ರೌಡಿಶೀಟರ್ ಜಗ್ಗನಿಗೆ ಶಾಸಕ ಬೈರತಿ ಬಸವರಾಜ್ ರಕ್ಷೆ.!? ಬಿಕ್ಲ ಶಿವ ಕೊಲೆ ಪ್ರಕರಣಕ್ಕೆ ರಾಜಕೀಯ ಲಿಂಕ್

ಬೆಂಗಳೂರು: ಬಿಕ್ಲ ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ರೌಡಿಶೀಟರ್ ಜಗ್ಗನಿಗೆ ಬಿಜೆಪಿ ಶಾಸಕ ಬೈರತಿ ಬಸವರಾಜ್ ರಕ್ಷೆಯಾಗಿದ್ದಾರೆ ಎಂಬ ಆರೋಪಗಳು ಹೆಚ್ಚುತ್ತಿವೆ. ಈಗಾಗಲೇ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ್ A5 ಆರೋಪಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ದೃಢಪಡಿಸಿವೆ.
ಮಾಹಿತಿಯ ಪ್ರಕಾರ, ಇತ್ತೀಚೆಗಿನ ಹಲವು ಸಂದರ್ಭಗಳಲ್ಲಿ ಜಗ್ಗನನ್ನು ಪೊಲೀಸರು ಅರೆಸ್ಟ್ ಮಾಡಲು ಮುಂದಾದಾಗ ಶಾಸಕರಿಂದ ಮಧ್ಯಪ್ರವೇಶ ಆಗಿದ್ದಂತಾಗಿದೆ. ಹಲವಾರು ಸಂದರ್ಭಗಳಲ್ಲಿ, "ಇವನು ನಮ್ಮವರಾ... ಬಿಡಿ" ಎಂಬ ಶೈಲಿಯಲ್ಲಿ ಬಸವರಾಜ್ ಪದೇಪದೇ ಜಗ್ಗನ ಪರ ವಹಿಸಿದ್ದರ ಮಾಹಿತಿಯೂ ಲಭ್ಯವಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ಸಿಬಿ ವಿಜಯೋತ್ಸವ ಸಂದರ್ಭದಲ್ಲಿ, ಜಗ್ಗ ಮತ್ತು ಅವರ ಟೀಂ ಸ್ಟೇಡಿಯಂ ಎಂಟ್ರಿ ಗೇಟ್ ಬಳಿ ಪೊಲೀಸರೊಂದಿಗೆ ತಳ್ಳಾಟ, ನೂಕಾಟ ನಡೆಸಿದ ಪ್ರಕರಣದಲ್ಲೂ ಅವರು ಭಾಗಿಯಾಗಿದ್ದರು. ಬಳಿಕ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು, ಶಾಸಕರ ಕರೆಗೆ ಬೆಲೆ ನೀಡಿ ಅರೆಸ್ಟ್ ಪ್ರಕ್ರಿಯೆ ನಿಲ್ಲಿಸಿದ್ದರು ಎಂಬ ಮಾಹಿತಿ ಹಿನ್ನಲೆಯಲ್ಲಿ ಹೊಸ ತಿರುವು ಸಿಕ್ಕಿದೆ.
ಪೊಲೀಸರು ಈಗಾಗಲೇ ಆರೋಪಿಗಳ ಮೊಬೈಲ್ ಕಾನ್ಟ್ಯಾಕ್ಟ್ ಡೀಟೇಲ್ಸ್ ಪರಿಶೀಲನೆ ನಡೆಸುತ್ತಿದ್ದಾರೆ. ಶಾಸಕರಿಗೆ, ಜಗ್ಗ ಹಾಗೂ ಇತರ ಬಂಧಿತರ ಜೊತೆ ಇರುವ ಸಂಪರ್ಕ ಹಾಗೂ ಸಂವಹನದ ನೆಲೆಯನ್ನು ದೃಢಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆಯೇ, ಪೊಲೀಸರು ಶಾಸಕರ ವಿರುದ್ಧ ಇರುವ ನೇರ ಆರೋಪಗಳು, ಕಾನ್ಟ್ಯಾಕ್ಟ್ ಡೀಟೇಲ್ಸ್, ಮತ್ತು ಸಾಕ್ಷ್ಯಾಧಾರಗಳು ಆಧರಿಸಿ ಬೈರತಿ ಬಸವರಾಜ್ ಅವರನ್ನು ಬಂಧಿಸಲು ತಯಾರಿ ನಡೆಸುತ್ತಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ.
ನಿಮ್ಮ ಪ್ರತಿಕ್ರಿಯೆ ಏನು?






