ವಿರಾಟ್ ಕೊಹ್ಲಿ, ಅಬ್ದುಲ್ ರಜಾಕ್ ಜತೆ ಲವ್ವಿ ಡವ್ವಿ ಗಾಸಿಪ್: ಕೊನೆಗೂ ವದಂತಿಗಳಿಗೆ ತಮನ್ನಾ ಸ್ಪಷ್ಟನೆ

ಆಗಸ್ಟ್ 6, 2025 - 09:20
 0  24
ವಿರಾಟ್ ಕೊಹ್ಲಿ, ಅಬ್ದುಲ್ ರಜಾಕ್ ಜತೆ ಲವ್ವಿ ಡವ್ವಿ ಗಾಸಿಪ್: ಕೊನೆಗೂ ವದಂತಿಗಳಿಗೆ ತಮನ್ನಾ ಸ್ಪಷ್ಟನೆ

ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಇತ್ತೀಚೆಗೆ ಕೇಳಿಬಂದಿರುವ ಗಾಸಿಪ್ಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇತ್ತೀಚೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ನಟ ವಿಜಯ್ ವರ್ಮಾ, ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಗೂ ಪಾಕ್ ಕ್ರಿಕೆಟರ್ ಅಬ್ದುಲ್ ರಜಾಕ್ ಸಂಬಂಧಿತ ಗಾಸಿಪ್ಗಳಿಗೆ ತೆರೆ ಎಳೆದಿದ್ದಾರೆ.

ತಮನ್ನಾ ಭಾಟಿಯಾ ಕೆಲ ತಿಂಗಳ ಹಿಂದೆ ವಿಜಯ್ ವರ್ಮಾ ಜೊತೆ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿಗಳು ಹರಿದಿದ್ದವು. ಬಳಿಕ ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಇದೇ ಸಂದರ್ಭದಲ್ಲಿ, ವಿರಾಟ್ ಕೊಹ್ಲಿಯ ಜೊತೆಗೆ ಸಹ ತಮನ್ನಾ ಭಾಟಿಯಾ ಸಂಬಂಧ ಹೊಂದಿದ್ದಾರೆ ಎಂಬ ಗಾಸಿಪ್ ಕಳೆದ ಕೆಲ ವರ್ಷಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿಬರುತ್ತಿತ್ತು.

ಕುರಿತು ಪ್ರತಿಕ್ರಿಯೆ ನೀಡಿದ ತಮನ್ನಾ, “ನಾನು ವಿರಾಟ್ ಅವರನ್ನು ಕೇವಲ ಒಮ್ಮೆ ಮಾತ್ರ ಜಾಹೀರಾತು ಶೂಟಿಂಗ್ ವೇಳೆ ನೋಡಿದ್ದೆ. ಶೂಟಿಂಗ್ ಮುಗಿದ ಬಳಿಕ ಅವರೊಂದಿಗೆ ಮಾತುಕತೆ ಅಥವಾ ಭೇಟಿಯೇ ಆಗಿಲ್ಲ. ರೀತಿಯ ಅವಾಸ್ತವ ಸುದ್ದಿಗಳು ನನಗೆ ನಿಜಕ್ಕೂ ಬೇಸರ ಉಂಟುಮಾಡುತ್ತವೆ" ಎಂದರು.

ಅಷ್ಟೇ ಅಲ್ಲ, ಪಾಕ್ ಕ್ರಿಕೆಟರ್ ಅಬ್ದುಲ್ ರಜಾಕ್ ಜೊತೆ ತಮನ್ನಾ ಮದುವೆ ಆಗಿದ್ದಾರೆ ಎಂಬ ವದಂತಿಗಳು ಕೂಡ ಹರಿದಿದ್ದವು. ಬಗ್ಗೆ ಸ್ಪಷ್ಟನೆ ನೀಡಿದ ತಮನ್ನಾ, "ಒಂದು ಆಭರಣ ಮಳಿಗೆ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಮಾತ್ರ ಅಬ್ದುಲ್ ರಜಾಕ್ ಅವರನ್ನು ಭೇಟಿಯಾಗಿದ್ದೆ. ಇತರ ಯಾವುದೇ ಸಂಬಂಧಗಳಿಲ್ಲ" ಎಂದು ಹೇಳಿದ್ದಾರೆ.

ಇಲ್ಲಸಲ್ಲದ ಗಾಸಿಪ್ಗಳು ತನ್ನ ಖಾಸಗಿ ಜೀವನವನ್ನು ಬಿಟ್ಟಿ ಗೋಜಿ ಎಳೆಯುವುದಾಗಿ ನಟಿ ತಮನ್ನಾ ಭಾಟಿಯಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow