ 21 ವರ್ಷದ ವೇಗಿ ಮುಹಮ್ಮದ್ ಝುಹೈಬ್, ಅವರು ಕೇವಲ 3.3 ಓವರ್‌ಗಳಲ್ಲಿ 5 ವಿಕೆಟ್ ಕಬಳಿಸಿ ನೈಜೀರಿಯಾ ಬ್ಯಾಟಿಂಗ್ ಹಾದಿ ತಪ್ಪಿಸಿದರು. ಎಂಟೆಬ್ಬೆ ಕ್ರಿಕೆಟ್ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನೈಜೀರಿಯಾ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.
ಆದರೆ ಆರಂಭದಲ್ಲೇ ಆಕಿಫ್ ರಾಜ ಅವರ ಮಾರಕ ದಾಳಿಗೆ 2 ವಿಕೆಟ್ ಕಳೆದುಕೊಂಡಿತು. ಬಳಿಕ ಹೈದರ್ ಅಲಿ ಮತ್ತು ಝುಹೈಬ್ ಅವರ ಅಟ್ಟಹಾಸ ಆರಂಭವಾಯಿತು. ಯುಎಇ ತಂಡಕ್ಕೆ ನೀಡಲಾದ 59 ರನ್‌ಗಳ ಗುರಿ 4.5 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಸುಲಭವಾಗಿ ಮುಟ್ಟಲಾಯಿತು. ಈ ಗೆಲುವಿನಿಂದಾಗಿ ಯುಎಇ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.
ನಾಯಕ ಸಿಲ್ವಸ್ಟರ್ ಒಕೆಪೆ (4) ವಿಕೆಟ್ ಕಬಳಿಸುವ ಮೂಲಕ ಶುಭಾರಂಭ ಮಾಡಿದ ಝುಹೈಬ್ ಆ ಬಳಿಕ ಐಸಾಕ್ (17), ಮೊಹಮೀದ್ ಟೈವೊ (0), ಐಸಾಕ್ ಒಕೆಪೆ (0), ಪ್ರೊಸ್ಪರ್ ಉಸೇನಿ (6) ವಿಕೆಟ್ ಉರುಳಿಸಿದರು. ಈ ಮೂಲಕ ಕೇವಲ 3.3 ಓವರ್‌ಗಳಲ್ಲಿ 21 ರನ್ ನೀಡಿ 5 ವಿಕೆಟ್ಗಳನ್ನು ಕಬಳಿಸಿದರು. ಇತ್ತ ಮುಹಮ್ಮದ್ ಝುಹೈಬ್ ಅವರ ಮಾರಕ ದಾಳಿಗೆ ತತ್ತರಿಸಿದ ನೈಜೀರಿಯಾ ತಂಡವು 13.3 ಓವರ್‌ಗಳಲ್ಲಿ 58 ರನ್ಗಳಿಸಿ ಆಲೌಟ್ ಆಯಿತು.
ಅದರಂತೆ 59 ರನ್‌ಗಳ ಸುಲಭ ಗುರಿ ಪಡೆದ ಯುಎಇ ತಂಡವು 4.5 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟುವ ಮೂಲಕ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಪರ್ಲ್ ಆಫ್ ಆಫ್ರಿಕಾ ಟಿ20 ಸರಣಿಯ ಅಂಕ ಪಟ್ಟಿಯಲ್ಲಿ ಯುಎಇ ತಂಡವು ದ್ವಿತೀಯ ಸ್ಥಾನಕ್ಕೇರಿದೆ.
ನೈಜೀರಿಯಾ ಪ್ಲೇಯಿಂಗ್ 11: ಸುಲೈಮಾನ್ ರುನ್ಸೆವೆ , ಸೊಲೊಮನ್ ಚಿಲೆಮಾನ್ಯ (ವಿಕೆಟ್ ಕೀಪರ್) , ಅಖೆರೆ ಇಸೆಸೆಲೆ , ಐಸಾಕ್ ದನ್ಲಾಡಿ , ಸಿಲ್ವೆಸ್ಟರ್ ಒಕೆಪೆ (ನಾಯಕ) , ವಿನ್ಸೆಂಟ್ ಅಡೆವೊಯ್ , ಮೊಹಮೀದ್ ಟೈವೊ , ಪ್ರೊಸ್ಪರ್ ಉಸೇನಿ , ಅಬ್ದುಲ್ರಹ್ಮಾನ್ ಜಿಮೋಹ್ , ಪೀಟರ್ ಅಹೋ , ಐಸಾಕ್ ಒಕೆಪೆ.
ಯುಎಇ ಪ್ಲೇಯಿಂಗ್ 11: ಮುಹಮ್ಮದ್ ಝೊಹೈಬ್ , ಮುಹಮ್ಮದ್ ವಸೀಮ್ (ನಾಯಕ) , ಅಲಿಶನ್ ಶರಾಫು , ರಾಹುಲ್ ಚೋಪ್ರಾ (ವಿಕೆಟ್ ಕೀಪರ್) , ಆಸಿಫ್ ಖಾನ್ , ಎಥಾನ್ ಡಿಸೋಜಾ , ಸಘೀರ್ ಖಾನ್ , ಹೈದರ್ ಅಲಿ , ಅಕಿಫ್ ರಾಜ , ಮುಹಮ್ಮದ್ ಝುಹೈಬ್ , ಮುಹಮ್ಮದ್ ರೋಹಿದ್ ಖಾನ್.
ನಿಮ್ಮ ಪ್ರತಿಕ್ರಿಯೆ ಏನು?






