Darshan: ದರ್ಶನ್ ಪರ ಕೋರ್ಟ್’ಗೆ ಗೈರಾದ ಕಪಿಲ್ ಸಿಬಲ್: ಜಾಮೀನು ವಿಚಾರಣೆ ಮುಂದೂಡಿಕೆ

ಜುಲೈ 22, 2025 - 11:59
 0  23
Darshan: ದರ್ಶನ್ ಪರ ಕೋರ್ಟ್’ಗೆ ಗೈರಾದ ಕಪಿಲ್ ಸಿಬಲ್: ಜಾಮೀನು ವಿಚಾರಣೆ ಮುಂದೂಡಿಕೆ

ನವದೆಹಲಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ಮತ್ತು ಇತರ ಆರೋಪಿಗಳ ಜಾಮೀನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರಕ್ಕೆ ಮುಂದೂಡಿದೆ.

ಇಂದು ಬೆಳಿಗ್ಗೆ 10:30 ಸುಮಾರಿಗೆ ವಿಚಾರಣೆ ಆರಂಭವಾಗಿದ್ದು, ದರ್ಶನ್ ಪರವಾಗಿ ವಕೀಲ ಸಿದ್ದಾರ್ಥ್ ಧವೆ ಹಾಜರಿದ್ದರು. ಸರ್ಕಾರದ ಪರ ವಾದ ಮೊದಲೇ ಅಂತ್ಯವಾಗಿತ್ತು. ಆದರೆ, ದರ್ಶನ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಗೈರಾಗಿದ್ದ ಹಿನ್ನೆಲೆಯಲ್ಲಿ, ಅರ್ಜಿದಾರರ ಪರವಾಗಿ ಧವೆ ಒಂದು ದಿನದ ಕಾಲಾವಕಾಶ ನೀಡುವಂತೆ ಕೋರಿ ಮನವಿ ಸಲ್ಲಿಸಿದರು. ಸುಪ್ರೀಂ ಕೋರ್ಟ್ ಇದನ್ನು ಸ್ವೀಕರಿಸಿ ವಿಚಾರಣೆಯನ್ನು ಜುಲೈ 24, ಗುರುವಾರಕ್ಕೆ ಮುಂದೂಡಿದೆ.

ಹೆಚ್ಚುವರಿ ವಿಚಾರಣೆಯಲ್ಲಿ, ಹೈಕೋರ್ಟ್ ಜಾಮೀನು ಆದೇಶದ ವಿರುದ್ಧ ನ್ಯಾಯಪೀಠ ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದು, ದರ್ಶನ್ ವಿರುದ್ಧದ ಹಿಂದಿನ ಕೇಸ್ ಗಳ ದಾಖಲೆ ಸಹ ಸಲ್ಲಿಸುವಂತೆ ಸೂಚನೆ ನೀಡಿತ್ತು. ಪ್ರಾಸಿಕ್ಯೂಷನ್ ಪರ ವಕೀಲರು ಈಗಾಗಲೇ ಲಿಖಿತ ವಾದ ಮಂಡನೆಗಳನ್ನು ಸಲ್ಲಿಸಿದ್ದಾರೆ.

ಪ್ರಕರಣದ ವಿಚಾರಣೆ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹದೇವನ್ ಅವರಿದ್ದ ದ್ವಿಸದಸ್ಯ ಪೀಠದಲ್ಲಿ ನಡೆಯುತ್ತಿದೆ. ಗುರುವಾರದ ವಿಚಾರಣೆಯ ನಂತರ ದರ್ಶನ್ ಹಾಗೂ ಇತರ ಆರೋಪಿಗಳ ಜಾಮೀನು ಭವಿಷ್ಯ ನಿರ್ಧಾರವಾಗುವ ಸಾಧ್ಯತೆ ಇದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow