Breaking News: ಹಳಿ ಮೇಲೆ ಸಿಲಿಂಡರ್ ಇಟ್ಟು ರೈಲು ಉರುಳಿಸೋ ಯತ್ನ!

ಉತ್ತರ ಪ್ರದೇಶ:- ಕಾನ್ಪುರದಿಂದ ಫತೇಪುರ್ಗೆ ಬರುತ್ತಿದ್ದ ದೆಹಲಿ ಹೌರಾ ರೈಲ್ವೆ ಹಳಿಯಲ್ಲಿ ಗ್ಯಾಸ್ ಸಿಲಿಂಡರ್ ಇಟ್ಟು ರೈಲನ್ನು ಉರುಳಿಸುವ ಸಂಚು ನಡೆದ ಘಟನೆ ಜರುಗಿದೆ. ಕಾನ್ಪುರದ ಪ್ರೇಂಪುರ ರೈಲು ನಿಲ್ದಾಣದ ಬಳಿ ಲೂಪ್ ಲೈನ್ನಲ್ಲಿ ಎಲ್ಪಿಜಿ ಸಿಲಿಂಡರ್ ಇರಿಸಲಾಗಿತ್ತು. ಬೆಳಗ್ಗೆ 5.50ಕ್ಕೆ ಈ ಘಟನೆ ನಡೆದಿದೆ. ಲೋಕೋ ಪೈಲಟ್ ಮತ್ತು ಸಹಾಯಕ ಲೋಕೋ ಪೈಲಟ್ ತುರ್ತು ಬ್ರೇಕ್ ಮೂಲಕ ಗೂಡ್ಸ್ ರೈಲನ್ನು ನಿಲ್ಲಿಸಿದ್ದರು.
ರೈಲಿನಲ್ಲಿದ್ದ ರೈಲ್ವೆ ನೌಕರರು ಆರ್ಪಿಎಫ್ ಮತ್ತು ಇತರ ಇಲಾಖೆಯ ಜನರಿಗೆ ಮಾಹಿತಿ ನೀಡಿದರು. ರೈಲ್ವೆ ಹಳಿಯಲ್ಲಿ ಖಾಲಿ 5 ಕೆಜಿ ಸಿಲಿಂಡರ್ ಅನ್ನು ಇಡಲಾಗಿದೆ. ಪೈಲಟ್ ಮತ್ತು ಸಹಾಯಕ ಪೈಲಟ್ ಎಚ್ಚರಿಕೆಯಿಂದಾಗಿ ರೈಲನ್ನು ಉರುಳಿಸುವ ಸಂಚು ವಿಫಲವಾಗಿದೆ. ಈ ಘಟನೆ ಕುರಿತು ರೈಲ್ವೇ ಇಲಾಖೆ ತನಿಖೆಗೆ ಆದೇಶಿಸಿದೆ. ಈ ಕುರಿತು ಉತ್ತರ ಮಧ್ಯ ರೈಲ್ವೆ ವಲಯದ ಪ್ರಯಾಗ್ರಾಜ್ ವಿಭಾಗದ ಪಿಆರ್ಒ ಅಮಿತ್ ಸಿಂಗ್ ಮಾಹಿತಿ ನೀಡಿದ್ದಾರೆ.
ಕಳೆದ ಕೆಲವು ವಾರಗಳಲ್ಲಿ ಕಾನ್ಪುರದಲ್ಲಿ ಎರಡು ಬಾರಿ ರೈಲು ಅಪಘಾತವನ್ನು ತಪ್ಪಿಸಲಾಗಿದೆ. ಒಮ್ಮೆ ಟ್ರ್ಯಾಕ್ ಮೇಲೆ ಟ್ರಕ್ ಪಲ್ಟಿಯಾಗಿತ್ತು. ಕಳೆದ ತಿಂಗಳು, ಹಳಿ ಮೇಲೆ ಬಂಡೆಯನ್ನು ಇರಿಸಲಾಗಿತ್ತು, ನಂತರ ರೈಲಿನ 22 ಬೋಗಿಗಳು ಹಳಿತಪ್ಪಿದವು. ಈ ಅವಘಡವೂ ರಾತ್ರಿ ವೇಳೆ ಸಂಭವಿಸಿದೆ. ಆದರೆ, ಈ ಅವಘಡದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ರಾಜಸ್ಥಾನದ ಅಜ್ಮೀರ್ ನಲ್ಲಿ ದುಷ್ಕರ್ಮಿಗಳು ರೈಲು ಹಳಿಗಳ ಮೇಲೆ ಸಿಮೆಂಟ್ ಬ್ಲಾಕ್ಗಳನ್ನು ಇರಿಸಿ, ರೈಲು ಹಳಿ ತಪ್ಪಿಸುವ ಯತ್ನ ನಡೆಸಿದ್ದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






