Anchor Anushree: ಆ್ಯಂಕರ್ ಅನುಶ್ರೀಗೆ ಕೊನೆಗೂ ಕೂಡಿಬಂತು ಕಂಕಣ ಭಾಗ್ಯ! ಇವರೇ ನೋಡಿ ವರ..

ಜನಪ್ರಿಯ ಆ್ಯಂಕರ್ ಮತ್ತು ನಟಿ ಅನುಶ್ರೀ ಅವರು ಈ ವರ್ಷದ ಆಗಸ್ಟ್ 28ರಂದು ಮದುವೆ ಆಗುತ್ತಿದ್ದಾರೆ ಎಂಬ ಮಾಹಿತಿ ಹೊರ ಬಂದಿದೆ. ಬೆಂಗಳೂರಿನ ಉದ್ಯಮಿ ರೋಷನ್ ಅವರೊಂದಿಗೆ ಅವರು ಪಕ್ಕಾ ಅರೇಂಜ್ ಮ್ಯಾರೇಜ್ ಮಾಡಿಕೊಂಡು ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡಲಿದ್ದಾರೆ.
ಅನುಶ್ರೀ ಅವರು ನಟನೆಗಿಂತ ಆ್ಯಂಕರಿಂಗ್ ಕ್ಷೇತ್ರದಲ್ಲಿ ಹೆಚ್ಚು ಗುರುತಿಸಿಕೊಂಡವರು. ಜೀ ಕನ್ನಡ ಸೇರಿದಂತೆ ಹಲವು ಪ್ರಮುಖ ವಾಹಿನಿಗಳ ಕಾರ್ಯಕ್ರಮಗಳಲ್ಲಿ ನಿರೂಪಕರಾಗಿ ಕೆಲಸ ಮಾಡಿರುವ ಅವರು, ತಮ್ಮ ಧೈರ್ಯ, ನಿರ್ವಹಣೆ ಹಾಗೂ ಪ್ರಸ್ತುತ ಪಡಿಸುವ ಶೈಲಿಯಿಂದ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದಾರೆ.
ಇದೇ ಕಾರಣದಿಂದಾಗಿ ಹಲವು ವರ್ಷಗಳಿಂದ ಅನುಶ್ರೀ ಅವರ ಮದುವೆ ಕುರಿತಾಗಿ ಕುತೂಹಲವಿತ್ತು. ಈಗ ಅವರ ಮದುವೆ ದಿನಾಂಕ ಬಹಿರಂಗವಾದ ಸುದ್ದಿ ಅಭಿಮಾನಿಗಳಲ್ಲಿ ಸಂತಸ ತಂದಿದೆ. ಈ ಮದುವೆ ಬೆಂಗಳೂರಿನಲ್ಲಿ ಬಹಳ ಅದ್ದೂರಿಯಾಗಿ ನಡೆಯಲಿದೆ ಎನ್ನಲಾಗಿದೆ. ಆದರೆ ಇದುವರೆಗೆ ಅನುಶ್ರೀ ಅವರ ಕಡೆಯಿಂದ ಯಾವುದೇ ಅಧಿಕೃತ ಘೋಷಣೆ ಹೊರ ಬಂದಿಲ್ಲ. ಮುಂದಿನ ದಿನಗಳಲ್ಲಿ ಅವರು ತಮ್ಮ ಮದುವೆ ಬಗ್ಗೆ ಸ್ವತಃ ಮಾಹಿತಿ ನೀಡುವ ಸಾಧ್ಯತೆ ಇದೆ.
ನಿಮ್ಮ ಪ್ರತಿಕ್ರಿಯೆ ಏನು?






