ಸೈಫ್ ಅಲಿಖಾನ್ ಮೇಲೆ ದಾಳಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮತ್ತೊಂದು ಸ್ಫೋಟಕ ಸತ್ಯ ಬಯಲು!

ಮುಂಬೈ: ಮನೆ ಒಳಗೆ ನುಗ್ಗಿ, ಹಣಕ್ಕಾಗಿ ಬೇಡಿಕೆ ಇಟ್ಟು ಆ ಬಳಿಕ ಸೈಫ್ ಅಲಿ ಖಾನ್ಗೆ ಚುಚ್ಚಿ ಹೋಗಿದ್ದ ವ್ಯಕ್ತಿ ಈಗ ಬಂಧನಕ್ಕೆ ಒಳಗಾಗಿದ್ದಾನೆ. ಈತನ ವಿಚಾರಣೆ ವೇಳೆ ಸಾಕಷ್ಟು ಶಾಕಿಂಗ್ ವಿಚಾರಗಳು ಹೊರ ಬೀಳುತ್ತಿವೆ. ಸೈಫ್ ಮನೆಕೆಲಸದಾಕೆಯ ಜೊತೆ ವಾಗ್ವಾದ ಮಾಡುತ್ತಿದ್ದ ಖದೀಮನೇ ಸೈಫ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ ಎಂಬ ಸತ್ಯ ಬಹಿರಂಗವಾಗಿದೆ.
ಈ ನಡುವೆ ಪೊಲೀಸರು ಸೈಫ್ ಪತ್ನಿ ಕರೀನಾ ಕಪೂರ್ ಮತ್ತು ಸೈಫ್ನ ಆಸ್ಪತ್ರೆ ಕರೆತಂದ ಆಟೋ ಚಾಲಕನ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಕಳ್ಳತನ ಮುಖ್ಯ ಉದ್ದೇಶವಾಗಿರಲಿಲ್ಲ ಎನ್ನುವುದು ಸ್ಪಷ್ಟವಾಗಿದೆ. ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿ ಚಾಕು ಇರಿದ ಘಟನೆ ಸಂಭವಿಸಿ ಐವತ್ತಕ್ಕೂ ಅಧಿಕ ಗಂಟೆಗಳಾಯಿತು ಆದರೆ ಇನ್ನು ಸರಿಯಾದ ಆರೋಪಿಯನ್ನು ಪೊಲೀಸರು ಬಂಧಿಸಿಲ್ಲ. ಶಂಕಿತನೊಬ್ಬನನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಈತ ಚಾಕು ಇರಿದ ವ್ಯಕ್ತಿ ಅಲ್ಲ. ಈತನಿಗೂ ಸೈಫ್ ಪ್ರಕರಣಕ್ಕೂ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ. ಚಾಕು ಇರಿದನಿಗಾಗಿ ಶೋಧ ಮುಂದುವರಿದಿದೆ.
ಸೈಫ್ ಮನೆಯಿಂದ ಬಾಂದ್ರಾ ರೈಲ್ವೆ ನಿಲ್ದಾಣದವರೆಗೂ ಇರುವ ಹಲವು ಸಿಸಿಟಿವಿಗಳನ್ನು ಪರಿಶೀಲಿಸಿರುವ ಪೊಲೀಸರಿಗೆ ಆರೋಪಿ ಹಲವು ಬಾರಿ ಬಟ್ಟೆ ಬದಲಿಸಿ ತಲೆಮರಿಸಿಕೊಂಡಿದ್ದಾರೆ. ಕಡೆಯದಾಗಿ ಬಾಂದ್ರಾ ರೈಲ್ವೆ ನಿಲ್ದಾಣದ ಬಳಿ ಕಾಣಿಸಿಕೊಂಡಿದ್ದು, ಆತ ಮುಂಬೈನಿಂದ ಕಾಲ್ಕಿತ್ತಿರಬಹುದು ಎಂದು ಹೇಳಲಾಗುತ್ತಿದೆ.
ಸದ್ಯ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರ ಕಾರ್ಯವೈಖರಿ ಬಗ್ಗೆ ಹಲವು ಆಕ್ಷೇಪ ಕೇಳಿ ಬಂದಿವೆ. ಇನ್ನೂ ಈ ಮಹತ್ವದ ಅವಧಿಯಲ್ಲಿ ಆರೋಪಿ ಮುಂಬೈ ಖಾಲಿ ಮಾಡಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಸದ್ಯ 20ಕ್ಕೂ ಅಧಿಕ ತಂಡ ರಚಿಸಿರುವ ಪೊಲೀಸರುವ ಚಾಕು ಇರಿತ ಹಂತಕನ ಬೆನ್ನು ಬಿದ್ದಿದ್ದಾರೆ.
ಇನ್ನು ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸೈಫ್ ಅಲಿ ಖಾನ್ ಪತ್ನಿ ಕರೀನಾ ಕಪೂರ್ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಇದರಲ್ಲಿ ಕರೀನಾ ಹಲವು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ದಾಳಿಕೋರ ಮನೆಯ ಒಳನುಗ್ಗಿದ ವೇಳೆ ಕಿರಿಯ ಮಗ ಜಹಾಂಗೀರ್ (ಜೆಹ್) ಮಲಗುವ ಕೋಣೆಯಲ್ಲಿ ಕಾಣಿಸಿಕೊಂಡಿದ್ದ. ಇದನ್ನು ಮೊದಲು ಮನೆಯಲ್ಲಿ ಕೆಲಸ ಮಾಡುವ ಸಹಾಯಕಿ ಗುರುತಿಸಿದಳು. ಈ ವೇಳೆ, ಮಾತಿನ ಚಕಮಕಿ ನಡೆಯಿತು.
ಇಬ್ಬರ ಗದ್ದಲದ ಬಳಿಕ ಎದ್ದು ಬಂದ ಸೈಫ್ ಮಹಿಳೆಯನ್ನು ರಕ್ಷಿಸಲು ಮಧ್ಯ ಪ್ರವೇಶಿಸಿದರು. ಈ ವೇಳೆ, ದಾಳಿಕೋರ ಸೈಫ್ಗೆ ಚಾಕು ಇರಿಯಲು ಆರಂಭಿಸಿದ. ನಾವು ಈ ಗದ್ದಲದ ನಡುವೆ ಮಕ್ಕಳನ್ನು ಸುರಕ್ಷಿತ ಕೊಠಡಿಗೆ ಕಳುಹಿಸಿದ್ದರು. ಕಾರು ಚಾಲಕ ಇಲ್ಲದ ಹಿನ್ನೆಲೆ ಸೈಫ್ ಅವರು ಮಗ ತೈಮೂರ್ ಜೊತೆಗೆ ಆಸ್ಪತ್ರೆ ಆಗಮಿಸಿದರು. ಆ ಸಂದರ್ಭದಲ್ಲಿ ಮನೆಯಲ್ಲಿ ತೆರೆದ ಸ್ಥಳದಲ್ಲಿ ಇರಿಸಲಾಗಿದ್ದ ಚಿನ್ನಾಭರಣಗಳನ್ನು ದಾಳಿಕೋರ ಮುಟ್ಟಲಿಲ್ಲ. ಹೀಗಾಗಿ ಕಳ್ಳತನದ ಉದ್ದೇಶ ಇತ್ತಾ? ಇಲ್ವಾ? ಎನ್ನುವ ಗೊಂದಲ ಇದೆ ಎಂದು ತಿಳಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






