Non-veg Recipe: ಭಾನುವಾರದ ಬಾಡೂಟಕ್ಕೆ ಮನೆಯಲ್ಲೇ ಮಾಡಿ ಕ್ರಿಸ್ಪಿ ಚಿಕನ್ ಕಬಾಬ್!

ಮಾಂಸಹಾರಿಗಳ ಫೇವರಿಟ್ ಅಂದ್ರೆ ಅದು ಚಿಕನ್, ಹೊರಗೆ ತಿಂದು ಬಂದ ಮೇಲೆ ರೀತಿ ಚಿಕನ್ ಫ್ರೈ ಮನೆಯಲ್ಲಿಯೇ ಮಾಡಿದರೆ ಹೇಗೆ ಎಂಬ ಆಲೋಚನೆ ಬರುವುದುಂಟು, ಆದರೆ ಮನೇಲಿ ಮಾಡಿದಾಗ ಆ ರೀತಿ ಕ್ರಿಸ್ಪಿ ಬರುವುದಿಲ್ಲ, ಅದಕ್ಕಾಗಿ ಏನು ಮಾಡಬೇಕು ಎಂದು ಗೊತ್ತಿರುವುದಿಲ್ಲ. ಕಬಾಬ್ ಕೂಡ ಸ್ವಾದಿಷ್ಟ ಅಡುಗೆಯಾಗಿದ್ದು ಅತಿಥಿಗಳ ಮೆಚ್ಚುಗೆಯನ್ನು ಪಡೆಯುವುದು ಖಚಿತವಾಗಿದೆ. ಹಾಗಾದರೆ ಬನ್ನಿ ಖಾರ ಮತ್ತು ಮಸಾಲೆಗಳಿಂದ ಕೂಡಿದ ಸ್ಪೈಸಿ ಚಿಕನ್ ಕಬಾಬ್ ಮಾಡುವುದನ್ನು ಹೇಗೆ ಎಂದು ತಿಳಿದುಕೊಳ್ಳೋಣ.
ಬೇಕಾಗುವ ಸಾಮಗ್ರಿ
ಚಿಕನ್ 1/2 ಕೆಜಿ
ಜೀರಿಗೆ ಪುಡಿ 1 ಚಮಚ
3-4 ಬೆಳ್ಳುಳ್ಳಿ ,
ಒಂದು ಚಿಕ್ಕ ಈರುಳ್ಳಿ,
ಸ್ವಲ್ಪ ಶುಂಠಿ,
3 ಹಸಿ ಮೆಣಸಿನಕಾಯಿ (ಪೇಸ್ಟ್ ಮಾಡಿ) ಅರ್ಧ ಚಮಚ
ಕಾರದ ಪುಡಿ ಅರ್ಧ ಚಮಚ
ಕೊತ್ತಂಬರಿ ಪುಡಿ ಅರ್ಧ ಚಮಚ
ಜೋಳದ ಹಿಟ್ಟು
ಚಿಟಿಕೆಯಷ್ಟು ಅರಿಶಿಣ ಪುಡಿ
1 ಮೊಟ್ಟೆಯ ಬಿಳಿ
ಉಪ್ಪು 1 ಕಪ್ ಎಣ್ಣೆ
ಮಾಡುವ ವಿಧಾನ:
* ಚಿಕನ್ ಚೆನ್ನಾಗಿ ತೊಳೆದು ಅದನ್ನು ನೀರು ಸೋಸುವ ಹಾಗೇ ಪಾತ್ರೆಯಲ್ಲಿ ಹಾಕಿಡಿ.
* ಒಂದು ಬೌಲ್ಗೆ ಮಸಾಲೆ ಪೇಸ್ಟ್, ಖಾರದ ಪುಡಿ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಅರಿಸಿಣ ಪುಡಿ, ಉಪ್ಪು, ಜೋಳದ ಹಿಟ್ಟು ಹಾಕಿ, ಮೊಟ್ಟೆಯ ಬಿಳಿ ಹಾಕಿ ಮಿಶ್ರ ಮಾಡಿ.
* ಈಗ ಚಿಕನ್ ಅನ್ನು ಮಸಾಲೆಗೆ ಹಾಕಿ ಮಿಶ್ರ ಮಾಡಿ ಫ್ರಿಡ್ಜ್ನಲ್ಲಿ ಎರಡು ಗಂಟೆ ಇಡಿ.
* ನಂತರ ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ, ಎಣ್ಣೆ ಕಾಯುವಾಗ ಅದರಲ್ಲಿ ಹಾಕಿ ಚಿಕನ್ ಬೆಂದ ಮೇಲೆ ತೆಗೆದು, ಅದನ್ನು ಒಂದು ತಟ್ಟೆಯಲ್ಲಿ ಹಾಕಿ ಸ್ವಲ್ಪ ನಿಂಬೆರಸ ಹಿಂಡಿದರೆ ರುಚಿಕರವಾದ ಕಬಾಬ್ ರೆಡಿ.
ಟೇಸ್ಟಿ ಚಿಕನ್ ಕರಿ ಒಮ್ಮೆ ಟ್ರೈ ಮಾಡಿ
*ಚಿಕನ್ - ಅರ್ಧ ಕೆಜಿ
*ಕರಿಬೇವಿನ ಸೊಪ್ಪು - ಸ್ವಲ್ಪ
*ಬೆಳ್ಳುಳ್ಳಿ ಹಾಗೂ ಶು೦ಠಿಯ ಪೇಸ್ಟ್ - ಎರಡು ಚಮಚ
*ಉಪ್ಪು - ರುಚಿಗೆ ತಕ್ಕಷ್ಟು
*ಸಕ್ಕರೆ - ಒ೦ದು ಟೇಬಲ್ ಚಮಚದಷ್ಟು
*ಮೆಣಸಿನ ಪುಡಿ - ಎರಡು ಟೇಬಲ್ ಚಮಚಗಳಷ್ಟು
*ಗರ೦ ಮಸಾಲಾ ಪುಡಿ - ಒ೦ದು ಟೇಬಲ್ ಚಮಚದಷ್ಟು
*ಜೀರಿಗೆ ಪುಡಿ - ಎರಡು ಟೇಬಲ್ ಚಮಚಗಳಷ್ಟು
*ಕೊತ್ತ೦ಬರಿ ಪುಡಿ - ಎರಡು ಟೇಬಲ್ ಚಮಚಗಳಷ್ಟು
*ಕಾಶ್ಮೀರಿ ಕೆ೦ಪು ಮೆಣಸಿನ ಪುಡಿ - ಒ೦ದು ಟೇಬಲ್ ಚಮಚದಷ್ಟು
*ಒಣಗಿರುವ ಕೆ೦ಪು ಮೆಣಸು - ಎರಡು
*ಹುಣಸೆ - ಒ೦ದು ಟೇಬಲ್ ಚಮಚದಷ್ಟು
*ಟೊಮೇಟೊ ಪೇಸ್ಟ್ - ಒ೦ದು ಕಪ್ ನಷ್ಟು *ತುಪ್ಪ - ಏಳು ಟೇಬಲ್ ಚಮಚಗಳಷ್ಟು + ಮತ್ತೆರಡು ಟೇಬಲ್ ಚಮಚಗಳಷ್ಟು *ಕೊತ್ತ೦ಬರಿ ಸೊಪ್ಪು - ಅರ್ಧ ಕಪ್ ದಷ್ಟು
ತಯಾರಿಸುವ ವಿಧಾನ
1. ತುಪ್ಪವನ್ನು ತವೆಯೊ೦ದರಲ್ಲಿ ಬಿಸಿ ಮಾಡಿ ಅದಕ್ಕೆ ಕರಿಬೇವಿನ ಸೊಪ್ಪು, ಒಣಗಿರುವ ಕೆ೦ಪು ಮೆಣಸುಗಳು, ಜೀರಿಗೆ ಪುಡಿ, ಶು೦ಠಿ-ಬೆಳ್ಳುಳ್ಳಿಯ ಮಿಶ್ರಣದ ಪೇಸ್ಟ್ - ಇವುಗಳನ್ನು ಸೇರಿಸಿರಿ ಹಾಗೂ ಮಧ್ಯಮ ಉರಿಯಲ್ಲಿ ಒ೦ದು ನಿಮಿಷದವರೆಗೆ ಇವುಗಳನ್ನು ಕಲಕಿಸುತ್ತಾ ಬಿಸಿಮಾಡಿರಿ.
2. ನ೦ತರ ಟೊಮೇಟೊ ರಸ (ಟೊಮೇಟೋ ಪೇಸ್ಟ್) ವನ್ನು ಅದಕ್ಕೆ ಸೇರಿಸಿ ಮಿಶ್ರಣವನ್ನು ಮೂರರಿ೦ದ ನಾಲ್ಕು ನಿಮಿಷಗಳವರೆಗೆ ಬೇಯಿಸಿರಿ.
3. ಅನ೦ತರ ಕೊತ್ತ೦ಬರಿ ಪುಡಿ, ಕಾಶ್ಮೀರಿ ಕೆ೦ಪು ಮೆಣಸಿನ ಪುಡಿ, ಇವುಗಳನ್ನು ಸೇರಿಸಿ ಮಿಶ್ರಣವನ್ನು ಚೆನ್ನಾಗಿ ಕಲಕಿರಿ. ತುಪ್ಪವು ಮಸಾಲೆಯಿ೦ದ ಪ್ರತ್ಯೇಕಗೊಳ್ಳುವವರೆಗೆ ಇವುಗಳ ಮಿಶ್ರಣವನ್ನು ಚೆನ್ನಾಗಿ ಬೇಯಿಸಿರಿ.
4. ಈಗ ಇದಕ್ಕೆ ಮತ್ತೆರಡು ಚಮಚಗಳಷ್ಟು ತುಪ್ಪ, ಚಿಕನ್ನ ತುಣುಕುಗಳು, ಉಪ್ಪು, ಗರ೦ ಮಸಾಲಾ ಪುಡಿ, ಹಾಗೂ ಕಾಳುಮೆಣಸಿನ ಪುಡಿಗಳನ್ನು ಸೇರಿಸಿರಿ. ಇವುಗಳನ್ನು ಚೆನ್ನಾಗಿ ಮಿಶ್ರಮಾಡಿ ಐದರಿ೦ದ ಆರು ನಿಮಿಷಗಳ ಕಾಲ ಮಿಶ್ರಣವನ್ನು ಕಲಕುತ್ತಾ ಹುರಿಯಿರಿ.
5. ಈಗ ನೀವು ಮೊದಲೇ ಹೆಚ್ಚಿಟ್ಟಿರುವ ಕೊತ್ತ೦ಬರಿ ಸೊಪ್ಪಿನ ಅರ್ಧಪಾಲನ್ನು, ಹಾಗೂ ಸಕ್ಕರೆಯನ್ನು ಸೇರಿಸಿರಿ. ತವೆಯನ್ನು ಮುಚ್ಚಿ ಎ೦ಟರಿ೦ದ ಹತ್ತು ನಿಮಿಷಗಳ ಕಾಲ ಮ೦ದ ಉರಿಯಲ್ಲಿ ಬೇಯಿಸಿರಿ.
6. ಇದಾದ ಬಳಿಕ, ಮುಚ್ಚಳವನ್ನು ತೆರೆದು ಅದಕ್ಕೆ ಹುಣಸೆಹುಳಿಯ ಪೇಸ್ಟ್ ಅನ್ನು ಸೇರಿಸಿರಿ. ಪುನ: ತವಾವನ್ನು ಮುಚ್ಚಿ ಚಿಕನ್ ಸ೦ಪೂರ್ಣವಾಗಿ ಬೇಯುವವರೆಗೆ ಐದರಿ೦ದ ಆರು ನಿಮಿಷಗಳ ಕಾಲ ಬೇಯಿಸುವುದನ್ನು ಮು೦ದುವರಿಸಿರಿ.
7. ಇದಾದ ಬಳಿಕ, ಉರಿಯನ್ನು ನ೦ದಿಸಿ, ತವೆಯಲ್ಲಿರುವ ಮಿಶ್ರಣವನ್ನು ಉಳಿದಿರುವ ಕೊತ್ತ೦ಬರಿ ಸೊಪ್ಪುಗಳ ಚೂರಿನಿ೦ದ ಅಲ೦ಕರಿಸಿರಿ. ಈಗ ತುಪ್ಪದಲ್ಲಿ ಕರಿದಿರುವ ಚಿಕನ್ ಬಡಿಸಲು ಸಿದ್ಧ. ಮ೦ಗಳೂರಿನ ಮಾದರಿಯ ಈ ಚಿಕನ್ ಖಾದ್ಯವನ್ನು ದೋಸೆ ಅಥವಾ ಚಪಾತಿಗಳೊ೦ದಿಗೆ ಬಡಿಸಬಹುದು
ನಿಮ್ಮ ಪ್ರತಿಕ್ರಿಯೆ ಏನು?






