ಟಾಟಾ ಸಾಮ್ರಾಜ್ಯದ ನೂತನ ಉತ್ತರಾಧಿಕಾರಿಯಾಗಿ 'ನೋಯೆಲ್ ಟಾಟಾ' ನೇಮಕ!

ಅಕ್ಟೋಬರ್ 11, 2024 - 18:03
 0  17
ಟಾಟಾ ಸಾಮ್ರಾಜ್ಯದ ನೂತನ ಉತ್ತರಾಧಿಕಾರಿಯಾಗಿ 'ನೋಯೆಲ್ ಟಾಟಾ' ನೇಮಕ!

ನವದೆಹಲಿ: ರತನ್​ ಟಾಟಾ ಇಂದು ನಮ್ಮನ್ನು ಅಗಲಿದ್ದಾರೆ. ಆದರೆ ಅವರು ಕಟ್ಟಿಕೊಟ್ಟು ಹೋದ ಆದರ್ಶಗಳ, ಮಾನವೀಯ ಮೌಲ್ಯಗಳ ಬುತ್ತಿ ಇದೆಯಲ್ಲ, ಅದು ಈ ದೇಶ ಉಸಿರಾಡುವವರೆಗೂ ಕೂಡ ಸದಾ ಇರುತ್ತೆ. ಇನ್ನೂ ರತನ್ ಟಾಟಾ ನಿಧನದ ನಂತರ,ಟಾಟಾ ಟ್ರಸ್ಟ್‌ನ ಅಧಿಕಾರವನ್ನು ಯಾರು ವಹಿಸಿಕೊಳ್ಳುತ್ತಾರೆ ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ರತನ್ ಟಾಟಾ ಅವರ ಉತ್ತರಾಧಿಕಾರಿಗಾಗಿ ನಡೆಯುತ್ತಿದ್ದ ಹುಡುಕಾಟ ಪೂರ್ಣಗೊಂಡಿದೆ.ಟಾಟಾ ಸಾಮ್ಯಾಜ್ಯದ ಉತ್ತರಾಧಿಕಾರಿ ಹೆಸರು ಅಧಿಕೃತವಾಗಿ ಘೋಷಣೆಯಾಗಿದೆ.  

ನೋಯೆಲ್ ಟಾಟಾ ಇನ್ನು ಮುಂದೆ ಟಾಟಾ  ಟ್ರಸ್ಟ್‌ನ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಟಾಟಾ ಟ್ರಸ್ಟ್‌ನ ಮಹತ್ವದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.   67 ವರ್ಷದ ನೋಯೆಲ್ ಟಾಟಾ, ರತನ್ ಟಾಟಾ ಮಲಸಹೋದರ.  ರತನ್ ಟಾಟಾ ಅವರ ಪರಂಪರೆಯನ್ನು ಅವರ ಸಹೋದರ ನೋಯೆಲ್ ಟಾಟಾ ನಿರ್ವಹಿಸಲಿದ್ದಾರೆ.  

ರತನ್ ಅವರ ತಂದೆ ನವಲ್ ಟಾಟಾ ಅವರಿಗೆ ಎರಡು ವಿವಾಹವಾಗಿತ್ತು. ಮೊದಲ ಪತ್ನಿಗೆ ವಿಚ್ಛೇದನ ನೀಡಿ ಎರಡನೇ ಮದುವೆಯಾಗಿದ್ದರು. ರತನ್ ಮತ್ತು ಜಿಮ್ಮಿ ಟಾಟಾ ಅವರು ಮೊದಲ ಪತ್ನಿಯ ಮಕ್ಕಳಾಗಿದ್ದಾರೆ. ನೋಯಲ್ ಟಾಟಾ ಅವರು ಎರಡನೇ ಪತ್ನಿಯ ಮಗ. ನೋಯಲ್ ಅವರಿಗೆ ಒಂದು ಗಂಡು ಮಗು ಸೇರಿ ಮೂವರು ಮಕ್ಕಳಿದ್ದಾರೆ.

ನೋಯಲ್ ಟಾಟಾ ಅವರು ಬಹಳ ವರ್ಷಗಳಿಂದ ಟಾಟಾ ಗ್ರೂಪ್​ನ ವಿವಿಧ ಬ್ಯುಸಿನೆಸ್​ಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಟೈಟಾನ್ ಮತ್ತು ಟಾಟಾ ಸ್ಟೀಲ್ ಸಂಸ್ಥೆಗಳಿಗೆ ವೈಸ್ ಛೇರ್ಮನ್ ಆಗಿದ್ದಾರೆ. ಫ್ಯಾಷನ್ ಉಡುಪುಗಳ ಟ್ರೆಂಟ್ ಸಂಸ್ಥೆಯ ಛೇರ್ಮನ್ ಆಗಿದ್ದಾರೆ. ಎನ್​ಬಿಎಫ್​ಸಿ ಕ್ಷೇತ್ರದ ಟಾಟಾ ಇನ್ವೆಸ್ಟ್​ಮೆಂಟ್ ಕಾರ್ಪೊರೇಶನ್ ಸಂಸ್ಥೆಗೂ ಅವರೇ ಮುಖ್ಯಸ್ಥರಾಗಿದ್ದಾರೆ. ಇನ್ನು ವೋಲ್ಟಾಸ್ ಸಂಸ್ಥೆಯ ಮಂಡಳಿಯಲ್ಲೂ ಅವರು ಸ್ಥಾನ ಹೊಂದಿದ್ದಾರೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow