ನಿರುದ್ಯೋಗಿಗಳಿಗೆ ಬಂಪರ್ ಸುದ್ದಿ: ಬೆಂಗಳೂರಿನಲ್ಲಿ ಬೃಹತ್‌ ಕ್ಯಾಂಪಸ್ ತೆರೆಯಲಿದೆ ಸ್ಯಾಪ್‌ ಲ್ಯಾಬ್ಸ್, 15,000 ಉದ್ಯೋಗ ಸೃಷ್ಟಿ ನಿರೀಕ್ಷೆ!?

ಸೆಪ್ಟೆಂಬರ್ 30, 2024 - 08:03
 0  19
ನಿರುದ್ಯೋಗಿಗಳಿಗೆ ಬಂಪರ್ ಸುದ್ದಿ: ಬೆಂಗಳೂರಿನಲ್ಲಿ ಬೃಹತ್‌ ಕ್ಯಾಂಪಸ್ ತೆರೆಯಲಿದೆ ಸ್ಯಾಪ್‌ ಲ್ಯಾಬ್ಸ್, 15,000 ಉದ್ಯೋಗ ಸೃಷ್ಟಿ ನಿರೀಕ್ಷೆ!?

ನಿರುದ್ಯೋಗಿಗಳಿಗೆ ಬಂಪರ್ ಸುದ್ದಿ ಹೊರ ಬಿದ್ದಿದೆ. ಖ್ಯಾತ ಟೆಕ್ ಕಂಪನಿ ಸ್ಯಾಪ್‌ ಲ್ಯಾಬ್ಸ್‌ ಇಂಡಿಯಾ ಬೆಂಗಳೂರಿನಲ್ಲಿ ಇನ್ನೊಂದು ಬೃಹತ್‌ ಕಚೇರಿಯನ್ನು ತೆರೆಯಲಿದೆ. 80 ಮಿಲಿಯನ್‌ ಯೂರೋ ಅಂದರೆ ಸುಮಾರು 750 ಕೋಟಿ ರೂ. ವೆಚ್ಚದಲ್ಲಿ ಈ ಕ್ಯಾಂಪಸ್‌ ತೆರೆಯಲಿದ್ದು, 2025ರ ಎರಡನೇ ತ್ರೈಮಾಸಿಕದಲ್ಲಿ ಇದು ಕಾರ್ಯಾರಂಭ ಮಾಡಲಿದೆ. 

ಇದು ಬೆಂಗಳೂರಿನಲ್ಲಿ ಸ್ಯಾಪ್‌ ಲ್ಯಾಬ್ಸ್‌ ಇಂಡಿಯಾ ಕಂಪನಿಯ ಎರಡನೇ ಕಚೇರಿಯಾಗಿದೆ. ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿ ಅಂದರೆ ದೇವನಹಳ್ಳಿಯಲ್ಲಿ ಕಂಪನಿ ಈ ಕ್ಯಾಂಪಸ್‌ ಅನ್ನು ನಿರ್ಮಿಸುತ್ತಿದೆ. 41 ಎಕರೆ ವಿಶಾಲ ಜಾಗದಲ್ಲಿ ಈ ಬೃಹತ್‌ ಕ್ಯಾಂಪಸ್‌ ತಲೆ ಎತ್ತಲಿದ್ದು, ಬರೋಬ್ಬರಿ 15,000 ಜನರು ಇದರಲ್ಲಿ ಕಾರ್ಯ ನಿರ್ವಹಿಸಬಹುದಾಗಿ ಎಂದು ಕಂಪನಿ ಮಾಹಿತಿ ನೀಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಯಾಪ್‌ ಲ್ಯಾಬ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಗ್ರಾಹಕ ನಾವೀನ್ಯತೆ ಸೇವೆಗಳ ಮುಖ್ಯಸ್ಥೆ ಸಿಂಧು ಗಂಗಾಧರನ್, ಹೊಸ ಕ್ಯಾಂಪಸ್‌ನೊಂದಿಗೆ ಕಂಪನಿಯು ದೇಶದಲ್ಲಿ ತನ್ನ ಹೂಡಿಕೆಯನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ

ಬೃಹತ್‌ ಕ್ಯಾಂಪಸ್‌ ತೆರೆಯುವ ಮೂಲಕ ಕಂಪನಿಯು ಬೆಂಗಳೂರಿನಲ್ಲಿ 15,000 ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಎಂದರು. 

ನೂತನ ಕಚೇರಿಯ ಮೊದಲ ಹಂತ 2025ರಲ್ಲಿ ಸಿದ್ಧವಾಗಲಿದೆ. ಬೆಂಗಳೂರಿನಲ್ಲೇ ಸ್ಯಾಪ್‌ ಲ್ಯಾಬ್ಸ್‌ ಇಂಡಿಯಾದ ಅತಿ ದೊಡ್ಡ ಜಾಗತಿಕ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವೂ ಇದೆ. ಇದೀಗ ಇಲ್ಲೇ ಎರಡನೇ ಬೃಹತ್‌ ಕ್ಯಾಂಪಸ್‌ ತರೆಯಲಾಗುತ್ತಿದೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow