R Ashwin: ಅಂತಾರಾಷ್ಟ್ರೀಯ ಎಲ್ಲಾ ಮಾದರಿ ಕ್ರಿಕೆಟ್ʼಗೂ ವಿದಾಯ ಘೋಷಿಸಿದ ಆರ್ ಅಶ್ವಿನ್!

ರವಿಚಂದ್ರನ್ ಅಶ್ವಿನ್ ಸದ್ಯ ಭಾರತದ ಅಗ್ರಮಾನ್ಯ ಸ್ಪಿನ್ ಬೌಲರ್. ನೇರಾನೇರ ವ್ಯಕ್ತಿತ್ವದವರು. ಯಾವ ಮುಚ್ಚುಮರೆ ಇಲ್ಲದೇ ಮನಸಿನ ಮಾತುಗಳನ್ನ ಹೇಳುವ ಸಾಮರ್ಥ್ಯ ಇರುವವರು. ಇದೀಗ ತಮ್ಮ 38ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಎಲ್ಲಾ ಮಾದರಿಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ.
106 ಟೆಸ್ಟ್ ಪಂದ್ಯದಲ್ಲಿ 24ರ ಸರಾಸರಿಯಲ್ಲಿ 537 ವಿಕೆಟ್‌ಗಳೊಂದಿಗೆ ಅಶ್ವಿನ್ ತನ್ನ ಟೆಸ್ಟ್ ವೃತ್ತಿಜೀವನವನ್ನು ಅಂತ್ಯಗೊಳಿಸಿದ್ದು. ಅನಿಲ್ ಕುಂಬ್ಳೆ ನಂತರ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಎರಡನೇ ಆಟಗಾರ ಎಂಬ ಕೀರ್ತಿಗೆ ಅಶ್ವಿನ್ ಪಾತ್ರರಾಗಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೂರು ಪಂದ್ಯಗಳಲ್ಲಿ ಕೇವಲ 1 ವಿಕೆಟ್ ಪಡೆದಿದ್ದು ಅಶ್ವಿನ್. 53 ರನ್ಗಳನ್ನು ನೀಡಿದ್ದರು. ಹಿಂದಿನ ಟೆಸ್ಟ್ ಸರಣಿಯಲ್ಲಿಯೂ ಕಳಪೆ ಫಾರ್ಮ್ ತೋರಿಸಿದ್ದ ಅಶ್ವಿನ್ ಅಂತರ್ ರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ನವೆಂಬರ್ 6 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದೆಹಲಿಯಲ್ಲಿ ನಡೆದ ಟೆಸ್ಟ್ ಮ್ಯಾಚ್ ಮೂಲಕ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಗಳಕ್ಕೆ ಪದಾರ್ಪಣೆ ಮಾಡಿದ್ದರು.ಒಟ್ಟು 106 ಟೆಸ್ಟ್ ಮ್ಯಾಚ್ಗಳನ್ನು ಆಡಿರುವ ಅಶ್ವಿನ್ ಒಟ್ಟು 537 ವಿಕೆಟ್ಗಳನ್ನು ಕಬಳಿಸಿದ್ದರು. ಐದು ದಿನದ ಟೆಸ್ಟ್ ಮಾದರಿಯ ಕ್ರಿಕೆಟ್ನಲ್ಲಿ ಕುಂಬ್ಳೆ ಈ ಹಿಂದೆ 619 ವಿಕೆಟ್ಗಳನ್ನು ಉರುಳಿಸಿ ಸಾಧನೆ ಮಾಡಿದ್ದರು.
ನಿಮ್ಮ ಪ್ರತಿಕ್ರಿಯೆ ಏನು?






