ಇಂದು RCB vs PBKS ಪಂದ್ಯ: ಟಾಸ್ ಗೆದ್ದ ಆರ್ ಸಿಬಿ ಬೌಲಿಂಗ್ ಆಯ್ಕೆ..!

ಎಪ್ರಿಲ್ 20, 2025 - 16:01
 0  10
ಇಂದು RCB vs PBKS ಪಂದ್ಯ: ಟಾಸ್ ಗೆದ್ದ ಆರ್ ಸಿಬಿ ಬೌಲಿಂಗ್ ಆಯ್ಕೆ..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಮತ್ತೊಂದು ಹೈವೋಲ್ಟೇಜ್ ಮ್ಯಾಚ್ ಇಂದು ನಡೆಯುತ್ತಿದೆ. ಪಂಜಾಬ್ ವಿರುದ್ಧದ ಇನ್ನೊಂದು ಪಂದ್ಯ ಚಂಡೀಗಢದ ಮುಲ್ಲನ್ಪುರ್ನ ಮಹಾರಾಜ ಯಾದವೀಂದ್ರ ಸಿಂಗ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಭಾನುವಾರ ಆಗಿದ್ದರಿಂದ ಡಬಲ್ ಹೆಡ್ಡರ್ ಪಂದ್ಯದಲ್ಲಿ ಆರ್ಸಿಬಿ ಹಾಗೂ ಪಂಜಾಬ್ ನಡುವಿನ ಪಂದ್ಯವೇ ಮೊದಲು ಆರಂಭವಾಗಿದೆ.

ಮೊದಲಿಗೆ ಟಾಸ್ ಗೆದ್ದಿರುವ ಆರ್ ಸಿಬಿ ನಾಯಕ ರಜತ್ ಪಾಟಿದಾರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಅದರಂತೆ ಮೊದಲಿಗೆ ಪಂಜಾಬ್ ಬ್ಯಾಟಿಂಗ್ ಮಾಡಲಿದೆ.

ಪಂಜಾಬ್ ಹಾಗೂ ಆರ್ಸಿಬಿ ನಡುವಿನ ಸೋಲು, ಗೆಲುವುಗಳನ್ನು ನೋಡುವುದಾದ್ರೆ ಈ ವರೆಗೆ ಈ ಎರಡು ತಂಡಗಳು ಒಟ್ಟು 34 ಬಾರಿ ಪೈಪೋಟಿಗೆ ಬಿದ್ದಿವೆ. ಇದರಲ್ಲಿ ಆರ್ಸಿಬಿ 16 ಪಂದ್ಯಗಳಲ್ಲಿ ಗೆಲುವು ಪಡೆದಿದ್ರೆ ಪಂಜಾಬ್ ತಂಡದ ಕೊನೆಯ ಗೆಲುವು ಸೇರಿ 18 ಬಾರಿ ವಿಜಯ ಪತಾಕೆ ಹಾರಿಸಿದೆ. ಆದ್ರೆ ಇಂದಿನ ಪಂದ್ಯ ಆರ್ಸಿಬಿಯ ಪ್ರತಿಷ್ಠೆ ಆಗಿದೆ. ಸೋಲಿಗೆ ಸೇಡು ತೀರಿಸಿಕೊಳ್ಳಬೇಕಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow