4ನೇ ತರಗತಿ ವಿದ್ಯಾರ್ಥಿನಿಗೆ ಹೃದಯಾಘಾತ! ಟೀಚರ್ ಕಣ್ಣೆದುರೇ ಕೊನೆಯುಸಿರೆಳೆದ ಬಾಲಕಿ!

ಜುಲೈ 17, 2025 - 22:18
 0  21
4ನೇ ತರಗತಿ ವಿದ್ಯಾರ್ಥಿನಿಗೆ ಹೃದಯಾಘಾತ! ಟೀಚರ್ ಕಣ್ಣೆದುರೇ ಕೊನೆಯುಸಿರೆಳೆದ ಬಾಲಕಿ!

ಈಗೀಗ ಹೃದಯಾಘಾತ ಬಹಳ ಸಾಮಾನ್ಯ ಕಾಯಿಲೆಯಾಗಿಬಿಟ್ಟಿದೆ. 30 ವರ್ಷ ಮೇಲ್ಪಟ್ಟವರಿಗೂ ಈಗ ಹೃದಯಾಘಾತ ಕಾಣಿಸಿಕೊಳ್ಳುತ್ತಿದೆ. ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಮಧ್ಯವಯಸ್ಸಿನವರಲ್ಲಿ ಮಾತ್ರವಲ್ಲದೆ ಸಣ್ಣ ಮಕ್ಕಳಲ್ಲೂ ಈಗೀಗ ಹೃದಯಾಘಾತ ಉಂಟಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ 9 ವರ್ಷದ ಬಾಲಕಿ ಹಠಾತ್ತನೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಪ್ರಾಚಿ ಕುಮಾವತ್ (9) ಸಿಕಾರ್ ದಂತಾ ಪಟ್ಟಣದ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಳು. ಕಳೆದ ಎರಡು ಅಥವಾ ಮೂರು ದಿನಗಳಿಂದ ಮಗು ಶೀತದಿಂದಾಗಿ ಶಾಲೆಗೆ ಹೋಗಿರಲಿಲ್ಲ. ಸೋಮವಾರ ಶಾಲೆಗೆ ಹೋಗಿದ್ದಳು. ಬೆಳಗಿನ ಪ್ರಾರ್ಥನೆಯಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದಳು. ಅಲ್ಲಿಯವರೆಗೆ, ತುಂಬಾ ಉತ್ಸುಕಳಾಗಿ ಮತ್ತು ಆರೋಗ್ಯವಾಗಿ ಕಾಣಿಸಿಕೊಂಡಿದ್ದ ಮಗು, ಊಟಕ್ಕೆ ಕುಳಿತ ನಂತರ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾಳೆ.

ಇದರಿಂದ ಎಚ್ಚೆತ್ತ ಶಾಲಾ ಆಡಳಿತ ಮಂಡಳಿಯು ಮಗುವನ್ನು ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿತು. ಆದರೆ, ಮಗುವಿಗೆ ನಾಡಿಮಿಡಿತವಿಲ್ಲ, ರಕ್ತದೊತ್ತಡ ಕಡಿಮೆಯಾಗಿದೆ ಮತ್ತು ಉಸಿರಾಡುತ್ತಿಲ್ಲ ಎಂದು ಅಲ್ಲಿನ ವೈದ್ಯರು ಹೇಳಿದರು. ಬಾಲಕಿ ಹೃದಯಾಘಾತದ ಲಕ್ಷಣಗಳನ್ನು ತೋರಿಸುತ್ತಿದೆ ಎಂದು ಅವರು ಹೇಳಿದರು. ನಂತರ, ಬಾಲಕಿಯನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಬಾಲಕಿ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ವೈದ್ಯರು ದೃಢಪಡಿಸಿದರು.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow