ENG vs IND 2025: ಗಿಲ್ ವಿರಾಟ್ ಕೊಹ್ಲಿಯನ್ನು ಕಾಪಿ ಮಾಡಲು ಪ್ರಯತ್ನಿಸುತ್ತಿದ್ದಾರೆ: ಮಾಜಿ ಕ್ರಿಕೆಟಿಗನ ಟೀಕೆ

ಲಂಡನ್: ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತದ ನಾಯಕ ಶುಭಮನ್ ಗಿಲ್ ಅವರ ಆಕ್ರಮಣಕಾರಿ ಧೋರಣೆ ಮತ್ತು ಮಾತಿನ ಚಕಮಕಿ ವಿರುದ್ಧ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಟೀಕೆ ಮಾಡಿದ್ದಾರೆ.
ಪಂದ್ಯದ ಮೂರನೇ ದಿನದಾಟದ ಕೊನೆಯಲ್ಲಿ ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್ಮನ್ ಝಾಕ್ ಕ್ರಾಲಿ ಜೊತೆ ಗಿಲ್ ವಾಗ್ವಾದ ನಡೆಸಿದ್ದರು. ಈ ಪ್ರಸಂಗವನ್ನು ಉಲ್ಲೇಖಿಸಿ ಮನೋಜ್ ತಿವಾರಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಗಿಲ್ ವಿರಾಟ್ ಕೊಹ್ಲಿಯನ್ನು ಅನುಕರಿಸಲು ಪ್ರಯತ್ನಿಸುತ್ತಿದ್ದಾರೆ. ಅವರ ಶೈಲಿಯ ಮಾತು ಮತ್ತು ವರ್ತನೆ ಇದನ್ನು ತೋರಿಸುತ್ತದೆ. ಇದು ಅವರ ಆಟದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ" ಎಂದು ಹೇಳಿದರು.
ಗಿಲ್ ಅವರಿಗೆ ಅವರದೇ ಆದ ಶೈಲಿ ಇದೆ. ಅವರು ಯಾವುದನ್ನೂ ಸಾಬೀತುಪಡಿಸಬೇಕಾದ ಅಗತ್ಯವಿಲ್ಲ. ನಿರಂತರವಾಗಿ ಉತ್ತಮ ಆಟವಾಡುವುದು ಅವರ ಮುಖ್ಯ ಗುರಿಯಾಗಿರಬೇಕು" ಎಂದು ತಿವಾರಿ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ನಲ್ಲಿ ಗಿಲ್ ಆಕ್ರಮಣಕಾರಿಯಾಗಿ ಆಡಿದರೂ, ಅವರ ಆಟದ ಶೈಲಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಚರ್ಚೆಗಳು ನಡೆಯುತ್ತಿವೆ. ಮುಂದಿನ ಪಂದ್ಯಗಳಲ್ಲಿ ಗಿಲ್ ತಮ್ಮ ನೈಜ ಶೈಲಿಗೆ ಮರಳುತ್ತಾರಾ ಎಂಬುದು ಈಗ ಕುತೂಹಲ ಮೂಡಿಸಿದೆ.
ನಿಮ್ಮ ಪ್ರತಿಕ್ರಿಯೆ ಏನು?






