ನಾಪತ್ತೆಯಾಗಿದ್ದ ವಿಮಾನ ಪತನ: 50 ಮಂದಿ ಪ್ರಯಾಣಿಕರು ಸಾವು..!

ರಷ್ಯಾ: ಇತ್ತೀಚೆಗಷ್ಟೇ ಅಹಮದಾಬಾದ್ನಲ್ಲಿ ಸಂಭವಿಸಿದ್ದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 270 ಮಂದಿ ಪ್ರಾಣ ಕಳೆದುಕೊಂಡಿದ್ದರು. ವಿಮಾನದಲ್ಲಿದ್ದ 242 ಜನರಲ್ಲಿ ಕೇವಲ ಓರ್ವ ಮಾತ್ರ ಬದುಕುಳಿದಿದ್ದರು. ವಿಮಾನವು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್ಗೆ ಹಾರುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು. ಇದೀಗ ರಷ್ಯಾದಲ್ಲಿ ಮತ್ತೊಂದು ಭೀಕರ ವಿಮಾನ ದುರಂತ ಸಂಭವಿಸಿದೆ.
ಇಂದು ಬೆಳಿಗ್ಗೆ ಕಣ್ಮರೆಯಾದ ಅಂಗಾರ ಏರ್ಲೈನ್ಸ್ ವಿಮಾನ ಪತನಗೊಂಡಿದೆ. ಪ್ರಾಥಮಿಕ ವರದಿಗಳ ಪ್ರಕಾರ ಯಾರೂ ಬದುಕುಳಿದಿಲ್ಲ ಎಂದು ರಷ್ಯಾದ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಂಗರಾ ಏರ್‌ಲೈನ್ಸ್ ನಿರ್ವಹಿಸುವ ರಷ್ಯಾದ ಆಂಟೊನೊವ್ -24 ವಿಮಾನವು 50 ಜನರನ್ನು ಹೊತ್ತೊಯ್ಯುತ್ತಿದ್ದಾಗ ಸಂಪರ್ಕವನ್ನು ಕಳೆದುಕೊಂಡಿತು. ಆ ಸಮಯದಲ್ಲಿ ವಿಮಾನದಲ್ಲಿ 43 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಇದ್ದರು ಎಂದು ವರದಿ ಮಾಡಿದೆ.
ನಿಮ್ಮ ಪ್ರತಿಕ್ರಿಯೆ ಏನು?






