ಪೊಲೀಸ್ ದಂಪತಿಗೆ ಸಿಕ್ತು ಮುಖ್ಯಮಂತ್ರಿ ಪದಕ: ಇದಪ್ಪಾ ಸಾಧನೆ ಎಂದ ನೆಟ್ಟಿಗರು!

ಎಪ್ರಿಲ್ 3, 2025 - 17:09
 0  24
ಪೊಲೀಸ್ ದಂಪತಿಗೆ ಸಿಕ್ತು ಮುಖ್ಯಮಂತ್ರಿ ಪದಕ: ಇದಪ್ಪಾ ಸಾಧನೆ ಎಂದ ನೆಟ್ಟಿಗರು!

ಬೆಂಗಳೂರು:- ಪೊಲೀಸ್‌ ಗಂಡ, ಹೆಂಡತಿಗೆ ಸಿಕ್ತು ಮುಖ್ಯಮಂತ್ರಿ ಪದಕ ಸಿಕ್ಕಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಶುಭಾಶಯ ಮಹಾಪೂರವನ್ನೇ ಹರಿಸಿದ್ದಾರೆ.

ಎಸ್, ಪೊಲೀಸ್‌ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪತಿ, ಪತ್ನಿ ಇಬ್ಬರೂ ಒಟ್ಟಿಗೆ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ. ಇನ್‌ಸ್ಪೆಕ್ಟರ್‌ ಶಿವರುದ್ರಪ್ಪ ಮೇಟಿ, ಡಿಎಂ ಪಿಎಸ್‌ಐ ಭವ್ಯ ದಂಪತಿ ಪೊಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿರುವ ದಂಪತಿಗೆ ಮುಖ್ಯಮಂತ್ರಿ ಪದಕ ನೀಡಿ ಗೌರವಿಸಲಾಯಿತು. 

2008 ರಲ್ಲಿ ರಿಸರ್ವ್ ಸಬ್ ಇನ್‌ಸ್ಪೆಕ್ಟರ್‌ ಆಗಿ ಶಿವರುದ್ರಪ್ಪ ಮೇಟಿ ಆಯ್ಕೆಯಾದರು. ಈ 
ಬ್ಯಾಚ್‌ನಲ್ಲಿ ಅತಿ ಚಿಕ್ಕ ವಯಸ್ಸಿನ ಸಬ್ ಇನ್‌ಸ್ಪೆಕ್ಟರ್‌ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು. ಕಲಬುರಗಿಯ ನಾಗನಹಳ್ಳಿ ಪೊಲೀಸ್ ಟ್ರೇನಿಂಗ್‌ನಲ್ಲಿ ತರಭೇತಿ ಪಡೆದು, 2010 ರಲ್ಲಿ ಸಿವಿಲ್ ಸಬ್ ಇನ್‌ಸ್ಪೆಕ್ಟರ್‌ ಆಗಿ ಆಯ್ಕೆಯಾದರು. ಮಂಗಳೂರು ಬರ್ಕೆ ಠಾಣೆಯಲ್ಲಿ ಇನ್‌ಸ್ಪೆಕ್ಟರ್‌ ಆಗಿ ಸೇವೆ ಸಲ್ಲಿಸುವಾಗ ಕಿಡಿಗೇಡಿಗಳಿಗೆ ದುಸ್ವಪ್ನರಾಗಿದ್ದರು.

ಭೂಗತ ಪಾತಕಿ ಬನ್ನಜೆ ರಾಜ್‌ನ ನಕಲಿ ಪಾಸ್‌ಪೋರ್ಟ್‌ಗೆ ಸಂಬಂಧಿಸಿದ ಕೇಸ್‌ನ ತನಿಖೆ, ಜಿಲ್ಲಾ ಕಾರಾಗ್ರಹದಲ್ಲಿ ನಡೆಯುವ ಅಕ್ರಮಗಳ ತಡೆ, ಕೋಮುಗಲಭೆ ತಡೆಗಟ್ಟುವಲ್ಲಿ ಯಶಸ್ವಿಯಾದರು. ನಂತರ ದಾವಣಗೆರೆ ಜಿಲ್ಲೆಯ ಅಜಾದ್ ನಗರ, ಸಂಚಾರ ಠಾಣೆ, ಚನ್ನಗಿರಿ, ಸಂತೆಬೆನೂರ್ ಠಾಣೆಯಲ್ಲಿ ಅತಿ ಹೆಚ್ಚು ಗಾಂಜಾವನ್ನು ವಶಪಡಿಕೊಂಡು, ಅಪರಾಧಿಗಳಿಗೆ ಶಿಕ್ಷೆ ಕೊಡಿಸಿದ್ದಾರೆ.

ಈ ಎಲ್ಲಾ ಸೇವೆಯನ್ನ ಗುರುತಿಸಿ ಇಂದು ಮುಖ್ಯಮಂತ್ರಿ ಪದಕ ನೀಡಿ ಗೌರವಿಸಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow