ಬಿಕ್ಲು ಶಿವ ಕೊಲೆ ಕೇಸ್: ಆರೋಪಿ ಜಗ್ಗ ದುಬೈಗೆ ಎಸ್ಕೇಪ್ - ರೋಚಕ ಮಾಹಿತಿ ಬಯಲು

ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ಪೊಲೀಸರ ತನಿಖೆಯಲ್ಲಿ ಮತ್ತಷ್ಟು ಸ್ಫೋಟಕ ಸಂಗತಿಗಳು ಬೆಳಕಿಗೆ ಬಂದಿವೆ. ಸದ್ಯ ಪೊಲೀಸರು ರೌಡಿ ಶೀಟರ್ ಬಿಕ್ಲುವನ್ನು ಕೊಂದ ಆರೋಪಿಗಳ ಜಾತಕ ಜಾಲಾಡುತ್ತಿದ್ದಾರೆ. ಇದೀಗ ಕೊಲೆ ಪ್ರಕರಣದಲ್ಲಿ A5 ಆಗಿರುವ ಬಿಜೆಪಿ ಶಾಸಕ ಭೈರತಿ ಬಸವರಾಜ್ ವಿರುದ್ಧ ಪೊಲೀಸರು ಸಾಕ್ಷ್ಯ ಪತ್ತೆಗೆ ಮುಂದಾಗಿದ್ದಾರೆ.
ಇನ್ನೂ ರೌಡಿಶೀಟರ್ ಶಿವಪ್ರಕಾಶ್ ಕೊಲೆ ಪ್ರಕರಣದ ಎ1 ಆರೋಪಿ ಜಗದೀಶ್ ಅಲಿಯಾಸ್ ಜಗ್ಗ ಹತ್ಯೆ ಬಳಿಕ ದುಬೈಗೆ ಎಸ್ಕೇಪ್ ಆಗಿದ್ದಾನೆ. ಶಿವಪ್ರಕಾಶ್ ಕೊಲೆಯಾದ ಎರಡೇ ದಿನದಲ್ಲಿ ಜಗದೀಶ್ ಬೆಂಗಳೂರಿನಿಂದ ಚೆನ್ನೈಗೆ ಹೋಗಿ ಅಲ್ಲಿಂದ ದುಬೈಗೆ ಎಸ್ಕೇಪ್ ಆಗಿರುವ ಬಗ್ಗೆ ಅಧಿಕಾರಿಗಳಿಗೆ ದಾಖಲೆಗಳು ಸಿಕ್ಕಿವೆ.
ಜಗದೀಶ್ ಪತ್ತೆಗಾಗಿ ನಾಲ್ಕು ವಿಶೇಷ ತಂಡಗಳು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳದಲ್ಲಿ ತೀವ್ರ ಹುಡುಕಾಟ ನಡೆಸಿದೆ. ಕೊಲೆ ಪ್ರಕರಣದಲ್ಲಿ ಜಗದೀಶ್ ಬಂಧನವೇ ಅತಿಮುಖ್ಯವಾಗಿತ್ತು. ಈ ನಡುವೆ ಜಗದೀಶ್ ವಿದೇಶಕ್ಕೆ ಎಸ್ಕೇಪ್ ಆಗಿರೋದು ಪೊಲೀಸರ ತನಿಖೆಗೆ ಹಿನ್ನಡೆಯಾಗಿದೆ. ಜಗದೀಶ್ ಪತ್ತೆಗಾಗಿ ಪೊಲೀಸರು ಈಗಾಗಲೇ ಲುಕೌಟ್ ನೋಟಿಸ್ ಜಾರಿ ಮಾಡಿದ್ದು, ವಿದೇಶದಿಂದ ಕರೆಸಿಕೊಳ್ಳಲು ಕೇಂದ್ರ ಗೃಹ ಇಲಾಖೆಯಿಂದ ರೆಡ್ ಕಾರ್ನರ್ ನೋಟಿಸ್ ಜಾರಿಗೆ ಸಿದ್ಧತೆ ನಡೆಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






