ಹೀನ ಕೃತ್ಯ: ಮಗಳ ಎದುರೇ ತಾಯಿ ಮೇಲೆ ಅತ್ಯಾಚಾರ!

ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಒಂದು ವರ್ಷ ವಯಸ್ಸಿನ ಪುಟ್ಟ ಮಗುವಿನಿಂದ ಹಿಡಿದು 70-80 ವರ್ಷದ ವೃದ್ಧೆಯೂ ಅತ್ಯಾಚಾರಕ್ಕೆ ಒಳಗಾಗಿರುವ ಘಟನೆಗಳು ನಡೆಯುತ್ತಿವೆ. ಸಮಾಜಕ್ಕೆ ಭಯಪಟ್ಟು ಹೇಳದೇ ಉಳಿದಿರುವ ಕಥೆಗಳು ಮತ್ತೆಷ್ಟೋ. ನಗರ, ಹಳ್ಳಿ, ವಯಸ್ಸಿನ ವ್ಯತ್ಯಾಸದಲ್ಲಿ ಪ್ರತಿದಿನ ಸಾಕಷ್ಟು ಮಹಿಳೆಯರು ಕಿರುಕುಳುಕ್ಕೆ ಒಳಗಾಗುತ್ತಿದ್ದಾರೆ.
ಇದೀಗ ದೆಹಲಿಯ ಸ್ವರೂಪ್ ನಗರದಲ್ಲಿ ಫಾರ್ಮ್ಹೌಸ್ನಲ್ಲಿ ಮಗಳ ಎದುರೇ ತಾಯಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ಬೆಳಕಿಗೆ ಬಂದಿದೆ.
ಬಿಹಾರದ ಮುಜಫರ್ಪುರ ಮೂಲದ 35 ವರ್ಷದ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆ ಬುಧವಾರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಆರೋಪಿ ಧರ್ಮಿಂದರ್ ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆಸುವ ಮೊದಲು ತಾಯಿ ಮತ್ತು ಮಗಳ ಇಬ್ಬರ ಕೈಕಾಲುಗಳನ್ನು ಕಟ್ಟಿಹಾಕಿದ್ದ.
ಕಾದಿಪುರದ ತೋಟದ ಮನೆಯ ವರಾಂಡಾದಲ್ಲಿ ತಾನು ಮತ್ತು ತನ್ನ 11 ವರ್ಷದ ಮಗಳು ಮಲಗಿದ್ದಾಗ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಮಹಿಳೆ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಅವರು ಕೂಡ ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಏಪ್ರಿಲ್ 20 ಮತ್ತು 21 ರ ಮಧ್ಯರಾತ್ರಿ 2 ರಿಂದ 2.30 ರ ಸುಮಾರಿಗೆ, ಅದೇ ಪ್ರದೇಶದಲ್ಲಿ ವಾಸಿಸುವ ಆರೋಪಿ, ಮುಖಕ್ಕೆ ಬಟ್ಟೆ ಕಟ್ಟಿಕೊಂಡು ತೋಟದ ಮನೆಯ ಗೋಡೆಯನ್ನು ಹತ್ತಿ, ಮಹಿಳೆ ಆಕೆಯ ಮಗಳ ಜತೆ ಮಲಗಿದ್ದಾಗ ಕೈಕಾಲುಗಳನ್ನು ಕಟ್ಟಿ, ಬೆದರಿಸಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ದಿನಗೂಲಿ ಕಾರ್ಮಿಕ ಧರ್ಮಿಂದರ್ ಹಲ್ಲೆಯ ನಂತರ ತೋಟದ ಮನೆಯ ಗೋಡೆ ಹಾರಿ ಪರಾರಿಯಾಗಿದ್ದಾನೆ. ಆರೋಪಿಯ ವಿರುದ್ಧ ಅತ್ಯಾಚಾರ ಮತ್ತು ಮನೆ ಅತಿಕ್ರಮಣ ಸೇರಿದಂತೆ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






