ಯುಗಾಂತವಾಯ್ತಾ ಕಿಂಗ್ ಕೊಹ್ಲಿ ಟೆಸ್ಟ್ ಕೆರಿಯರ್!? ಯುವ ಆಟಗಾರರಿಗೆ ಸಿಗುತ್ತಾ ಚಾನ್ಸ್?

ಡಿಸೆಂಬರ್ 18, 2024 - 10:25
 0  11
ಯುಗಾಂತವಾಯ್ತಾ ಕಿಂಗ್ ಕೊಹ್ಲಿ ಟೆಸ್ಟ್ ಕೆರಿಯರ್!? ಯುವ ಆಟಗಾರರಿಗೆ ಸಿಗುತ್ತಾ ಚಾನ್ಸ್?

ಕಿಂಗ್ ಕೊಹ್ಲಿ ಅಂದ್ರೆ ಯಾರಿಗ್ ತಾನೇ ಇಷ್ಟವಿಲ್ಲ. ಟೀಮ್ ಇಂಡಿಯಾ ಪಾಲಿನ ರಾಜ ವಿರಾಟ್ ಅಂದ್ರೆ ತಪ್ಪಾಗೋದಿಲ್ಲಾ. ಆಟದಲ್ಲಿ ಅವರು ಕೊಡೋ ಎನರ್ಜಿ ನೆಕ್ಸ್ಟ್ ಲೆವೆಲ್. 

ವಿರಾಟ್ ವೀರಾವೇಶ, ಪರ್ತ್ ಟೆಸ್ಟ್​ನ 2ನೇ ಇನ್ನಿಂಗ್ಸ್​ಗೆ ಸೀಮಿತವಾಯ್ತು. ಎರಡಂಕಿ ರನ್ ಗಳಿಸಲು ಆಗದ ವಿರಾಟ್​​ಗೆ ಯುಗಾಂತ್ಯ ಶುರುವಾಗಿದ್ಯಾ ಅನ್ನೋ ಪ್ರಶ್ನೆಯೂ ಶುರುವಾಗಿದೆ. 

ಪರ್ತ್​, ಅಡಿಲೇಡ್​ನಲ್ಲಿ ಔಟ್​ ಸೈಡ್​ ದಿ ಆಫ್ ಸ್ಟಂಪ್ಸ್​ ಎಸೆತಗಳನ್ನೇ ಎದುರಿಸಿ ಕೈಸುಟ್ಟುಕೊಂಡಿದ್ದ ವಿರಾಟ್, ಗಬ್ಬಾ ಟೆಸ್ಟ್​ಗೂ ಮುನ್ನ ನೆಟ್ಸ್​ನಲ್ಲಿ ವಿಕ್ನೇಸ್ ಮೇಲೆಯೇ ವರ್ಕೌಟ್ ಮಾಡಿದ್ರು. ಆಫ್ ಸ್ಟಂಪ್​ ಎಸೆತಗಳನ್ನ ಎದುರಿಸದಂತೆ ಪೋಕಸ್ ಮಾಡಿದ್ರು. ಆದ್ರೆ ಮತ್ತದೇ ಚಾಳಿಯನ್ನು ಮುಂದುವರಿಸಿದರು. ಇದು ಸಹಜವಾಗೇ ವಿರಾಟ್, ತಪ್ಪಿನ ಪಾಠ ಕಲಿಯಲು ಮತ್ತೆಷ್ಟು ಟೈಮ್ ಬೇಕು ಅನ್ನೋ ಪ್ರಶ್ನೆ ಮಾಡಿದೆ.

ಸತತ 4 ಇನ್ನಿಂಗ್ಸ್​ಗಳಲ್ಲಿ ಸೇಮ್ ಟು ಸೇಮ್ ವಿರಾಟ್ ಔಟಾಗಿದ್ದಾರೆ. ಪರ್ತ್​ನ 2ನೇ ಇನ್ನಿಂಗ್ಸ್​ ಒಂದು ಬಿಟ್ರೆ, ಉಳಿದೆಲ್ಲಾ ಇನ್ನಿಂಗ್ಸ್​ಗಳಲ್ಲಿ ಬಂದಷ್ಟೇ ವೇಗವಾಗಿ ಪೆವಿಲಿಯನ್​ಗೆ ಹಿಂತಿರುಗಿದ್ದಾರೆ. ವಿರಾಟ್​ ಕೊಹ್ಲಿಯ ಈ ವೈಫಲ್ಯ ನೋಡಿದ್ರೆ ಏನಾಗಿದ್ಯಾಪ್ಪ ವಿರಾಟ್​ಗೆ ಅನ್ನೋ ಪ್ರಶ್ನೆಯ ಜೊತೆಗೆ ಕೊಹ್ಲಿ ಆಟ ಮುಗೀತಾ ಎಂಬ ಅನುಮಾನವೂ ಶುರುವಾಗುತ್ತೆ. ವಿರಾಟ್ ಈ ರೀತಿ ಔಟಾಗಿರುವುದು ಈ ಸಿರೀಸ್​ನ ನಾಲ್ಕು ಇನ್ನಿಂಗ್ಸ್​ಗಳಲ್ಲಿ ಮಾತ್ರವೇ ಅಲ್ಲ. ಬಾಂಗ್ಲಾ ಹಾಗೂ ನ್ಯೂಜಿಲೆಂಡ್ ಟೆಸ್ಟ್​ ಸರಣಿಗಳಲ್ಲೂ ಇದೇ ಮಾದರಿಯಲ್ಲೇ ಔಟಾಗಿದ್ರು. ಇದು ಸಹಜವಾಗೇ ವಿರಾಟ್ ಯುಗಾಂತ್ಯವಾಯ್ತಾ ಅನ್ನೋ ಚರ್ಚೆಯ ಜೊತೆ ಮೆಂಟಲ್ ಇಶ್ಯೂಸ್​ ಇದೆಯಾ ಎಂಬ ಪ್ರಶ್ನೆಯನ್ನು ಹುಟ್ಟಿಹಾಕಿದೆ.

ವಿರಾಟ್ 3 ರನ್​ಗೆ ವಿಕೆಟ್ ಒಪ್ಪಿಸಿದ್ದೇ ಒಪ್ಪಿಸಿದ್ದು. ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್​ ಫೈರ್ ಆಗಿದ್ದಾರೆ. ದಶಕಗಳಿಂದ ಅದೇ ವಿಕ್ನೇಸ್​ ಔಟ್ ಆಗ್ತಿರುವ ವಿರಾಟ್, ಬುದ್ಧಿಕಲಿಯಲ್ಲಿ ಎಂದು ಕಿಡಿಕಾರಿದ್ದಾರೆ. ನಂತರದ ಪಂದ್ಯದಿಂದಲೇ ಕಿತ್ತೆಸೆಯುವಂತೆ ಒತ್ತಾಯಿಸಿರುವ ಅಭಿಮಾನಿಗಳು, ನಿವೃತ್ತಿ ನೀಡುವುದು ಒಳಿತು ಎಂಬ ಸಲಹೆ ನೀಡಿದ್ದಾರೆ. 

ಕೊಹ್ಲಿ ಅಂಡ್ ಕೊಹ್ಲಿ ಫ್ಯಾನ್ಸ್​ ದೃಷ್ಟಿಯಲ್ಲಿ ನಿವೃತ್ತಿ ಬೇಡದಿರಬಹುದು. 36 ವರ್ಷದ ವಿರಾಟ್, ಫೋಕಸ್ ಕಡಿಮೆಯಾಗ್ತಿದೆ. ಮೊದಲಿನ ಬ್ಯಾಟಿಂಗ್ ಖದರ್​​ ಮಾಯವಾಗಿದೆ. ಈ ನಿಟ್ಟಿನಲ್ಲಿ ಲಾಂಗ್​ ಟರ್ಮ್​ನಿಂದ ವಿರಾಟ್​ ದೂರ ಉಳಿದು, ಏಕದಿನ ಕ್ರಿಕೆಟ್​ನತ್ತ ಹೆಚ್ಚು ಫೋಕಸ್​ ಮಾಡಬೇಕಿದೆ. ಈ ವಿಚಾರದಲ್ಲಿ ವಿರಾಟ್, ಧೋನಿಯನ್ನ ಫಾಲೋ ಮಾಡಬೇಕಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow