ಮದುವೆಯಾಗಿದ್ರು ಮತ್ತೊರ್ವ ಯುವಕನ ಜೊತೆ ಲವ್ವಿ ಡವ್ವಿ: ಪ್ರಿಯಕರನ ಮೀಟ್ ಮಾಡಲು ಬಂದವಳು ಸೀದ ಸ್ಮಷಾಣಕ್ಕೆ!

ಮಂಡ್ಯ: ಪ್ರಿಯಕರನ ಮೀಟ್ ಮಾಡಲು ಬಂದವಳು ಸೀದ ಸ್ಮಷಾಣಕ್ಕೆ ಹೋಗಿರುವ ಘಟನೆ ಮಂಡ್ಯದ ಕೆಆರ್ ಪೇಟೆಯ ಕರೋಟಿ ಗ್ರಾಮದಲ್ಲಿ ನಡೆದಿದೆ. ಹಾಸನದ ಹೊಸಕೊಪ್ಪಲು ಗ್ರಾಮದ ಪ್ರೀತಿ (30) ಕೊಲೆಯಾದ ಮಹಿಳೆಯಾಗಿದ್ದು, ಮದುವೆಯಾಗಿದ್ರು ಮಂಡ್ಯದ ಕೆಆರ್ ಪೇಟೆಯ ಕರೋಠಿ ಗ್ರಾಮದ ಪುನೀತ್ ಜೊತೆ ಲವ್ವಿ ಡವ್ವಿ ಶುರುವಾಗಿದ್ದು,
ಇನ್ಸ್ಟಾದಲ್ಲಿ ಪರಿಚಯವಾಗಿ ನಂತ್ರ ಇಬ್ಬರ ನಡುವೆ ಲವ್ & ಆಫೇರ್ ಶುರುವಾಗಿದೆ. ಪುನೀತ್ ಹಾಗೂ ವಿವಾಹಿತ ಮಹಿಳೆ ಪ್ರೀತಿ ಇಬ್ಬರು ಇನ್ಸ್ಟಾಗ್ರಾಮ್ನಲ್ಲಿ ಇತ್ತೀಚೆಗೆ ಪರಿಚಯವಾಗಿದ್ದಾರೆ. ಗಂಡ, ಮಕ್ಕಳಿದ್ದರೂ ಪ್ರೀತಿ, ಪುನೀತ್ನನ್ನ ಲವ್ ಮಾಡಿದ್ದಾರೆ. ಪರಿಚಯವಾಗಿ ಹತ್ತು ದಿನ ಪ್ರೀತಿ, ಪ್ರೇಮ ಎಂದು ಸುತ್ತಾಡಿದ್ದಾರೆ.
ಅದೇ ರೀತಿಯಾಗಿ ಕಳೆದ ಭಾನುವಾರ ಒಟ್ಟಿಗೆ ಕಾರಿನಲ್ಲಿ ಮೈಸೂರು, ಮಂಡ್ಯ ಪ್ರವಾಸಿ ಸ್ಥಳಗಳನ್ನು ಸುತ್ತಾಡಿ ಫುಲ್ ಎಂಜಾಯ್ ಮಾಡಿದ್ದಾರೆ. ಪ್ರಿಯತಮೆ ಫೋನ್ಗೆ ಬಂದ ಕಾಲ್ನಿಂದಲೇ ಐನಾತಿ ಸಿಕ್ಕಿಬಿದಿದ್ದಾನೆ.
ಬಳಿಕ ಕೆ.ಆರ್.ಪೇಟೆಯ ಕತ್ತರಘಟ್ಟ ಅರಣ್ಯ ಪ್ರದೇಶದಲ್ಲಿ ಇಬ್ಬರ ನಡುವೆ ಜಗಳ ಆಗಿದೆ. ಅಲ್ಲೇ ಪ್ರೀತಿಯನ್ನ ಕೊಲೆ ಮಾಡಿದ ಪುನೀತ್, ಮೈಮೆಲಿದ್ದ ಚಿನ್ನಾಭರಣ ದೋಚಿದ್ದಾನೆ. ಬಳಿಕ ಕರೋಟಿ ಗ್ರಾಮದ ತನ್ನ ಜಮೀನಿನಲ್ಲಿ ಶವ ಬಿಚ್ಚಿಟ್ಟಿದ್ದಾನೆ. ಆದಿಚುಂಚನಗಿರಿ ಆಸ್ಪತ್ರೆ ಶವಾಗಾರಕ್ಕೆ ಪ್ರೀತಿ ಮೃತ ದೇಹ ಶಿಫ್ಟ್ ಆಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






